ಪ್ರೀತಿಸಿ ಮದ್ವೆಯಾದ ಯುವ ಪ್ರೇಮಿಗಳಿಗೆ ಜಾತಿ ಅಡ್ಡಿ,
ಚಿತ್ರದುರ್ಗ: ಜಾತಿ ಹಾಗೂ ಧರ್ಮ ಭೇಧವನ್ನು ನಿರ್ಮೂಲನೆ ಗೊಳಿಸಲು ಸರ್ಕಾರ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುತ್ತಿದೆ.
ಆದರೆ ಕೋಟೆನಾಡು ಚಿತ್ರದುರ್ಗದ ಚಲವಾದಿ ಸಮುದಾಯದ ಯುವಕನೋರ್ವ, ಪಾವಗಡದ ಲಂಬಾಣಿ ಜನಾಂಗದ ಯುವತಿಯನ್ನು ಪ್ರೀತಿಸಿ ಮದುವೆಯಾಗಿರೋದು ದೊಡ್ಡ ವಿವಾದ ಎಬ್ಬಿಸಿದೆ.
ಹೀಗಾಗಿ ನವದಂಪತಿಗಳಿಗೆ ನೆಮ್ಮದಿಯಾಗಿ ಬದುಕಲು ಬಿಡದ ಯುವತಿಯ ಪೋಷಕರು ಇಬ್ಬರಿಗೂ ಪ್ರಾಣ ಬೆದರಿಕೆ ಹಾಕಿದ್ದಾರಂತೆ. ಈ ಕುರಿತು ಒಂದು ವರದಿ ಇಲ್ಲಿದೆ.
ಎಸ್ಪಿ ಕಚೇರಿಯ ಬಳಿ ಧಾವಿಸಿರೋ ನವ ದಂಪತಿಗಳು.
ಸಾಯ್ತಿನಿ ಹೊರೆತು ತಾಳಿ ಕಟ್ಟಿದ ಗಂಡನನ್ನು ಬಿಟ್ಟೋಗಲ್ಲ ಎನ್ನುತ್ತಿರುವ ಯುವತಿ.
ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ. ಹೌದು! ಕಳೆದ ಎರಡು ವರ್ಷಗಳ ಹಿಂದೆ ಚಿತ್ರದುರ್ಗ ತಾಲ್ಲೂಕಿನ ಸಜ್ಜನಕೆರೆ ಗ್ರಾಮದ ಪ್ರಕಾಶ ಎಂಬ ಈ ಯುವಕ ಖಾಸಗಿ ಬಸ್ ಚಾಲಕನಾಗಿ ಪಾವಗಡಕ್ಕೆ ತೆರೆಳುತಿದ್ದನು.
ಆಗ ಕಾಲೇಜಿಗೆ ಬರ್ತಿದ್ದ ಪಾವಗಡದ ಸಂಧ್ಯಾ ಎಂಬ ವಿದ್ಯಾರ್ಥಿನಿ ಈ ಯುವಕನನ್ನು ನೋಡಿ, ಮೆಚ್ಚಿಕೊಂಡು ಇಬ್ಬರು ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸಿದ್ರು. ಅಂದಿನಿAದ ಮೊಬೈಲ್‌ನಲ್ಲೇ ಲವ್ವಿ ಡವ್ವಿ ನಡೆಸುತಿದ್ದ ಪ್ರೇಮಿಗಳು ಕೊನೆಗೆ ಕಳೆದ ಶುಕ್ರವಾರವಷ್ಟೇ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ.
ಹೀಗಾಗಿ ಈ ವಿಚಾರ ತಿಳಿದ ಸಂಧ್ಯಾಳ ಪೋಷಕರು, ಪಾವಗಡದಿಂದ ಚಿತ್ರದುರ್ಗಕ್ಕೆ ಧಾವಿಸಿ, ಈ ನವ ದಂಪತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದಾರಂತೆ. ಅಲ್ಲದೇ ಅನ್ಯ ಜಾತಿಯ ಹುಡುಗನಿಗೆ ನಮ್ಮ ಹುಡುಗಿಯನ್ನು ಕೊಡಲ್ಲ, ಕೂಡಲೇ ನಮ್ಮ ಹುಡುಗಿಯನ್ನು ಕಳುಹಿಸಿ ಇಲ್ಲವಾದ್ರೆ ಪ್ರಕಾಶನ ತಂದೆಯನ್ನು ಕಿಡ್ನಾಪ್ ಮಾಡುವುದಾಗಿ ಬೆದರಿಸಿದ್ದಾರಂತೆ.
ಹೀಗಾಗಿ ಬೆಚ್ಚಿ ಬಿದ್ದಿರೋ ಪ್ರಕಾಶ ಹಾಗೂ ಸಂಧ್ಯಾ ನಮಗೆ ಸೂಕ್ತ ರಕ್ಷಣೆ ಒದಗಿಸುವಂತೆ ಚಿತ್ರದುರ್ಗ ಎಸ್ಪಿ ಮೊರೆಗೆ ಧಾವಿಸಿದ್ದಾರೆ. ಇನ್ನು ತನ್ನ ಪ್ರೀತಿ ಉಳಿಸಿಕೊಳ್ಳಲು ಹೆತ್ತವರನ್ನು ಬಿಟ್ಟು ಬಂದು, ತನ್ನ ಕೊರಳಿಗೆ ಪ್ರೇಮಿಯಿಂದ ತಾಳಿ ಕಟ್ಟಿಸಿಕೊಂಡಿರೊ ಸಂಧ್ಯಾ, ಇದ್ದರೆ ಪ್ರಕಾಶನ ಜೊತೆ ಇರ್ತಿನಿ, ಇಲ್ಲವಾದಲ್ಲಿ ಪ್ರಾಣ ಬಿಡ್ತೀನಿ ಹೊರೆತು ಅವರೊಂದಿಗೆ ಹೋಗಲ್ಲ ಎನ್ನುತಿದ್ದಾಳೆ.
ಸೊಸೆಯಂತ ಆಸೆಯಿಂದ ಒಪ್ಪಿಕೊಂಡಿರೋ ಪ್ರಕಾಶನ ತಾಯಿ, ಪ್ರೀತಿಸಿ ಮದ್ವೆಯಾದ ಜೋಡಿಯನ್ನು ಅಗಲಿಸಬೇಡಿ ಅಂತ ಅಂಗಲಾಚಿದ್ದಾರೆ. ಒಟ್ಟಾರೆ ಪ್ರೀತಿಸಿದ ಪ್ರೇಮಿಗಳು ಧೈರ್ಯ ಮಾಡಿ ಮದ್ವೆಯಾಗುವ ಮೂಲಕ ತಮ್ಮ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಆದರೆ ಪೋಷಕರ ಬೆದರಿಕೆಗೆ ಬೆಚ್ಚಿರೋ ನವ ದಂಪತಿಗಳು ತಮ್ಮ ಜೀವ ರಕ್ಷಣೆಗಾಗಿ ಚಿತ್ರದುರ್ಗ ಪೊಲಿಸರ ಮೊರೆಗೆ ಧಾವಿಸಿದ್ದು, ನವದಂಪತಿಗಳಿಗೆ ಸೂಕ್ತ ಭದ್ರತೆ ಒದಗಿಸಿ, ಅವರಿಗೆ ಹೊಸ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಬೇಕಿದೆ.