ಶೇ.40ರಷ್ಟು ಕಮಿಷನ್ ಬಿಜೆಪಿ ಸರಕಾರ, ಸುಳ್ಳಿನಲ್ಲಿ ಮಲಗಿದೆ : ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್
ಚಳ್ಳಕೆರೆ : ಬಿಜೆಪಿ ಕಾರ್ಯಕರ್ತರೇ ಕಾರಿಗೆ ಮೊಟ್ಟೆ ಹೊಡೆದಿದ್ದಾರೆ ಎಂದು ಧೈರ್ಯವಾಗಿ ಹೇಳಲಿ ಅದು ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ ಎನ್ನುವುದು ಏಡಿ ತನ ಬಿಜೆಪಿಗರು ಸುಳ್ಳಿನಲ್ಲಿ ಮಲಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಆಡಳಿತ ಪಕ್ಷದ ವಿರುದ್ಧ ಚಾಟಿ ಬೀಸಿದ್ದಾರೆ.
ಚಳ್ಳಕರೆ ನಗರಕ್ಕೆ ಬೇಟಿ ನೀಡಿದ ಸಂಭರ್ಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂವಿಧಾನದ ಹಕ್ಕಿನಲ್ಲಿ ಪ್ರಜಾಪ್ರಭುತ್ವ ಶಾಸಕಾಂಗ ಸ್ಥಾನ ನೀಡಿ ವಿರೋಧ ಪಕ್ಷದ ಸ್ಥಾನ ನೀಡಿದೆ ಅಂತಹ ಸ್ಥಾನದಲ್ಲಿ ನೆರೆ, ಪ್ರಕೃತಿ ಸಂಧರ್ಭದಲ್ಲಿ ಸರಕಾರದ ಕಣ್ಣು ತೆರೆಯಲು ಬೇಟಿ ನೀಡಿದ ಸಂಧರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಸರಕಾರ ಮಾಡುವ ತಪ್ಪಗಳನ್ನು ಬಿಜೆಪಿ ಕಾರ್ಯಕರ್ತರೇ ಕುದ್ದಾಗಿ ಅನೇಕ ಕಡೆ ನಮ್ಮ ಕಾರ್ಯಕರ್ತರು ಕೊಲೆಯಾಗುತ್ತಿದ್ದಾರೆ, ಸರಿಯಾದ ಆಡಳಿತ ಇಲ್ಲ, ಶೇ.40ರಷ್ಟು ಕಮಿಷನ್ ಸರಕಾರವಾಗಿದೆ, ಕಾಮಗಾರಿ ನಡೆಯದೆ ಬಿಲ್ ಹಣ ಪಾವತಿಯಾಗುತ್ತಿವೆ, ಪಿಎಸ್‌ಐ ಹಗರಣ ಈಗೇ ಹಲವು ಸಮಸ್ಯೆಗಳನ್ನು ಅವರ ಬಿಜೆಪಿ ಕಾರ್ಯಕರ್ತರೆ ವಿರೋಧ ಪಕ್ಷದ ಸಿದ್ದರಾಮಯ್ಯರಿಗೆ ಬಳಿ ಹೇಳಿಕೊಂಡಿದ್ದಾರೆ.
