ಚಳ್ಳಕೆರೆ ನಗರದ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಮ್ಮಿಕೊಂಡಿದ್ದ ತಾಲೂಕ್ ಮಟ್ಟದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮಕ್ಕೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ರವರು, ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು, 1ರಿಂದ 19 ವರ್ಷದ ಮಕ್ಕಳಿಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವಿದ್ದು . ತಾವೆಲ್ಲರೂ ರಾಷ್ಟ್ರೀಯ ಜಂತುಹುಳುl ಮಾತ್ರೆಗಳನ್ನು ನಿಮ್ಮ ಮಕ್ಕಳು ಶಾಲೆಗಳು ಕಾಲೇಜುಗಳು ಅಂಗನವಾಡಿಗಳಿಗೆ ಹೋಗುವವರಿದ್ದರೆ ದಯವಿಟ್ಟು ಈ ದಿನವೇ ನೀಡಿ, ಆರೋಗ್ಯವಂತ ಮಕ್ಕಳ ಜೀವನಕ್ಕೆ ಕೈಜೋಡಿಸಿ ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ತಾಲೂಕ್ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಕಾಶಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್, ನಗರಸಭೆ ಅಧ್ಯಕ್ಷರಾದ ಸುಮಕ್ಕ ಅಂಜಿನಪ್ಪ, ನಗರಸಭೆ ಸದಸ್ಯರುಗಳಾದ ಸುಮಾ ಭರಮಯ್ಯ,ಕವಿತಾ ಬೋರಯ್ಯ , ಸಾವಿತ್ರಮ್ಮ , ರಮೇಶ್ ಗೌಡ ,ರಾಘವೇಂದ್ರ ,ವೀರಭದ್ರಯ್ಯ ಮತ್ತು ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!