ಸಮೃದ್ಧಿ ಮಳೆಗೆ ಕೆರೆಗಳುಭರ್ತಿ :ಶಾಸಕ ಟಿ.ರಘುಮೂರ್ತಿಯಿಂದ ಬಾಗಿನ ಅರ್ಪಣೆ
ಚಳ್ಳಕೆರೆ : ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಾಲೂಕಿನ ಚಿಕ್ಕಚೆಲ್ಲೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಚಳ್ಳಕೆರೆ ತಾಲೂಕಿನಾತ್ಯಂತ ಸುಮಾರು ಮೂರು ದಿನಗಳ ಕಾಲ ಸುರಿದ ಮಳೆಗೆ ಚಳ್ಳಕೆರೆ ತಾಲೂಕಿನ ವಿವಿಧ ಕೆರೆಗಳು ತುಂಬಿ ಹರಿಯುತ್ತಿದ್ದು ಅದರಂತೆ ಚಿಕ್ಕಚೆಲ್ಲೂರು ಗ್ರಾಮದ ಕೆರೆಯು ಮೈತುಂಬಿ ಹರಿಯುತ್ತಿರುವ ನಿಮಿತ್ತ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಮಾ ತಿಮ್ಮರಾಯ, ಉಪಾಧ್ಯಕ್ಷ ಪ್ರಸನ್ನಕುಮಾರ್, ಹಾಗೂ ಸದಸ್ಯರುಗಳಾದ ಚಿದಾನಂದಪ್ಪ ,ಜಯಮ್ಮ, ರತ್ನಮ್ಮ ಮತ್ತು ಮುಖಂಡರಾದ ಅನಿಲ್ ,ನಾಗರಾಜ್, ಬೊಪ್ಪಣ್ಣ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಚಿದಾನಂದಪ್ಪ ,ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರಸ್ವಾಮಿ, ಕಿಸಾನ್ ಸೆಲ್ ಜಿಲ್ಲಾಧ್ಯಕ್ಷರಾದ ನಾಗರಾಜ್ , ದೊಡ್ಡರಂಗಪ್ಪ ಮತ್ತು ಮುಖಂಡರು, ಕಾರ್ಯಕರ್ತರು , ಸಾರ್ವಜನಿಕರು ಉಪಸ್ಥಿತರಿದ್ದರು.