ಬತ್ತಿ ಹೋದ ಕೊಳವೆ ಬಾವಿಯಲ್ಲಿ..! ಚಿಮ್ಮುತ್ತಿರುವ ಕುಡಿಯುವ ನೀರು
ಚಳ್ಳಕೆರೆ : ಕಳೆದ ಒಂದು ವಾರದಿಂದ ತಾಲೂಕಿನಾಧ್ಯಾಂತ ಸುರಿಯುತ್ತಿರುವ ಮಳೆಗೆ ಕೆರೆ, ಕಟ್ಟೆಗಳು, ಚೆಕ್ ಡ್ಯಾಂ ಗಳು ಭರ್ತಿಯಾಗಿವೆ.
ಹಲವು ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನೀರಿನ ಸೆಲೆಯಿಲ್ಲದೆ ಬತ್ತಿ ಹೋಗಿರುವ ಕೆರೆಗಳು ತುಂಬಿ ಮರುಜೀವ ಪಡೆದಿZ್ವ, ಅದರಂತೆ ಬಯಲು ಸೀಮೆ ಪ್ರದೇಶದಲ್ಲಿ ರೈತರ ಜೀವನಾಡಿಯಾದ ಕೃಷಿಗೆ ಅವಶ್ಯವಾದ ಕೆರೆಗಳಲ್ಲಿ ನೀರಿಗಾಗಿ ಬಹು ದೊಡ್ಡ ಸವಾಲಾಗಿತ್ತು.
ಆದರೆ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಸುಮಾರು ಸಾವಿರಾರು ಅಡಿಗಳಷ್ಟು ಆಳಕ್ಕೆ ಬೋರ್ ಕೊರೆದರು ನೀರಿನ ಸೆಲೆಯಿಲ್ಲದೆ ರೈತ ಹೈರಾಣಾಗಿದ್ದ
ಆದರೆ ಒಂದು ವಾರದಿಂದ ಸುರಿದ ಮಳೆಗೆ ಬತ್ತಿದ ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿರುವುದು ರೈತನ ಮೊಗದಲ್ಲಿ ಮಂದಹಾಸ ಕಾಣುತ್ತಿದೆ.
ಅದರಂತೆ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ತಿಮ್ಮಣ್ಣನಹಳ್ಳಿ ಗ್ರಾಮದ ಹೊರವಲಯದಲ್ಲಿ ಗ್ರಾಮದ ಕುಡಿಯುವ ನೀರಿಗಾಗಿ ಕೊಳವೆ ಬೋರ್ ವೆಲ್ ಕೊರೆಸಿದ್ದರು.
ಆದರೆ ಅಂತರ್ಜಾಲ ಬತ್ತಿರುವುದರಿಂದ ಕೊಳವೆ ಬಾಯಿಯಲ್ಲಿ ನೀರು ಬತ್ತಿ ಹೋಗಿತ್ತು ಆದರೆ ಮಳೆಯಿಂದ ಅಂತರ್ಜಾಲ ಹೆಚ್ಚಾಗಿ ಬತ್ತಿದ ಕೊಳವೆ ಬಾವಿಯಲ್ಲಿ ಯಾವುದೇ ಮೋಟರ್ ಸಹಾಯವಿಲ್ಲದೆ ನೀರು ಉಕ್ಕುತ್ತಿರುವುದು ಗ್ರಾಮದ ರೈತರ ಮೊಗದಲ್ಲಿ ಮಂದಹಾಸ ಕಾಣುತ್ತಿದೆ.