ಚಳ್ಳಕೆರೆ : ಡಿಜೆ, ಸೌಂಡ್ ಸಿಸ್ಟಂ ಗೆ ಅನುಮತಿ ಇಲ್ಲ : ತಹಶೀಲ್ದಾರ್ ಎನ್ ರಘುಮೂರ್ತಿ ಸ್ಪಷ್ಟನೆ

ಚಳ್ಳಕೆರೆ : ತಾಲ್ಲೂಕಿನಲ್ಲಿ ವಿವಿಧ ಜಯಂತಿ ಹಾಗೂ ಗಣೇಶ್ ಉತ್ಸವದ ಸಂಧರ್ಭದಲ್ಲಿ ಯಾವುದೇ ಶಬ್ದ ಮಾಲಿನ್ಯ ಮಾಡುವ ಹಾಗೂ ಸರಕಾರದ ನಿಯಮ ಬಾಹಿರ ಡಿಜೆ, ಹಾಗೂ ಹೆಚ್ಚಿನ ಡೆಸಿಬಲ್ ವುಳ್ಳ ಸೌಂಡ್ ಸಿಸ್ಟಂ ಗಳನ್ನು ಹಾಕಲು ಅನುಮತಿ ಕೊರಿ ಯಾವುದೇ ಸಾರ್ವಜನಿಕರು ಕಚೇರಿಗೆ ಅಲೆಯಬಾರದು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.

ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,

ಚಳ್ಳಕೆರೆ ತಾಲೂಕಿನ ಸಮಸ್ತ ನಾಗರಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತು ಮೆರವಣಿಗೆಗಳಿಗೆ ಡಿಜೆ ಮುಂತಾದ ಸಂಗೀತ ಪರಿಕರಗಳನ್ನು ಬಳಸಲು ಅನುಮತಿ ಕೋರಿ ತಹಸಿಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಗಳ ಹೆಸರಿಗೆ ಅನುಮತಿ ಪತ್ರವನ್ನು ಸಲ್ಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ

ಸದ್ಯದ ಸರ್ಕಾರಿ ನಿಯಮಾವಳಿ ಪ್ರಕಾರ ಈ ಸಂಗೀತಕ್ಕೆ ಸಂಬಂಧಿಸಿದ ಡಿಜೆ ಬಳಸಲು ಅನುಮತಿ ನೀಡುವ ಪ್ರಾಧಿಕಾರ ಮತ್ತು ಅಧಿಕಾರ ತಹಸಿಲ್ದಾರ್ ಅವರಿಗೆ ಇರುವುದಿಲ್ಲ

ಆದ್ದರಿಂದ ಸಮಸ್ತ ನಾಗರಿಕರು ಇದಕ್ಕೆ ಸಂಬಂಧಿಸಿದಂತೆ ಡಿಜೆ ಮುಂತಾದ ಪರಿಕರಗಳನ್ನು ಉಪಯೋಗಿಸಲು ತಹಸಿಲ್ದಾರ್ ಅವರಿಗೆ ಯಾವುದೇ ಮನವಿಯನ್ನು ನೀಡದಿರಲು ವಿನಂತಿಸಿದೆ

ಒಂದು ವೇಳೆ ಅಂತಹ ಅರ್ಜಿಗಳನ್ನು ನೀಡಲು ಮುಂದಾದಲ್ಲಿ ತಾಲೂಕ ಕಚೇರಿಯಲ್ಲಿ ಅಂತ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂಬ ಅಂಶ ವನ್ನು ಕೂಡ ಚಳ್ಳಕೆರೆ ತಾಲೂಕಿನ ಸಮಸ್ತ ನಾಗರಿಕರಿಗೆ ತಿಳಿಯಪಡಿಸಿದೆ

About The Author

Namma Challakere Local News
error: Content is protected !!