ಶಿಕ್ಷಕರು ಪಠ್ಯೆತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಶಿಕ್ಷಕರು ವಿಧ್ಯಾರ್ಥಿಗಳ ಸಾಮಾರ್ಥ್ಯವನ್ನು ಅರಿತು, ಅವರ ಸರ್ವತೋಮುಖ ಬೆಳವಣೆಗೆಗೆ ಶ್ರಮಿಸಬೇಕು ಸಮಾಜದಲ್ಲಿ ಎಲ್ಲಾ ಹುದ್ದೆಗಳಿಗಿಂತ ಶಿಕ್ಷಕರ ಹುದ್ದೆ ಅತ್ಯಂತ ಮಹತ್ವ ಹಾಗೂ ಪವಿತ್ರವಾದುದು, ಶಿಕ್ಷಣ ಹುದ್ದೆ ಉತ್ತಮ ಸ್ಥಾನ ಪಡೆದದ್ದು ಶಿಕ್ಷಕರು ತಮ್ಮ ಮೇಲಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.


ಅವರು ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣ ಜಯಂತಿಯ ಅಂಗವಾಗಿ ಮಾತನಾಡಿ, ಶಿಕ್ಷಕರ ವೃತ್ತಿ ಅತ್ಯಂತ ಜವಾಬ್ದಾರಿ ಸ್ಥಾನವಾಗಿದ್ದು ಪ್ರತಿಯೊಬ್ಬ ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ಹೆಚ್ಚಿನ ಅಧ್ಯಯನ ತೊಡಗುವ ಅಗತ್ಯವಿದೆ. ಅತಂಹ ಶಿಕ್ಷಕರು ಸರ್ವತೊಮುಖವಾಗಿ ಮುಂದೆ ಬರಲು ಸಾಧ್ಯವಿದೆ. ಶಿಕ್ಷಕರು ಎಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠಮಾಡಿ ಮನೆಗೆ ಹೋಗುವ ನೌಕರಿ ವರ್ಗದವರಾಗದೆ, ದೇಶವನ್ನು ನಿರ್ಮಾಣ ಮಾಡುವ ಒಬ್ಬ ವ್ಯಕ್ತಿಯನ್ನು ಸೃಷ್ಠಿಮಾಡುವ ವ್ಯಕ್ತಿತ್ವವನ್ನು ತಯಾರು ಮಾಡಿ ಎಂದರು.

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ವೃತ್ತಿಯನ್ನು ಯಾರು ಗೌರವಿಸುತ್ತಾರೋ ಅಂತವರು ಉನ್ನತ ಮಟ್ಟಕ್ಕೆ ಹೊಗುತ್ತಾರೆ. ಶಾಲಾ ಮಕ್ಕಳನ್ನು ತಮ್ಮ ಸ್ವತಃ ಮಕ್ಕಳಂತೆ ಯಾರು ಕಾಣುತ್ತಾರೋ ಅವರು ಮಾದರಿ ಶಿಕ್ಷಕರಾಗುತ್ತಾರೆ. ಇಂದು ಖಾಸಗಿ ಶಾಲೆಗಳೆಗಳನ್ನು ನಾಚಿಸುವಂತೆ ಸರ್ಕಾರಿ ಶಾಲೆಗಳು ಪ್ರಗತಿಯಲ್ಲಿ ಮುಂದೆ ತಲುಪಿವೆ, ಖಾಸಗಿ ಶಾಲೆಗೆ ಪೈಪೋಟಿ ನೀಡುವಲ್ಲಿ ಸರ್ಕಾರಿ ಶಾಲೆಯ ಮ್ಕಕಳು ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವAತೆ ಶಿಕ್ಷಕ ಪ್ರೆರಕ ಶಕ್ತಿಯಾಗಿರಬೇಕು ಎಂದರು.