ಆದರೆ ವಿರೋಧ ಪಕ್ಷದವರ ಹೇಳಿಕೆ ಸರಿಯಿಲ್ಲ ಎಂದು ಯಾರು ಬೇಕಾದರೂ ಟೀಕೆ ಮಾಡದಲಿ, ಟೊಂಕ ಕಟ್ಟಿ ನಿಲ್ಲಲಿ, ಆದರೆ ಮೊಟ್ಟೆ ಹೊಡೆದು ಸಿದ್ದರಾಮಯ್ಯರವರನ್ನು ಎದುರಿಸುತ್ತೆವೆ ಎಂಬುದು ಏನು ಅರ್ಥ, ಗೋ ಬ್ಯಾಕ್ ಎಂದರೆ ಏನು ಅರ್ಥ, ಈಡೀ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರಿಗೆ ನಾನು ಕರೆ ಮಾಡುತ್ತಿನೆ, ಶೇ.40 ರಷ್ಟು ಕಮಿಷನ್ ಸರಕಾರವನ್ನು ಮಟ್ಟ ಹಾಕಿ ಎಂದು ಕಾಂಗ್ರೆಸ್ ಪಕ್ಷದಿಂದ ಕರೆ ನೀಡಿದರೆ ಈಡೀ ರಾಜ್ಯದಲ್ಲಿ ಯಾವ ಸರಕಾರ ಮಂತ್ರಿಗಳು ಹಲಗಾಡಲು ಬಿಡುವುದಿಲ್ಲ ಆದರೆ ನಮ್ಮ ಪಕ್ಷ ಸಿದ್ದಾಂತದ ಮೇಲೆ ಸತ್ಯದ ಮೇಲೆ ಬಂದಿದೆ ಆದ್ದರಿಂದ ಈಡೀ ರಾಜ್ಯದಲ್ಲಿ ಹೇಳುವುದು ಇಷ್ಟೆ ಅವರ ಕಾರ್ಯಕರ್ತರನ್ನು ಭದ್ರವಾಗಿ ಇಟ್ಟಿಕೊಳ್ಳಲಿ ಇಲ್ಲವಾದರೆ ಪರಿಣಾಮ ಕೆಟ್ಟದಾಗಿ ಇರುತ್ತೆ ಎಂದು ಟಾಂಗ್ ನೀಡಿದ್ದಾರೆ.
ಕಾಶ್ಮೀರದಿಂದ ಕುನ್ಯಾಕುಮಾರಿವರೆಗೆ ಸೆಪ್ಟೆಂಬರ್ 7 ರಿಂದ ಭಾರತ್ ಜೋಡೋ ಕಾರ್ಯಕ್ರಮ ರಾಹುಲ್‌ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 510ಕಿಲೋ. ಮೀಟರ್ ಪಾದಯಾತ್ರೆ ನಡೆಯಲಿದೆ, ಗುಂಡ್ಲು ಪೇಟೆಯಿಂದ ರಾಯಾಚೂರು ಮೂಲಕ ತೆಲಂಗಾಣವನ್ನು ಪ್ರವೇಶ ಮಾಡಲಿದೆ, ಪಾದಯಾತ್ರೆ ವೇಳೆ ಊಟ, ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ವೀಕ್ಷಣೆ ನಡೆಸಲಾಗುತ್ತದೆ.
ಕೇರಳದಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಪಾದಯಾತ್ರೆ ಬೇಡ ಎಂದು ಪೋಲೀಸರು ಮನವಿ ಮಾಡಿದ್ದಾರೆ, ನಮ್ಮ ರಾಜ್ಯದಲ್ಲಿ ಅಂಥ ಮಾರ್ಗವಿದೇಯೇ ಎಂದು ನೋಡುತ್ತಿದ್ದೆವೆ ಖುದ್ದಾಗಿ ನಾನೇ ಪಾದಯಾತ್ರೆ ಮಾರ್ಗ ವೀಕ್ಷಿಸುತ್ತಿದ್ದೆನೆ, ಇದು ಪಕ್ಷದ ವಿಚಾರ ಅಲ್ಲ, ಭಾರತ್ ಜೋಟೋ ಯಾತ್ರೆ ದೇಶ ವಿಭಿನ್ನ ರೀತಿಯಲ್ಲಿ ವಿಭಜನೆ ಆಗುತ್ತಿದೆ, ದೇಶ ಒಂದಾಗಿಸಲು ರಾಹುಲ್ ಗಾಂಧಿ ಅವರಿಂದ ಭಾರತ್ ಜೋಡೋ ಯಾತ್ರೆ ಪ್ರತಿ ಜಿಲ್ಲೆಯವರು ಒಂದೊAದು ದಿನ ರಾಹುಲ್ ಗಾಂಧಿ ಜತೆ ನಡೆಯುತ್ತಾರೆ, ಯಾವ ದಿನ, ಎಷ್ಟು ಸಮಯ ಇದರ ಬಗ್ಗೆ ದೆಹಲಿ ಸಭೆ ಬಳಿಕ ಮಾಹಿತಿ ನೀಡಲಿದ್ದೆವೆ ಎಂದಿದಾರೆ,
ಸುದ್ದಿಗೊಷ್ಠಿಯಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕ ಡಿ.ಸುಧಾಕರ್, ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ, ಡಾ.ಬಿ.ಯೋಗೀಶ್ ಬಾಬು ಇತರರು ಪಾಲ್ಗೊಂಡಿದ್ದರು.