ಆಧಾರ್ ಜೊತೆ -ವೋಟರ್ ಐಡಿ ಜೋಡಣೆ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಆಧಾರ್ ಜೊತೆ -ವೋಟರ್ ಐಡಿ ಜೋಡಣೆಯಲ್ಲಿ ಯಾವುದೇ ತಪ್ಪು ನುಸುಳಬಾರದು, ನಕಲಿ ಮತದಾನ ವಾಗಬಾರದು ಎಂಬ ಕಾಳಜಿಯಿಂದ ಸರಕಾರ ಈ ಯೋಜನೆ ರೂಪಿಸಿ, ಸರಕಾರಿ ಶಾಲಾ ಶಿಕ್ಷಕರ ಹೆಗಲಿಗೆ ಹೊರಿಸಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ನಗರದಲ್ಲಿ ಕಂದಾಯ ಇಲಾಖೆ, ಚುನಾವಣೆ ಶಾಖೆ, ನಗರಸಭೆ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಮತದಾರರ ಚೀಟಿಗೆ ಆಧಾರ್ ನಂಬರ್ ಜೋಡಿಸುವ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. ಶಿಕ್ಷಕರಿಗೆ ತರಬೇತಿಯನ್ನು ನೀಡಿ ಶಿಕ್ಷಕರಿಗೆ ವಾರಕ್ಕಿಷ್ಟು ಎಂಬ ಗುರಿಯನ್ನೂ ನಿಗದಿಪಡಿಸಲಾಗಿದೆ. ಈ ಗುರಿ ಸಾಧನೆಗೆ ಶಿಕ್ಷಕರು ತಮ್ಮೆಲ್ಲಾ ಕೆಲಸವನ್ನೂ ಬದಿಗೊತ್ತಿ ಮತದಾರರ ಬೆನ್ನು ಹತ್ತುವುದು ಅನಿವರ‍್ಯವಾಗಿದೆ.
ಆಧಾರ್ ಲಿಂಕ್ ಹೊಣೆ ಹೊತ್ತಿರುವ ಶಿಕ್ಷಕರು ಪ್ರತಿಯೊಬ್ಬ ಮತದಾರನಿಗೆ ಕರೆ ಮಾಡಿ ಆಧಾರ್ ಜತೆ ವೋಟರ್ ಐಡಿ ಜೋಡಿಸಲು ಮನವಿ ಮಾಡಿದರೂ ಯಾರೊಬ್ಬರೂ ಓಗೊಡುತ್ತಿಲ್ಲ. ಬಹುತೇಕ ಮಂದಿ ತಾವು ಊರಿನಲ್ಲಿಲ್ಲ ಬೇರೆ ಊರಿನಲ್ಲಿ ನೆಲೆಸಿದ್ದು ಮತದಾನಕ್ಕೆ ಮಾತ್ರ ಊರಿಗೆ ಬರುತ್ತಿದ್ದೆವೆ ಎಂಬ ನೆಪಹೇಳಿ ಸಾಗಹಾಕಲು ಯತ್ನಿಸುತ್ತಿದ್ದಾರೆ.
ನೀವೇ ಬರುವುದು ಬೇಡ, ನಿಮ್ಮ ಆಧಾರ್ ನಂಬರ್ ಕೊಟ್ಟರೂ ಸಾಕು ಎಂದು ಶಿಕ್ಷಕರು ಮನವಿ ಮಾಡಿದರೂ ಕೇಳುತ್ತಿಲ್ಲ. ಇದರಿಂದ ಜೋಡಣೆ ಪ್ರಕ್ರಿಯೆ ಶಿಕ್ಷಕರಿಗೆ ತಲೆನೋವಿನ ವಿಷಯವಾಗಿದೆ.