ಉಪನ್ಯಾಸ ನೀಡಿದ ಚಿತ್ರದುರ್ಗ ಸರಕಾರಿ ಕಲಾ ಕಾಲೇಜ್ ಸಹ ಪ್ರಾಧ್ಯಾಪಕಿ ಆರ್.ತಾರೀಣಿ ಶುಭಾದಾಯಿನಿ ರವರು, ಭಾರತೀಯ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಹುಟ್ಟಿದ ಪ್ರತಿಯೊಬ್ಬರಲ್ಲೂ ಗುರುತ್ವವನ್ನು ನಾವು ಕಾಣಬಹುದು. ಶಿಕ್ಷಕ ಮೊದಲು ಇತರರನ್ನು ಗೌರವಿಸುವ ಮನೋಭಾವ ಹೊಂದಿರಬೇಕು ಆದಾಗ ಮಾತ್ರ ಶಿಕ್ಷಕರಿಗೆ ಗೌರವ ತಾನಾಗಿಯೇ ಹೊಲಿಯುತ್ತದೆ, ಗುರು ಮೊದಲೋ, ಶಿಷ್ಯ ಮೊದಲೋ ಎಂಬ ನಿಲುವು ಇದೂವರೆಗೂ ತರ್ಕಕ್ಕೆ ಸಿಲಕದ್ದಾಗಿದೆ, ಹಿಂದಿನ ಕಾಲದಲ್ಲಿ ಅನಾಕ್ಷರಸ್ಥ ಜಾತಿವಾದಗಳಾದರೆ ಇಂದು ಅಕ್ಷರಸ್ಥ ಜಾತಿವಾದಿಗಳಾಗಿದಾರೆ, ಭ್ರಷ್ಟಚಾರವನ್ನು ತೊಲಗಿಸುವ ಏಕೈಕ ಮೂಲಮಾನವೆಂದರೆ ಶಿಕ್ಷಣ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಶಿಕ್ಷಕ ವೃತ್ತಿಯನ್ನು ಬಯಸುವರು ಪೂರ್ವಜನ್ಮದ ಪುಣ್ಯದ ಕೆಲಸ, ಅತಂಹ ವೃತ್ತಿಯನ್ನು ಗೌರಯುತವಾಗಿ ವೃತ್ತಿಗೆ ಚುತಿಬರದೆ ಹಾಗೇ ಕಾಪಾಡಿಕೊಳ್ಳಬೇಕು, ಅಂದಿನ ಕಾಲದ ಬಡಕುಟುಂಬದ ಕೇವಲ ದಿನಕೂಲಿ ಕಾರ್ಮಿಕನ ಮಗನಾಗಿ ಹುಟ್ಟಿದ ಡಾ. ಸರ್ವಪಲ್ಲಿ ರಾಧಕೃಷ್ಣನ್ ಇಂದು ಗುರು ವೃಂಧಕ್ಕೆ ಮಾದರಿಯಾಗಿದ್ದಾರೆ. ಅಂದಿನ ವಿರ್ದ್ಯಾರ್ಥಿವೇತನದಿಂದ ತನ್ನ ಎಲ್ಲಾ ಹಂತದ ಪದವಿಗಳನ್ನು ಮುಗಿಸಿ ಈಡೀ ದೇಶಕ್ಕೆ ನಿರ್ಮಾಮೃತರಾಗಿದ್ದಾರೆ ಎಂದರು.

ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.

ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಕಲಾ ತಂಡಗಳ ಮೂಲಕ ಅದ್ದೂರಿ ಮೆರವಣಿಗೆ ಮೂಲಕ ಶಿಕ್ಷಕರು ಮೆರಗು ತಂದರು.

ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ ಪ್ರಸನ್ನ ಕುಮಾರ್, ಬಿಆರ್‌ಸಿ ಮಂಜುನಾಥ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಂ.ತಿಪ್ಪೇಸ್ವಾಮಿ, ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪಾದಾಧಿಕಾರಿಗಳು ಉಪಸ್ಥಿತರಿದ್ದರು.

1.ಚಳ್ಳಕೆರೆ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣ ಜಯಂತಿಯ ಅಂಗವಾಗಿ ತಹಶೀಲ್ದಾರ್ ಎನ್,ರಘುಮೂರ್ತಿ ಮಾತನಾಡಿದರು.

2.ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ಶಿಕ್ಷಕರ ಜಯಂತಿಯ ಅಂಗವಾಗಿ ಕಲಾ ತಂಡಗಳ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.

  1. ಚಳ್ಳಕೆರೆ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣ ಜಯಂತಿಯ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಿದರು.

4.ಚಳ್ಳಕೆರೆ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ಜಯಂತಿಯ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

About The Author

Namma Challakere Local News
error: Content is protected !!