ನಾಯಕನಹಟ್ಟಿ:: ಶ್ರೀ ಕೃಷ್ಣ ಜನ್ಮಾಷ್ಟಮಿ ಗೋಕುಲಾಷ್ಟಮಿ ಎಂದು ಕರೆಯಲಾಗುತ್ತದೆ ಇಂದು ಹಿಂದುಗಳ ಅತ್ಯಂತ ಪ್ರಸಿದ್ಧ ಹಬ್ಬಗಳಲ್ಲಿ ಒಂದು ಹಿಂದೂ ಪುರಾಣಗಳ ಪ್ರಕಾರ ಭಗವಾನ್ ವಿಷ್ಣುವಿನ 9ನೇ ಅವತಾರವಾದ ಶ್ರೀ ಕೃಷ್ಣನು ಈ ದಿನ ಜನಿಸಿದನು ಆದ್ದರಿಂದ ಈ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತಿದೆ ಎಂದು ಮುಖ್ಯ ಶಿಕ್ಷಕಿ ಸುನಿತಾ ರವರು ಹೇಳಿದ್ದಾರೆ.
ಸಮೀಪದ ಮಲ್ಲೂರಹಳ್ಳಿ ಗ್ರಾಮದ
ಶ್ರೀ ಮುಗಬಸವೇಶ್ವರ ಹೈ ಟೆಕ್ ಶಾಲೆ ಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಹಿಂದೂಗಳ ಹಬ್ಬವಾದ ಕೃಷ್ಣ ಜನ್ಮಾಷ್ಟಮಿಯನ್ನು ಪ್ರತಿವರ್ಷ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಯಂದು ಆಚರಿಸಲಾಗುತ್ತದೆ. ಮಕ್ಕಳು ಕೃಷ್ಣ ಮತ್ತು ರಾಧೆ ಯರ ಛದ್ಮವೇಷ ಗಳನ್ನು ಧರಿಸಿ , ಶ್ರೀ ಕೃಷ್ಣನ ಹಾಡುಗಳನ್ನು ಹಾಡಿ, ನೃತ್ಯ ಮಾಡುವುದರ ಮೂಲಕ ಶ್ರೀ ಕೃಷ್ಣನಿಗೆ ವಿದ್ಯಾರ್ಥಿಗಳು ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿದರು ಎಂದು ಮುಖ್ಯ ಶಿಕ್ಷಕಿ ಸುನಿತಾ ರವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಕೆ ಆರ್ ತಿಪ್ಪೇಸ್ವಾಮಿ , ಸಹ ಶಿಕ್ಷಕರಾದ ಪಾಲಯ್ಯ, ಲಕ್ಷ್ಮಿ, ಶಿಲ್ಪ ,ನಾಗವೇಣಿ, ಶ್ವೇತಾ ,ಪಾಲಾಕ್ಷ ಹಾಗೂ ಗುರುಸ್ವಾಮಿ ಉಪಸ್ಥಿತರಿದ್ದರು