ಚಳ್ಳಕೆರೆ: ಸೋಲಾರ್ ಕಂಪನಿಯಿAದ ರೈತರ ದಾರಿಗಳು ಅತಿಕ್ರಮಣ : ಡಿಸಿ, ತಹಶೀಲ್ದಾರ್ ವಿರುದ್ಧ ನ್ಯಾಯಾಲದಲ್ಲಿ ಮೊಕದಮೆ : ರೈತ ಸಂಘ ಆಕ್ರೋಶ
ಚಳ್ಳಕೆರೆ: ತಾಲೂಕಿನಲ್ಲಿ ವಿವಿಧ ಕಡೆ ಸೋಲಾರ್ ಕಂಪನಿಯವರ ಆಕ್ರಮಣದಿಂದ ರೈತರ ಭೂಮಿಗಳು ಬಂಜರು ಹಾಗುತ್ತಿವೆ.
ಇನ್ನೂ ರೈತರ ಭೂಮಿಗಳನ್ನು ಒತ್ತುವರಿ ಮಾಡಿಕೊಂಡಿರುವ ಸಾರ್ವಜನಿಕ ರಸ್ತೆ, ಸರ್ಕಾರಿ ಹಳ್ಳಗಳನ್ನು ತೆರವು ಮಾಡುವಂತೆ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಒತ್ತಾಯ ಮಾಡಿದ್ದಾರೆ.
ನಗರದ ನೆಹರು ವೃತ್ತದಲ್ಲಿರುವ ಕರ್ನಾಟಕ ರಾಜ್ಯ ರೈತ ಸಂಘದ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ತಾಲೂಕಿನ ವರವು ಕಾವಲು ರಿ.ಸ.ನಂ. 343ರಲ್ಲಿ ಪಾಗಿಟರ್ ಸೋಲಾರ್ ಕಂಪನಿಯವರು ಸಾರ್ವಜನಿಕರ ಎರಡು ರಸ್ತೆಗಳನ್ನು ಒತ್ತುವರಿ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಮಾಡಿದ್ದಾರೆ.
ಇನ್ನೂ ರಿ.ಸ.ನಂ. ರಲ್ಲಿ ರಸ್ತೆ, ಹಳ್ಳ ಅಡ್ಡಗಟ್ಟಿದ್ದಾರೆ. ನನ್ನಿವಾಳ ರಿ.ಸ.ನಂ. 576ರಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಸರ್ಕಾರಿ ಜಾಗವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಜಮೀನುಗಳ ಒತ್ತುವರಿ ಮಾಡಿಕೊಂಡು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಸಿದ್ದಾರೆ ಎಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗ ಇರುವುದಕ್ಕೆ ಹೈಕೋರ್ಟ್ ಮೊರೆ ಹೋಗಲಾಗಿತ್ತು.
ಈ ಕುರಿತು ನ್ಯಾಯಾಲಯವು ಪರೀಶಿಲನೆ ನಡೆಸಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಗಟ್ಟಿರುವ ರಸ್ತೆಗಳನ್ನು ತೆರವು ಮಾಡಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಸೋಲಾರ್ ಕಂಪನಿಗಳು ಒತ್ತುವರಿ ಮಾಡಿಕೊಂಡಿರುವ ಸಾರ್ವಜನಿಕರ ರಸ್ತೆ, ಸರ್ಕಾರಿ ಜಮೀನು, ಹಳ್ಳಗಳನ್ನು ತೆರವು ಮಾಡಿಸಬೇಕು ಎಂದು ಒತ್ತಾಯ ಮಾಡಿದರು.
ಈ ವೇಳೆ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹಂಪಣ್ಣ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ರೈತ ಮುಖಂಡರಾದ ಜಿ.ವಿ,ತಿಪ್ಪೇಸ್ವಾಮಿ, ಗುರುಮೂರ್ತಿ, ನಾಗಗೊಂಡನಹಳ್ಳಿ ತಿಮ್ಮಣ್ಣ, ತಿಪ್ಪೇಸ್ವಾಮಿ, ದಯಾನಂದ ಇತರರು ಪಾಲ್ಗೊಂಡಿದ್ದರು.