ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳ ಸೌಭಾಗ್ಯ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರತಿಯೊಬ್ಬರಿಗೂ ಮಕ್ಕಳ ಹೇರುವ ಆಸೆ ಇರುತ್ತದೆ ಆದರೆ ಕೆಲವು ಕಾರಣಗಳಿಂದ ಆ ಭಾಗ್ಯ ದೂರವಾಗಿರುತ್ತದೆ ಆದರೆ ಇಂತಹ ಚಿಕಿತ್ಸೆಯಿಂದ ಮಕ್ಕಳು ಪಡೆಯುವ ಭಾಗ್ಯ ಸಿಗುತ್ತದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾಗರ್ ಚಂದ್ರಮ್ಮ ಹಾಸ್ಪಿಟಲ್ ಸಹಯೋಗದೊಂದಿಗೆ ಮಕಳಿಲ್ಲದ ದಂಪತಿಗಳಿಗೆ ಬಂಜೆತನ ನಿವಾರಣೆ ಶಿಬಿರ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರೆವೆರಿಸಿ ಮಾತನಾಡಿದ ಅವರು ಡಾಕ್ಟರ್ ಗಳು ನಮಗೆ ದೇವರು, ಅವರ ಮೇಲೆ ನಂಬಿಕೆ ಇಟ್ಟು ಗುಣಮಟ್ಟದ ಚಿಕಿತ್ಸೆ ಪಡೆದು ಸಂತಾನ ಭಾಗ್ಯ ಪಡೆಯಬಹುದು,
ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 130 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ.
ಕೊವಿಡ್ ಸಂಧರ್ಭದಲ್ಲಿ ಸಾಕಷ್ಟು ಸಾವಿ ನೋವು ಗಳನ್ನು ಕಂಡಿದೆವೆ ಆದರೆ ಇಲ್ಲಿನ ವೈದ್ಯಾಧಿಕಾರಿಗಳು ರಾತ್ರಿ ಪಾಳಯದಲ್ಲಿ ಡಾಕ್ಟರ್ ಕೊರತೆ ನಿವಾರಿಸಿ ಎಂದು ಆಡಳಿತ ಅಧಿಕಾರಿಗೆ ಸೂಚನೆ ನೀಡಿದರು.
ಗಡಿ ಗ್ರಾಮದಲ್ಲಿ ಬಂದ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಿ ಎಂದು ಕಿವಿಮಾತು ಹೇಳಿದರು.
ಡಾ.ರೇಷ್ಮಾ ಮಾತನಾಡಿ ಮಕ್ಕಳಿಲ್ಲದ
ಶ್ರೀಮಂತರು ಇಲ್ಲಿಗೆ ಬರುವುದಿಲ್ಲ ಬದಲಾಗಿ ಕಡು ಬಡತನದಲ್ಲಿ ಜೀವಿಸುವ, ಆರ್ಥಿಕ ಕಡುಬಡವರಿಗೆ ಈ ಸಾಗರ್ ಚಂದ್ರಮ್ಮ ಹಾಸ್ಪಿಟಲ್ ಚಿಕಿತ್ಸೆ ವರದಾನವಾಗಿದೆ ಎಂದರು.
ಇಂದು ಚಿತ್ರದುರ್ಗ ಹೊಸದುರ್ಗ, ಚಳ್ಳಕೆರೆ ಮೂರು ತಾಲೂಕು ದಂಪತಿಗಳು ಬಾಗಿದ್ದಾರೆ , .ನಾಳೆ ಆಗಸ್ಟ್ 24 ರಂದು ಮೊಳಕಾಲ್ಮೂರು, ಹಿರಿಯೂರು, ಹೊಳಲ್ಕೆರೆ ತಾಲೂಕಿನ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದರು.
ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯ ಸುಮಾ, ಜೈ ತುಂನ್ ಬಿ, ಸಾರ್ವಜನಿಕ ಆಡಳಿತ ವೈಧ್ಯಾಧಿಖಾರಿ ವೆಂಕಟೇಶ್, ಕುಟುಂಬ ಕಲ್ಯಾಣಾ ಅಧಿಕಾರಿ
ಡಾ ರೇಣು ಪ್ರಸಾದ್ , ಆರೋಗ್ಯ ಅಧಿಕಾರಿ ಡಾ.ಎನ್.ಕಾಶಿ, ತಜ್ಞ ಡಾ.ರಶ್ಮೀ, ಡಾ.ದೀಪ್ತಿ. ಡಾ.ವಿಣಾ ಡಾ.ನಸರಿನ್ , ಮೆನಜರ್ ಶಷಂದಿನ್, ಸಹಾಯಕ ಅಧಿಕಾರಿ ಕುಂದಾಪುರ ತಿಪ್ಪೇಸ್ವಾಮಿ, ಪ್ರಸನ್ನ ಕುಮಾರ್, ಇತರರು ಪಾಲ್ಗೊಂಡಿದ್ದರು.