ನಾಯಕನಹಟ್ಟಿ ಪಟ್ಟಣ ಪಂಚಾಯತಿ ನೂತನ ಮುಖ್ಯಾಧಿಕಾರಿಯಾಗಿ ಟಿ.ಲೀಲಾವತಿ ಅಧಿಕಾರ ಸ್ವೀಕರ
ಚಳ್ಳಕೆರೆ : ನಾಯಕನಹಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎನ್.ಟಿ.ಕೋಡಿ ಭೀಮರಾಯ ವರ್ಗಾವಣೆಯಾದ ಹಿನ್ನಲೆ ಇವರ ಸ್ಥಾನಕ್ಕೆ ನೂತನ ಮುಖ್ಯಾಧಿಕಾರಿಯಾಗಿ ಟಿ.ಲೀಲಾವತಿಯವರು ಇಂದು ಅಧಿಕಾರ ಸ್ವೀಕರಿಸಿದರು.
ತೆರವಾದ ಅಧಿಕಾರಿ ಸ್ಥಾನಕ್ಕೆ ಟಿ.ಲೀಲಾವತಿ ಯನ್ನು ಸರ್ಕಾರ ನೇಮಕ ಮಾಡಿ ಆದೇಶಿಸಿದ್ದು,
ನಾಯಕನಹಟ್ಟಿ ಪಟ್ಟಣ ಪಂಚಾಯತಿ ನೂತನ ಮುಖ್ಯಾಧಿಕಾರಿಯಾಗಿ ಅವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನು ಪಟ್ಟಣ ಪಂಚಾಯತಿ ನೂತನ ಮುಖ್ಯಾಧಿಕಾರಿಗೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಅಭಿನಂದನೆಗಳು ಸಲ್ಲಿಸಿದ್ದಾರೆ.
ಇನ್ನೂ ಪಟ್ಟಣ ಪಂಚಾಯತಿ ಹಿರಿಯ ಆರೋಗ್ಯಾಧಿಕಾರಿ ರುದ್ರಮುನಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.