ಪ್ರತಿ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಿ : ಇಓ ಹೊನ್ನಯ್ಯ
ಚಳ್ಳಕೆರೆ: ಸರಕಾರದ ಆದೇಶದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಬೇಕು, ಶೌಚಾಲಯ ಮುಕ್ತ ತಾಲೂಕುನ್ನಾಗಿ ಮಾಡಬೇಕು ಎಂದು ಇಓ ಹೊನ್ನಯ್ಯ ಹೇಳಿದ್ದಾರೆ.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಪಂ ಅಧಿಕಾರಿಗಳಿಗೆ ಸಮ್ಮುಖದಲ್ಲಿ ನಡೆದ ಗ್ರಾಮ ನೈರ್ಮಲ್ಯ ಯೋಜನೆ ತಯಾರಿಸುವ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.
ಹಳ್ಳಿಗಳಲ್ಲಿ ಕೆಲವು ಕಡೆ ನಿರುಪಕ್ತ ಶೌಚಾಲಯಗಳಿದ್ದರೆ ಅಂತಹ ಶೌಚಾಲಯಗಳನ್ನು ದುರಸ್ಥಿಗೊಳಿಸುವ ಕೆಲಸವಾಗಬೇಕು. ಸಾರ್ವಜನಿಕ ಸ್ಥಳಲ್ಲಿ, ದೇವಾಲಯಗಳ ಬಳಿ ಸಮುದಾಯ ಶೌಚಾಲಯಗಳ ಅವಶ್ಯಕತೆಯಿದ್ದರೆ. ಅಂತಹ ಸ್ಥಳಗಳನ್ನು ಗುರುತಿಸಿ ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಈ ವೇಳೆ ಜಿಪಂ ಸಂಯೋಜಕ ನಾಗರಾಜು ಮಾತನಾಡಿದರು. ಇನ್ನು ತಾಪಂ ಸಹಾಯಕ ನಿದೇರ್ಶಕ ಸಂಪತ್‌ಕುಮಾರ್. ಜಿಪಂ ಅಧಿಕಾರಿ ಪ್ರಮೀಳಾ ಹಾಗು ತಾಲ್ಲೂಕಿನ ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.