ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಮೃತ ನಡಿಗೆ ಎಂಬ ಶೀರ್ಷಿಕೆಯಡಿ ಕ್ಷೇತ್ರದಾದ್ಯಂತ ಕೈಗೊಂಡಿರುವ 101 ಕಿ.ಮೀ ಪಾದಯಾತ್ರೆಯ 5ನೇ ದಿನದ ಪಾದಯಾತ್ರೆ ನಡಿಗೆಯು ಚಳ್ಳಕೆರೆ ನಗರಕ್ಕೆ ತಲುಪಿದೆ.
ನಂತರ ಚಳ್ಳಕೆರೆಯಿಂದ ಪ್ರಾರಂಭವಾದ ನಡಿಗೆಯು ಗೊರ್ಲಹಟ್ಟಿ ತಲುಪಿತು
ಪಾದಯಾತ್ರೆಯು ಮೊದಲನೇ ದಿನದಂತೆ ಯಾವುದೇ ಅಡೆತಡೆಯಿಲ್ಲದೆ ಜನರ ಅಭೂತ ಪೂರ್ವ ಬೆಂಬಲದೊಂದಿಗೆ ಯಶಸ್ವಿಯಾಗಿ ಸಾಗುತ್ತಿದೆ.
ಪಾದಯಾತ್ರೆಯಲ್ಲಿ ಶಾಸಕರೊಂದಿಗೆ ಹಜ್ಜೆ ಹಾಕುತ್ತಿರುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಮೊದಲನೇ ದಿನದಿನದಂತೆ ಅದೇ ಉತ್ಸಾಹದೊಂದಿಗೆ ಐದನೇ ದಿನದ ಪಾದಯಾತ್ರೆಯಲ್ಲೂ ಹೆಜ್ಜೆ ಹಾಕುತ್ತಿದ್ದಾರೆ.
ಶಾಸಕರು ಕೂಡ ಇವರೆಲ್ಲರ ಪ್ರೀತಿ, ಬೆಂಬಲದೊಂದಿಗೆ ಅದೇ ದಣಿವರಿಯದೇ ಅದೇ ಹುಮ್ಮಸ್ಸಿನಿಂದ ಹೆಜ್ಜೆ ಹಾಕುತ್ತಿದ್ದಾರೆ.
ಪಾದಯಾತ್ರೆ ವೇಳೆ ಜನರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.