ವಿಕಲಚೇತನರಿಗೆ 99 ಉಚಿತ ಬೈಸಿಕಲ್ ವಿತರಿಸಿದ :ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ವಿಕಲಚೇತನರು ದೇಹದÀಲ್ಲಿ ಮಾತ್ರ ವಿಕಲತೆಯನ್ನು ಹೊಂದಿರುತ್ತಾರೆ ಇವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು, ರಾಜಕೀಯವಾಗಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.


ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ 99 ಬೈಸಿಕಲ್ ವಿತರಿಸಿ ಮಾತನಾಡಿದರು.


ಅಂಗವಿಕಲರು ಸಹ ಮನುಷ್ಯರೇ ಅವರಿಗೂ ಸಹ ಭಾವನೆಗಳಿಗೆ ಸ್ಪಂಧಿಸುವ ಬೌದ್ದಿಕ ಸಾಮರ್ಥ್ಯವಿದೆ, ಅವರಿಗೂ ಕೂಡ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ, ವಿಕಲಚೇತನರಿಗೆ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ ಇಂತಹ ಅನುಕೂಲಗಳನ್ನು ಬಳಸಿಕೊಳ್ಳಬೇಕು ಗ್ರಾಮೀಣ ಭಾಗದಲ್ಲಿ ಅಂಗವಿಕಲರು ಹೆಚ್ಚಿದ್ದು ಸರ್ಕಾರವು ಸಹ ಇಂತವರನ್ನು ಗುರುತಿಸುವ ಕೆಲಸವಾಗುತ್ತಿದೆ ಹಾಗೆ ಸರ್ಕಾರ ಯೋಜನೆಡಿಯಲ್ಲಿ ಸಿಗುವಂತಹ ಅನುಕೂಲಗಳ ಸದ್ಬಳಕೆ ಯಾವರೀತಿಯಾಗಿ ಸಿಗಬೇಕು ಎಂಬುದರ ಸಮಗ್ರ ಮಾಹಿತಿ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವೈಶಾಲಿ ಮಾತನಾಡಿ, ತಾಲೂಕಿನ ವಿಕಲ ಚೇತನರಿಗೆ ಇಲಾಖೆವತಿಯಿಂದ ಹಾಗೂ ಡಿಎಂಎಪ್‌ಟಿ ಯೋಜನೆಯಿಂದ ಸುಮಾರು 99 ಬೈಸಿಕಲ್ ಗಳನ್ನು ಇಂದು ವಿಕಲ ಚೇತನರಿಗೆ ಹಸ್ತಾಂತರಿಸಲಾಗುವುದು ಜೊತೆಗೆ ಅಂಧ ವಿದ್ಯಾರ್ಥಿಗಳಿಗೆ ವ್ಯಾಸಂಕ್ಕೆ ಅನುಕೂಲವಾಗಲೆಂದು ಸುಮಾರು 4 ಲ್ಯಾಪ್ ಟಾಪ್, 1 ಬ್ರೆöÊಲ್ ಕಿಟ್, 1ಬಟ್ಟೆ ಹೊಲಿಗೆ ಯಂತ್ರ, 50 ಸಾವಿರ ಮೊತ್ತದ ವಿವಾಹ ಪ್ರೋತ್ಸವ ಯೋಜನೆಯನ್ನು ಇಂದು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯೆ ಜೈತಯಂಬಿ, ಸಿಡಿಪಿಓ ಕೃಷ್ಣಾಪ್ಪ, ಎಂಆರ್.ಡ್ಲೂö್ಯ ಕಾರ್ಯಕರ್ತ ನರಸಿಂಹಮೂರ್ತಿ, ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದ ವಿಆರ್‌ಡ್ಲೂ, ಹಾಗೂ ಯುಆರ್‌ಡ್ಲೂö್ಯ ಕಾರ್ಯಕರ್ತರು, ಪೋಷಕರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!