ಚಳ್ಳಕೆರೆ : ನಲಗೇತನಹಟ್ಟಿ ಗ್ರಾಪಂಯ ನೂತನ ಅಧ್ಯಕ್ಷರಾಗಿ ಎಂ.ಬಿ.ಬೋರಮ್ಮ ಅವಿರೋಧವಾಗಿ ಆಯ್ಕೆ
ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದವರು ರಾಜೀನಾಮೆ ನೀಡಿದ ಹಿನ್ನಲೆ ತೆರವುವಾಗಿದ್ದ ಸ್ಥಾನಕ್ಕೆ ಇಂದು ಎಂ.ಬಿ.ಬೋರಮ್ಮ ಅವಿರೋಧ ಆಯ್ಕೆಯಾಗಿದ್ದಾರೆ..
ಈ ವೇಳೆ ಗ್ರಾಪಂ ನೂತನ ಅಧ್ಯಕ್ಷೆ ಬೋರಮ್ಮ ಮಾತನಾಡಿ ನನಗೆ ಸಿಕ್ಕಿರುವ ಜವಾಬ್ದಾರಿಯುತ ಅಧಿಕಾರವನ್ನು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಿ ನಲಗೇತನಹಟ್ಟಿ ಗ್ರಾಮ ಪಂಚಾಯತಿಯನ್ನು ಮಾದರಿಯಾಗಲು ಶಕ್ತಿಮೀರಿ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಪಂಚಾಯತಿಯ ಕಾರ್ಯಾಲಯದಲ್ಲಿ ನಡೆದ ಅಧ್ಯಕ್ಷ ಸ್ಥಾನಕ್ಕೆ ಚುನಾವರಣೆ ಪ್ರಕ್ರಿಯೆಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ್ದಾರೆ ಸರ್ಕಾರಿ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು ಬಡ ಮತ್ತು ಮಧ್ಯಮ ವರ್ಗದ ಜನ ಪಂಚಾಯತಿಗೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿ ಮಾಡುತ್ತಾರೆ ಆದರೆ ಉಳ್ಳವರು ತೆರಿಗೆ ಪಾವತಿಯನ್ನು ಮಾಡುತ್ತಿಲ್ಲ ಮುಂದಿನ ದಿನಗಳಲ್ಲಿ ಅವರ ಬಳಿಯೂ ಪಾವತಿ ಮಾಡಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ಈ ವೇಳೆ ಊರಿನ ಮುಖಂಡರಾದ ಪಿಎಂ. ಪೂರ್ಣಓಬಯ್ಯ ಮಾತನಾಡಿ ಊರಿನ ಸರ್ವತೋಮುಖ ಅಭಿವೃದ್ಧಿಗೆ ಸರ್ವ ಸದಸ್ಯರು ಕೈಜೋಡಿಸಿ ಗ್ರಾಮವನ್ನು ಅಭಿವೃದ್ಧಿಪಥದತ್ತ ಕೊಂಡೆಯಲು 16 ಜನ ಸದಸ್ಯರ ಸಹಕಾರ ಅತಿ ಮುಖ್ಯ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಂ ಬಿ ಬೋರಮ್ಮ ನವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂಬಿ.ಬೊಮ್ಮಲಿAಗೇಶ್, ಸದಸ್ಯರಾದ ಈಗಲೂ ಬೋರಯ್ಯ, ಪಿಎಂ ಮುತ್ತಯ್ಯ, ಗೌಡ್ರು ಬೋರಯ್ಯ, ಪಿ ಎನ್ ಮುತ್ತಯ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀದೇವಿ ಬೋರೇಶ, ದೊಡ್ಡ ಬೋರಮ್ಮ ,ಸಣ್ಣ ಬೋರಮ್ಮ ಎಸ್ ಜಿ ಸಣ್ಣ ಬೋರಯ್ಯ, ಪುಷ್ಪಲತಾ ಜಿಬಿ.ಮುತ್ತಯ್ಯ, ಬೋರಮ್ಮ ಬಿಎನ್.ನಿಂಗರಾಜ್, ಜೆ.ಮಲ್ಲಿಕಾರ್ಜುನ್, ಪಿಟಿ.ಉಮಾದೇವಿ, ಬೊಮ್ಮಯ್ಯ, ದ್ರಾಕ್ಷಾಯಿಣಿ ಚಿದಾನಂದ, ಬಂಗಾರಯ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎನ್‌ಬಿ.ವೀರನಾಯಕ, ಪಿಎಸ್ಐಜೆ. ಶಿವರಾಜ್ , ಎಂಬಿ.ಸಣ್ಣ ಬೋರಯ್ಯ, ಸೇರಿದಂತೆ ಉಪಸ್ಥಿತರಿದ್ದರು