ವಿಜೃಂಭಣೆಯಿAದ ನಲಗೇತನಹಟ್ಟಿಯಲ್ಲಿ ಮೊಹರಂ ಹಬ್ಬ ಆಚರಣೆ
ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮದಲ್ಲಿ ಹಿಂದೂ ಮುಸ್ಲಿಮರ ಪವಿತ್ರವಾದ ಮೊಹರಂ ಹಬ್ಬವನ್ನು ಸಡಗರ, ಸಂಭ್ರಮದಿAದ ಆಚರಿಸಲಾಯಿತು.
ಕಳೆದೆರಡು ವರ್ಷ ಕೋವಿಡ್ ಕಾರಣದಿಂದ ಪೀರಲ ಹಬ್ಬವನ್ನು ಆಚರಣೆ ಮಾಡಿರಲಿಲ್ಲ.
ಆದರೆ ಈ ಬಾರಿ ಕೋವಿಡ್ ಸೋಂಕು ಇಲ್ಲದೆ ಇರುವುದರಿಂದ ಪೀರಲ ಹಬ್ಬವನ್ನು ಗ್ರಾಮದಲ್ಲಿ ಅದ್ದೂರಿಯಾಗಿ ವಿಜೃಂಭಣೆಯಿAದ ಆಚರಣೆ ಮಾಡಲಾಯಿತು…
ಜುಲೈ 31 ರಿಂದ ಆರಂಭವಾದ ಪೀರಲ್ಲ ಹಬ್ಬವು ಗ್ರಾಮದ ಪೀರಲ ದೇವಾಲಯದಲ್ಲಿ ಪೀರಲ ದೇವರುಗಳನ್ನ ಕೂರಿಸಿ ಪ್ರತಿದಿನವೂ ಪೂಜಾ ಕೈಂಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು…
ಶುಕ್ರವಾರ ಸಣ್ಣಕೆಂಡೋತ್ಸವ ಗ್ರಾಮಸ್ಥರಿಂದ ಸಂಭ್ರಮಾಚರಣೆ ಮಾಡಲಾಯಿತು. ಮರುದಿನ ಶನಿವಾರ ಕತ್ತಲ ರಾತ್ರಿ, ಭಾನುವಾರ ಬೆಳ್ಳಂ ಬೆಳಗ್ಗೆ ಗ್ರಾಮದ ಯುವಕರು ಗ್ರಾಮದಲ್ಲಿ ವೇಷಗಳನ್ನು ಧರಿಸಿ ಊರಲ್ಲಿ ಮನೆಮನೆಯ ಸುತ್ತಿ ದವಸಾ ಧಾನ್ಯ ಹಣವನ್ನು ಸಂಗ್ರಹಿಸುತ್ತಾರೆ ಸಂಜೆ ವೇಳೆಗೆ ಪೀರಲ ದೇವರ ಹರಕೆ ಹೊತ್ತ ಭಕ್ತರು ಗ್ರಾಮದ ಪ್ರತಿಯೊಂದು ಮನೆಯಿಂದ ಚಕ್ಕಡಿಗಾಡಿಯೊಂದಿಗೆ ಕಟ್ಟಿಗೆಯನ್ನು ತಂದು ಪೀರಲು ದೇವರ ಭಕ್ತಿಯ ಅಗ್ನಿಕುಣಿಯಲ್ಲಿ ಹಾಕುತ್ತಾರೆ ರಾತ್ರಿ 7:00 ಯಿಂದ ಪೀರಲ ದೇವರಿಗೆ ಸಕ್ಕರೆ ಕಡ್ಲೆ ನೈವೇದ್ಯ ಸಮರ್ಪಿಸಿ ನಂತರ ಅಗ್ನಿಕುಣಿಗೆ ಬೆಂಕಿ ಸ್ಪರ್ಶಿಸುತ್ತಾರೆ.
ರಾತ್ರಿ ಇಡೀ ಗ್ರಾಮದ ಯುವಕರು ಪೀರಲ ದೇವರ ಕುಣಿಯ ಸುತ್ತ ಕುಣಿದು ಕುಪ್ಪಳಿಸುತ್ತಾರೆ. ಬೆಳಗಿನ ಜಾವ ಐದು ಗಂಟೆಗೆ ಪೀರಲ ದೇವರ ಪೂಜಾರಿ ಭಕ್ತರು ತಮ್ಮ ಹರಿಕೆಯ ಒತ್ತ ಭಕ್ತರಿಗೆ ಕೆಂಡಾರ್ಚನೆ ಗಾಳಿ ದೆವ್ವ ಭೂತಾಯಿ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಪರಿಹರಿಸುವಂತೆ ಪೀರಲು ದೇವರನ್ನು ಬೇಡಿಕೊಳ್ಳುತ್ತಾರೆ.
ನಂತರ ಗ್ರಾಮದ ಯುವಕರು ಕೆಂಡಾರ್ಚನೆಯ ಕೂಡ ನಡೆಯುತ್ತಿದ್ದು ಒಟ್ಟಾರೆ ಒಂಬತ್ತು ದಿನಗಳ ಕಾಲ ಗ್ರಾಮದಲ್ಲಿ ಪೀರಲ ದೇವರ ಸಂಭ್ರಮ ಸಡಗರದಿಂದ ವಾತಾವರಣವು ತುಂಬಿರುತ್ತದೆ.
ಸೋಮವಾರ ಸಂಜೆ ವೇಳೆಗೆ ಪೀರಲ ದೇವರುಗಳನ್ನು ನೀರಲ್ಲಿ ಹಾಕುತ್ತಾರೆ ಎಂಬ ಭಾವನೆಯೊಂದಿಗೆ ಸಮಪ್ತಿ ಮಾಡುತ್ತಾರೆ. ಹಾಗೆ ಮೂರು ದಿನಗಳ ನಂತರ ಪೀರಲ ದೇವರ ದಿವಸವನ್ನು ಗ್ರಾಮಸ್ಥರು ಇಂದಿನಿAದ ಮಾಡಿಕೊಂಡ ಬಂದ ಪದ್ಧತಿಯಾಗಿದೆ
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಪಿ.ಎಂ. ಪೂರ್ಣ ಊರಿನ ಪ್ರಮುಖರಾದ ದೊಡ್ಡ ಗೌಡ್ರು ಬೋರಯ್ಯ ,ನಲ್ಲನ ದೊಡ್ಡ ಬೋರಯ್ಯ, ಬಿ ನಾಗೇಶ್ ಗುಪ್ಪನಬೋರಯ್ಯ, ಮೂಗನ ಓಬಳೇಶ್, ಪಿ ಎನ್ ಮುತ್ತಯ್ಯ, ಕಂಪಲಿ ಚನ್ನಯ್ಯ,
ಮುಸ್ಲಿಂ ಬಾಂಧವರಾದ ಅಂಗಡಿ ದಾದಾಪೀರ್, ಟಿಪ್ಪು ಸಾಬ್ ,ಹೊನ್ನೂರ್ ಸಾಬ್, ಬುಡೇನ್ ಸಾಬ್, ತಡಿಮಾಮ್ ಸಾಬ್, ಅಂಗಡಿ ಟಿಪ್ಪು ಸಾಬ್, ಬಾಪುಸಯ್ಯ ,ಹುಸೇನ್ ಸಾಬ್, ಹಾಗೂ ಊರಿನ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು