ಚಳ್ಳಕೆರೆ : ಸಮಾಜದಲ್ಲಿ ಅಂಚಿಕೊಳ್ಳಲಾಗದ ಅತೃಪ್ತಿಯನ್ನು ಹಾಗೂ ನೋವುಗಳನ್ನು ಕವನ ಸಂಕಲನದಲ್ಲಿ ಕಟ್ಟಿ‌ಕೊಡಲಾಗಿದೆ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಬಾಯಿ ಮಾತಿನಿಂದ ಹೇಳಾಗದ, ಸಮಾಜದಲ್ಲಿ ಅಂಚಿಕೊಳ್ಳಾಗದ ಅತೃಪ್ತಿಯನ್ನು ಹಾಗೂ ನೋವುಗಳನ್ನು, ಈ ಕವನ ಸಂಕಲನದಲ್ಲಿ ಕಟ್ಟಿ‌ಕೊಡಲಾಗಿದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.

ಅವರು‌ ನಗರದ ರೋಟರಿ ಭವನದಲ್ಲಿ ಅನನ್ಯ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಮೂಲಕ ಹಮ್ಮಿಕೊಳ್ಳಲಾದ ದ್ಯಾವರ ದನಿ ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಮನಸಿನ ವೇದನೆಗಳನ್ನು ಕವನಗಳ‌ ಮೂಲಕ ಕವಿತೆಗಳ ಮೂಲಕ ಅಭಿವ್ಯಕ್ತ ಪಡಿಸುವ ಮೂಲಕ ಸಾಹಿತ್ಯ ಕೃಷಿ ಮಾಡುವ ತುಡಿತ ಕೆಲವೆ ಕಲವರಿಗೆ ಮಾತ್ರ ಅಂತಹವರ ಸಾಲಿಗೆ ದ್ಯಾವರನಹಳ್ಳಿ ಡಾ.ಆನಂದ ಕುಮಾರ್ ಒಬ್ಬರು ಎಂದರು.

ಸಾಹಿತಿಗಳು, ಕವಿಗಳಾದ ವಡ್ಡಗೆರೆ ನಾಗರಾಜ್ ಮಾತನಾಡಿ,
ಕೇವಲ ಓದಿದರೆ ಬರುವುದಲ್ಲ ಆದರೆ, ಅದನ್ನು ಕೇಳಿ ಪಡೆದರು ಬರುವುದಲ್ಲ ಬದಲಾಗಿ ಅದರ ನೋವುನುಂಡ ಸತ್ಯ ಘಟನೆಗಳ ಬಿತ್ತರವೇ ಈ ಸಾಹಿತ್ಯ ಒಳಗೊಂಡಿದೆ.

ಜಗತ್ತಿನಲ್ಲಿ ಕೇಳಿಸಿಕೊಳ್ಳುವರು ಹಾಗು ನಮ್ಮನ್ನು ಆಲಿಸುವವರು ಇಲ್ಲವಾಗಿದೆ, ಇಂದು ನಮ್ಮ ಜ್ಞಾನ ವನ್ನು ಯಾವುದೋ ಪುಸ್ತಕ ಓದಿದರೆ ಬರುವುದಲ್ಲ ಜನ ಸಾಮಾನ್ಯ ರಿಂದ ಮಾತ್ರ ಬರುತ್ತದೆ ಅದನ್ನು ಕಾವ್ಯ ಕಟ್ಟಲು ಹಿಂಬು ನೀಡುತ್ತದೆ ಎಂದರು.

ಸಾಹಿತಿ ಅಂಜಿನಪ್ಪ ಮಾತನಾಡಿ,
ದ್ಯಾವರ ದನಿ ಎಂಬ ಸಂಕಲನ ಕೇವಲ ಸಂಕಲನಕ್ಕೆ ಮಾತ್ರ ಒಳಗೊಂಡಿಲ್ಲ ಬದಲಾಗಿ ಅದು ಜನರ ನೋವಿನ ಮಾತುಗಳು ಈ ಕಾವ್ಯ ಕಟ್ಟಿಕೊಡಲಾಗಿದೆ. ಸಾಹಿತ್ಯ ಹುಟ್ಟುವುದು ಶ್ರೀಮಂತರ ಜಗಲಿಯಲ್ಲಿ ಅಲ್ಲ ಬದಲಾಗಿ ಕೊಳಚೆ ಪ್ರದೇಶದಲ್ಲಿ ಎಂಬುದು ಸಾಹಿತ್ಯ ಶಕ್ತಿಗಳು ಇಂದು ಮನಗಾಣಬೇಕಿದೆ ಎಂದರು.

