ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ : ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಚಳ್ಳಕೆರೆ : ಕೇವಲ ಒಬ್ಬ ನಟನಾಗದೆ ಜನಗಳ ಮಧ್ಯೆ ಬೆರೆತು ಜನರ ಕಷ್ಟ ಸುಖಗಳಿಗೆ ಸ್ಪಂಧಿಸುವ ಮನೋಧರ್ಮ ಹೊಂದಿರುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾದ ಕಿಚ್ಚಸುದೀಪ್ ಹುಟ್ಟು ಆಚರಿಸಿಕೊಳ್ಳುತ್ತಿರುವುದು ಸಂತಸ ಸಂತಿದೆ ಎಂದು ಕಿಚ್ಚ ಸುದೀಪ್ ಅಭಿಮಾನಿ ಬಳಗದ ಎನ್.ರಾಜು ಹೇಳಿದ್ದಾರೆ.
ಅವರು ತಾಲೂಕಿನ ಚನ್ನಗಾನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಕಿಚ್ಚ ಸುದೀಪ್ ಹುಟ್ಟು ಹಬ್ಬದ ನಿರ್ಮಿತ್ತ ಅಭಿಮಾನಿ ಬಳಗ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಹೆಸರಾಂತ ನಟನ ಜನ್ಮದಿನಕ್ಕೆ ನಾವೇನು ಕೊಡಲು ಸಾವಧ್ಯವಿಲ್ಲ ಅವರು ಹಾಕಕೊಟ್ಟ ಮಾರ್ಗದಂತೆ ಇಂದು ನಾವು ಅವರಂತೆ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ಬುಕ್ ವಿತರಿಸುವ ಮೂಲಕ ನಿಸ್ವರ್ಥ ಸೇವಾ ಮನೋಭಾವ ರೂಢಿಸಿಕೊಳ್ಳುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿದ್ದೆವೆ ಎಂದರು.
ಕಿಚ್ಚ ಸುದೀಪ್ ಅಭಿಮಾನಿ ಬಳಗದ ಯುವ ಮುಖಂಡ ಕೆ.ತಿಮ್ಮೆಶ್ ಮಾತನಾಡಿ, ಸಮಾಜಮುಖಿ ಸೇವಾ ಕಾರ್ಯಗಳು ಮನುಷ್ಯನನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತವೆ ಇನ್ನು ಅದೆಷ್ಟೋ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡAತ ವ್ಯಕ್ತಿಗಳು ಎಲೆಮರೆ ಕಾಯಿಹಾಗೇ ಇದ್ದು ಸಮಾಜ ಸೇವೆಗೆ ಮುಂದಾಗುತ್ತಾರೆ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅಂತಹ ನಿಸ್ವಾರ್ಥ ಸೇವೆಯನ್ನು ಮಾಡುವ ಮತ್ತು ಇಂಥ ಸತ್ಕಾರ್ಯಗಳನ್ನು ಮಾಡುವ ಮಹಾನೀಯರನ್ನು ಗೌರವಿಸುವ ಕೆಲಸವಾಗಬೇಕೆಂದು ಎಂದರು.
ಈದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತ್ ಸದಸ್ಯರಾದ ಮಂಜುಳಾ ತಿಪ್ಪೆಸ್ವಾಮಿ, ಕಿಚ್ಚ ಸುದೀಪ್ ಅಭಿಮಾನಿ ಬಳಗದ ಯುವ ಮುಖಂಡ ರಾಜು, ಚಂದ್ರು, ರಾಮಾಂಜಿನಿ, ವಸಂತ, ಶಶಿ ಕುಮಾರ್, ನಾಗೇಶ, ಬಾಬು, ರುದ್ರೇಶ, ವೆಂಕಟೇಶ, ಚಲಮೇಶ, ಬಸವರಾಜ, ಮುಖ್ಯ ಶಿಕ್ಷಕ ವೆಂಕಟಸ್ವಾಮಿ, ಸಹ ಶಿಕ್ಷಕಿ ಆರ್.ಭಾಗ್ಯಮ್ಮ, ಅತಿಥಿ ಶಿಕ್ಷಕ ಕುಬೇರ್, ವೀರೆಶ್, ಇತರರು ಪಾಲ್ಗೋಂಡಿದ್ದರು.