ಆನ್‌ಲೈನ್‌ನಲ್ಲೂ ಆಧಾರ್ ಲಿಂಕ್
ವೋಟರ್ ಐಡಿ-ಆಧಾರ್ ಲಿಂಕ್‌ಗೆ ಮತದಾರರು ಕಚೇರಿ ಅಲೆಯಬೇಕಿಲ್ಲ. ತಮ್ಮ ಬಳಿ ಇರುವ ಮೊಬೈಲ್ ಮೂಲಕ ಸುಲಭವಾಗಿ ಲಿಂಕ್ ಮಾಡಬಹುದು. ವೋಟರ್ಸ್ ಹೆಲ್ಪ್ ಲೈನ್ ಆಪ್ ಮೂಲಕ ಮತದಾರರ ಚೀಟಿಗೆ ಆಧಾರ್ ಲಿಂಕ್ ಮಾಡಬಹುದು. ಆಪ್‌ನಲ್ಲಿ ಫಾಂ-6ಬಿಯನ್ನು ಸೆಲೆಕ್ಟ್ ಮಾಡಿ ಫೋನ್ ನಂಬರ್ ಹಾಕಿ, ನಂತರ ಆಧಾರ್ ನಂಬರ್ ಹಾಕಿದರೆ ಮತದಾರರ ಚೀಟಿಗೆ ಲಿಂಕ್ ಆಗುತ್ತದೆ. ಇದರ ಬಗ್ಗೆ ಮಾಹಿತಿಯೂ ಲಭ್ಯವಾಗುತ್ತದೆ.
ನಾವೇಲ್ಲಾರೂ ನಗರದ ಮನೆಮನೆಗೂ ಹೋಗಿ ಆಧಾರ್ ಕೇಳಿದರೆ ಅನುಮಾನ ಪಡುತ್ತಿದ್ದಾರೆ ಇದರಿಂದ ಇಂದು 9 ರಿಂದ ಸಂಜೆ 5ರ ವರೆಗೂ ಮತದಾರರ ಚೀಟಿಗೆ ಆಧಾರ್ ಲಿಂಕ್ ಮಾಡುವ ಕಾರ್ಯ ನಡೆಯತ್ತದೆ ಎಂದರು.
ಪೌರಯುಕ್ತ ಸಿ.ಚಂದ್ರಪ್ಪ ಮಾತನಾಡಿ ನಗರದಲ್ಲಿ ಮತದಾರರ ಚೀಟೆಗೆ ಆಧಾರ್ ನಂಬರ್ ಜೋಡಣೆ ಮಾಡಲು ಉದ್ದೇಶದಿಂದ ಎಲ್ಲಾ ಅಧಿಕಾರಿಗಳು, ಶಿಕ್ಷಕರು ಬಿಎಲ್‌ಓಗಳು ಮನೆ ಮನೆಗಳಿಗೆ ತೆರಳಿ ಮತದಾರ ಚಿಟಿಗೆ ಆಧಾರ್‌ಲಿಂಕ್ ಮಾಡಲಾಗುತ್ತಿದೆ ಎಂದರು.
ಬಾಕ್ಸ್ ಮಾಡಿ :
ನಕಲಿ ಮತದಾನ ತಪ್ಪಿಸುವ ಉದ್ದೇಶದಿಂದ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಿಸುವ ಕಾರ್ಯಕ್ಕೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ ಆದರೆ ತಾಲ್ಲೂಕಿನಲ್ಲಿ ನಿರೀಕ್ಷೆ ಮಟ್ಟದಲ್ಲಿ ಕಾರ್ಯವಾಗುತ್ತಿಲ್ಲಾ ಈಗಾಗಲೆ ಗ್ರಾಮೀಣ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಕಾರ್ಯವಾಗುತ್ತಿದೆ ಆದರೆ ನಗರದಲ್ಲಿ ಸಂಪೂರ್ಣ ಹಿಂದೂಳಿದಿದೆ.—
ತಹಶೀಲ್ದರ್ ಎನ್.ರಘುಮೂರ್ತಿ.
ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಎಸಿಡಿಪಿ ನವೀನ್, ನಗರಸಭೆ ಅರೋಗ್ಯಾಧಿಕಾರಿ ಮಹಾಲಿಂಗಪ್ಪ, ಗ್ರಾಮಲೆಕ್ಕಿಗರಾದ ಪ್ರಕಾಶ, ಉಮೇಶ, ಹಾಗೂ ಬಿಎಲ್‌ಓಗಳು ನಗರಸಭೆ ಅಧಿಕಾರಿಗಳು ಶಿಕ್ಷಕರು ಇದ್ದರು.