ಇನ್ಸ್ ಪೆಕ್ಟರ್ ಉಮೇಶ್ ಮಾತನಾಡಿ, ದೇಶದ ಮೂಲ ನಿವಾಸಿಗಳು ದಲಿತರು, ಆದರೆ ಇಂದಿನ ಪರಿಸ್ಥಿತಿ ಯಲ್ಲಿ ದಲಿತರೆ ಮೂಲೆ ಗುಂಪಾಗುತ್ತಿದ್ದೆವೆ ಎಂದು ವಿಷಾಧ ವ್ಯಕ್ತಪಡಿಸಿದರು
ಬುದ್ಧ , ಬಸವ , ಹಾಗೂ ಅಂಬೇಡ್ಕರ್ ರವರ ತತ್ವ ಸಿದ್ದಾಂತಗಳ ‌ಮೂಲಕ ನಾನು ಕೂಡ ಇಂದು ನಿಮ್ಮ ಮುಂದೆ ಪೊಲೀಸ್ ಇನ್ಸ್ ಪೆಕ್ಟರ್ ಹಾಗಿ ನಿಂತಿದ್ದೆನೆ ಆದ್ದರಿಂದ ಶಿಕ್ಷಣ ಕಲಿತ ಪ್ರತಿಯೊಬ್ಬರು ದೀನ ದಲಿತ, ದಮನಿತರ ಪರ ಧ್ವನಿ ಎತ್ತುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಅನಿರ್ವಾತೆಯನ್ನು ಕೂಡ ಈ ಕವಿತೆಯ ಮುಖ್ಯ ಆಶಯವಾಗಿದೆ.

ಸ್ವಾತಂತ್ರ್ಯ ಬಂದು 75 ವರ್ಷವಾದರು ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ‌ ತಮಿಳುನಾಡಿನಲ್ಲಿ ದಲಿತರಿಗೆ ಬಾವುಟ ಹಾರಿಸಲು ಕೊಟ್ಟಿಲ್ಲ ಎಂಬುದು ಮಾಧ್ಯಮದ ಮೂಲಕ ನೋಡಿದ್ದೆವೆ ಇನ್ನೂ ದಲಿತ ಮಹಿಳೆಯರು ಅಡುಗೆ ಮಾಡಲು ಹೋದರೆ ಅಡುಗೆ ತಿನ್ನುವುದಿಲ್ಲ ಎಂಬ ಮೌಡ್ಯವನ್ನು ಹೋಗಲಾಡಿಸಲು ಹೋರಾಟ ಅನಿವಾರ್ಯವಾಗಿದೆ ಎಂದರು.

ಈ ಸಂಧರ್ಭದಲ್ಲಿ ಸಾಹಿತಿ ಮೋದೂರು ತೇಜ, ಪ್ರಾಶುಂಪಾಲ ಶಿವಲಿಂಗಪ್ಪ, ಪ್ರೋ.ಚಿತ್ತಯ್ಯ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರ ನಾಯಕ, ನಾಗರಾಜ್, ಜಯಲಕ್ಷ್ಮಿ, ಡಿಟಿ.ಜಗನ್ನಾಥ್, ಡಿಟಿ.ಭೂತಲಿಂಗಪ್ಪ, ಉಪನ್ಯಾಸಕ ಮಂಜುನಾಥ್,
ಲೇಖಕರಾದ ಹಾಗೂ ಕವನಸಂಕಲನದ ಕತೃರಾದ ಡಾ.ಆನಂದ ಕುಮಾರ್, ಹಾಗು ಅಪಾರ ಸಾಹಿತ್ಯ ‌ಆಸಕ್ತರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!