ಪರುಶುರಾಂಪುರ ಕೆರೆ ಜೋಗು : ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ : ತಹಶೀಲ್ದಾರ್ ಸ್ಪಷ್ಟನೆ

ಚಳ್ಳಕೆರೆ : ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರವ ವರುಣರಾಯನಿಗೆ ರಾಜ್ಯದ ಜನತೆ ಹೈರಾಣಾಗಿದ್ದಾರೆ.


ಇನ್ನೂ ಕೆಲವು ಕಡೆಗಳಲ್ಲಿ ಜಲಾವೃತವಾದ ನಗರಗಳನ್ನು ಕೂಡ ಕಾಣಬಹುದಾಗಿದೆ ಈಗೇ ಸುಮಾರು 88 ವರ್ಷಗಳ ಬಳಿಕ ವಾಣಿ ವಿಲಾಸ ಸಾಗರದ ಜಲಾಶ ಕೊಡಿ ಬಿದ್ದು ಬಯಲು ಸೀಮೆಯ ಜನರು ಸಂತಸಗೊAಡಿದ್ದಾರೆ,

ಅದೇ ರೀತಿಯಲ್ಲಿ ಜಿಲ್ಲೆಯ ಗೋನೂರು ಕೆರೆ, ದ್ವಾಮವ್ವನಹಳ್ಳಿ, ಮಲ್ಲಾಪುರ ಕೆರೆ, ಚಿಕ್ಕಮಧುರೆ, ಕಲ್ಲಹಳ್ಳಿ, ನಂತರ ದೊಡ್ಡೆರೆ ಕೆರೆ, ಹಾಗೂ ರಾಣಿಕೆರೆಯೂ ಕೂಡ ಕೋಡಿ ಬಿದ್ದು ಬಯಲು ಸೀಮೆ ಹಸಿರುಕರಣಕ್ಕೆ ನಾಂಧಿಹಾಡಿದೆ,
ಇನ್ನೂ ತಾಲೂಕಿನ ಪರಶುರಾಂಪುರ ಹೋಬಳಿಯ ಪರುಶುರಾಂಪುರ ಕೆರೆ ಕೋಡಿ ಬಿದ್ದು ಕೋಡಿಯಲ್ಲಿ ಮೂರು ಅಡಿ ನೀರು ಹಾರಿಯುತ್ತಿರುವುದರಿಂದ ಪಾವಗಡ ಕಡೆಗೆ ಹೋಗುವ ಸಾರ್ವಜನಿಕರಿಗೆ ತೊಂದರೆಯಾಗಿದೆ,

ಇನ್ನೂ ಪಾವಗಡ ಮಾರ್ಗ ವಾಗಿ ಓಡಾಡುವ ಸಾವರಿಗೆ ನೀರಿನ ಹರಿವು ಹೆಚ್ಚಾಗಿರುವುದರಿಂದ ರಸ್ತೆಯಲ್ಲಿ ವಾಹನ ಚಲಿಸುವುದು ಕಷ್ಟಸಾಧ್ಯವಾಗಿದೆ ಆದ್ದರಿಂದ ಇಲ್ಲಿನ ಗ್ರಾಮಸ್ಥರ ದೂರಿನ ಮೇರೆಗೆ ತಹಶೀಲ್ದಾರ್ ಎನ್.ರಘುಮೂರ್ತಿ ಬೇಟಿ ನೀಡಿ ಪರೀಶಿಲನೆ ನಡೆಸಿ ನಂತರ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ರವಿಕುಮಾರ್ ಅವರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಎನ್ ರಘುಮೂರ್ತಿ , ಈ ಭಾಗದಲ್ಲಿನ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ 20ವರ್ಷಕ್ಕೂ ಮೇಲ್ಪಟ್ಟ ಕೆಲವು ಕೆರೆಗಳು ತುಂಬಿದ್ದು ಈ ಕೆರೆ ಏರಿಯಲ್ಲಿ ಸಹಜವಾಗಿ ಜೋಗು ನೀರು ಹರಿಯುತ್ತಿದೆ ಇದರಿಂದ ಜನರು ಸುಖ ಸುಮ್ಮನೆ ಆತಂಕ ಗೊಳ್ಳುವುದು ಬೇಡ ಈ ಬಗ್ಗೆ ತಜ್ಞರ ಅಭಿಪ್ರಾಯವನ್ನು ಕೂಡ ಪಡೆಯಲಾಗಿದೆ
ಕೆರೆ ಏರಿ ದಂಡೆಯ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಲ್ಲಿರಬೇಕು ಇರದ ಹೊರತಾಗಿಯೂ ಯಾವುದಾದರೂ ಅನಾನುಕೂಲಕರವಾದಲ್ಲಿ ತಕ್ಷಣ ತಶಿಲ್ದಾರರನ್ನು ಸಂಪರ್ಕಿಸಬೇಕು ದೂರವಾಣಿ ಸಂಖ್ಯೆ 9448530055 ಆಗಿದ್ದು ನಿರಂತರ ಸಂಪರ್ಕದಲ್ಲಿರುತ್ತದೆ
ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ನೆರವು ನೀಡಲು ಮುಂದೆ ಬರಬೇಕು ಮತ್ತು ಸದಾ ಸಿದ್ದರಿರಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಅಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ರವಿಕುಮಾರ್, ಉಪ ತಹಸಿಲ್ದಾರ್ ಮೋಹನ್ ಕುಮಾರ್ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!