ಚಳ್ಳಕೆರೆ : ಇಂದಿನ ಯುವಕರು ಸಮಾಜ ಬದಲಾವಣೆಯ ದಿಕ್ಸೂಚಿ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಮಹಾತ್ಮ ಗಾಂಧೀಜಿ ಅವರು ಕಂಡಂತಹ ಸ್ವಚ್ಛ ಭಾರತ ಕನಸು ಪೂರ್ಣ ಪ್ರಮಾಣದಲ್ಲಿ ನನಸಾಗಬೇಕಾದರೆ ಇಂದಿನ ಯುವಕರು ನೈರ್ಮಲಿಕರಣ ಮತ್ತು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು

ಅವರು ನಗರದ ಬೋಸ್ ಯೂತ್ಸ್ ಅಸೋಸಿಯೇಷನ್ ಏರ್ಪಡಿಸಿದ್ದಂತಹ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು

ಮನುಷ್ಯನ ದಿನನಿತ್ಯದ ಬದುಕಿನಲ್ಲಿ ಕೆಲವು ಸರ್ಕಾರದಿಂದ ಕೊಡ ಮಾಡಲ್ಪಡುತ್ತವೆ ಕೆಲವನ್ನು ಅಂದರೆ ಗಾಳಿ ನೀರು ಮತ್ತು ನೈಸರ್ಗಿಕವಾಗಿ ನಾವು ಪಡೆಯಬಹುದಾದಂತ ಸಂಪನ್ಮೂಲಗಳನ್ನು ಕ್ರಮಬದ್ಧವಾಗಿ ಬಳಸಿಕೊಂಡು ಹೋಗುವಂತೆ ನಾಗರಿಕರಿಗೆ ಮಾರ್ಗದರ್ಶನ ನೀಡುವ ಹೊಣೆಗಾರಿಕೆ ಯುವಕರದ್ದಾಗಿದೆ.

ಅದರಲ್ಲೂ ಮುಖ್ಯವಾಗಿ ಶುದ್ಧವಾದ ಗಾಳಿ ಮತ್ತು ನೀರು ಇವುಗಳು ಸದ್ಬಳಕೆ ಆಗಬೇಕು ಸುಚಿತ್ವವನ್ನು ಕಾಪಾಡಿಕೊಳ್ಳುವುದರ ಮೂಲಕ ಸಮಾಜದ ಸ್ವಾಸ್ಥ್ಯವನ್ನು ನಾವೆಲ್ಲರೂ ಕಾಪಾಡಬೇಕಿದೆ.

ಈ ದೆಸೆಯಲ್ಲಿ ಈ ಯುವಕ ಸಂಘದವರು ಮಾಡಿರುವಂತಹ ಅಭಿಯಾನ ಒಂದು ಸತ್ಕಾರ್ಯವಾಗಿದೆ ಇದನ್ನು ಮುಂದುವರಿಸಿಕೊಂಡು ಹೋಗುವಂತೆ ಬೋಸ್ ಯುವಕ ತಂಡಕ್ಕೆ ಕರೆ ನೀಡಿದರು.

ಪೊಲೀಸ್ ನಿರೀಕ್ಷಕ ಉಮೇಶ್ ಮಾತನಾಡಿ ಮಹಾತ್ಮ ಗಾಂಧಿ ಅಂಬೇಡ್ಕರ್ ಸ್ವಾಮಿ ವಿವೇಕಾನಂದ ಹಾಗೂ ಸಾವರ್ಕರ್ ಇವರೆಲ್ಲ ರಾಷ್ಟ್ರದ ಅಖಂಡತೆಯನ್ನು ಸಂರಕ್ಷಣೆ ಮಾಡಿ ಭಾರತದ ಪರಂಪರೆಯನ್ನು ವಿಶ್ವಕ್ಕೆ ಪರಿಚಯ ಮಾಡಿಸಿದವರು

ಈ ನಿಟಲ್ಲಿ ಈ ಯುವಕರು ಕೈಗೊಂಡಿರುವ ಕಾರ್ಯಮುಂದೆ ಒಂದು ದಿನ ಫಲ ನೀಡಲಿದೆ ಯುವಕರು ಸಮಾಜವನ್ನು ಬದಲಾಯಿಸುವಂತ ದಿಕ್ಸೂಚಿಯಾಗಲಿದ್ದಾರೆ ಎಂದು ಹೇಳಿದರು.

ಯುವಕ ಸಂಘದ ವೆಂಕಟೇಶ್ ಮತ್ತು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!