ಚಳ್ಳಕೆರೆ : ರೈತರು ಸಾವಯವ ಕೊಟ್ಟಿಗೆ ಗೊಬ್ಬರ ಬಳಸುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕಿನ ಕಾಲುವೆಹಳ್ಳಿ ಗ್ರಾಮದ ರೈತ ಕೆ.ಪಿ.ಭೂತಯ್ಯರವರ ತೋಟಾಗಾರಿಕೆ ಬೆಳೆಗಳ ವಿಕ್ಷಣೆ ಹಾಗೂ ರೈತ ಸಂವಾದ ಕಾರ್ಯಕ್ರದಮಲ್ಲಿ ಭಾಗವಹಿಸಿ ಮಾತನಾಡಿದರು, ಹಿಂದಿನ ಕಾಲದಲ್ಲಿ ರೈತರು ತಮ್ಮ ತಮ್ಮ ದನಕರುಗಳ ಮೂಲಕ ಕೊಟ್ಟಿಗೆ ಗೊಬ್ಬರ ತಯಾರಿಸಿ ಬಳಕೆ ಮಾಡುವ ಮೂಲಕ ತಮ್ಮ ಜಮೀನು ಉಳಿಮೆ ಮಾಡುತ್ತಿದ್ದರು,
ಆದರೆ ಈಗ ರಾಸಾಯನಿಕ ಗೊಬ್ಬರಗಳಿಗೆ ದಾಸರಾಗಿ ಇಂದು ನಿರೀಕ್ಷೆಯ ಬೆಳೆಕೈಗೆ ಸಿಗದೆ ಆರ್ಥಿಕವಾಗಿ ನಷ್ಟ ಅನುಭವಿಸುತ್ತಾರೆ ಎಂದು ವಿಷಾಧ ವಕ್ತಪಡಿಸಿದರು.
ತೋಟಗಾರಿಕೆ ಇಲಾಖೆ ಸಹಯಾಕಧಿಕಾರಿ ಆರ್.ವಿರುಪಾಕ್ಷಪ್ಪ ಮಾತನಾಡಿ, ಇಂದು ರೈತರು ರಾಸಾಯಾನಿಕ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತತ್ತೆ ಕಳೆಗುಂದುತ್ತದೆ ಆದ್ದರಿಂದ ಕೊಟ್ಟಿಗೆ ಗೊಬ್ಬರ ಬಳಸಿ ಹಾಗೂ ತಾವೇ ತಯಾರಿಸಿದ ಜೀವಾಮೃತ ಬೆಳೆಗಳಿಗೆ ಸಿಂಪಡಿಸುವ ಮೂಲಕ ಬೆಳೆ ಸಂರಕ್ಷಣೆ ಮಾಡಕೊಳ್ಳಬೇಕು ಎಂದರು.
ಈದೇ ಸಂಧರ್ಭದಲ್ಲಿ ಕೃಷಿ ವಿಜ್ಞಾನಿ ಓಕಾಂರಪ್ಪ, ಉಪ ಕೃಷಿನಿದೇರ್ಶಕ ಕೆ.ಎಸ್.ಶಿವಕುಮಾರ್, ಕೃಷಿ ಸಹಯಾಕಧಿಕಾರಿ ಅಶೋಕ , ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ರೈತ ಮುಖಂಡ ವರಕೆರೆಪ್ಪ, ಹಿರಿಯೂರು ಸುರೇಶ್, ಹಿರೆಹಳ್ಳಿಜಿ.ತಿಪ್ಪೆಸ್ವಾಮಿ, ಗುರುಮೂರ್ತಿ, ಇತರು ಹಲವು ರೈತ ಮಹಿಳೆಯರು ಪಾಲ್ಗೊಂಡಿದ್ದರು.
ಬಾಕ್ಸ್ ಮಾಡಿ :
ಕಳೆದ ಹಲವು ದಿನಳಿಂದ ಬಿಟ್ಟು ಬಿಡೆದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ತಾಲೂಕಿನ ಹಲವು ಕಡೆ ವಿವಿಧ ಬೆಳೆಗಳು ಹಾನಿಯಾಗುವ ಸಂಭವಿದೆ ಆದ್ದರಿಂದ ಇಂದು ತಾಲೂಕಿನ ನಾಗಗೊಂಡನಹಳ್ಳಿ, ಮೀರಸಾಬಿಹಳ್ಳಿ, ದೊಡ್ಡುಳ್ಳಾರ್ತಿ, ಕಾಲುವೆಹಳ್ಳಿ, ಬೊಮ್ಮಸಮುದ್ರ ಈಗೇ ಹಲವು ಕಡೆ ತೋಟಗಾರಿಕೆ, ಕೃಷಿ ಇಲಾಕೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಿ ಮಳೆ ಹಾನಿ ಪರೀಶಿಲನೆಯ ಬಗ್ಗೆ ರೈತರು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಬೆಳೆ ನಷ್ಟ ವರದಿಯ ಬಗ್ಗೆ ಪರೀಶಿಲನೆ ನಡೆಸಿದ್ದೆವೆ.
— ಉಪ ಕೃಷಿನಿದೇರ್ಶಕ ಕೆ.ಎಸ್.ಶಿವಕುಮಾರ್, ಕೃಷಿ ಸಹಾಯಕ ಅಧಿಕಾರಿ ಜೆ.ಅಶೋಕ