ಆಗಸ್ಟ್ 20 ರಂದು ದೇವರಾಜ್ ಅರಸು ಜನ್ಮದಿನ
ಚಳ್ಳಕೆರೆ : ದೇವರಾಜ್ ಅರಸು ಒಬ್ಬರು ಕೇವಲ ರಾಜಾಕರಣೀಯಾಗದೆ, ಸಮಾಜಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಭಿವೃಧ್ದಿಗಾಗಿ ಶ್ರಮಿಸಿದ ದಿಮಂತ ವ್ಯಕ್ತಿ ಹಿಂದೂಳಿದ ವರ್ಗಗಳ ಹರಿಕಾರನಾದ ಡಿ.ವದೇವರಾಜ ಅರಸು ಒಬ್ಬರು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ಜನ್ಮ ದಿನಾಚರಣೆಯ ಪೂರ್ವಭಾವಿ ಸಬೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಆಗಸ್ಟ್ 20ರಂದು ಆಚರಿಸುವ ಅರಸುರವರ ಜನ್ಮದಿನದಂದು ಸಾರ್ಥಕ ಮೆರೆಯುವ ಮೂಲಕ ಜನ್ಮ ದಿನಾಚರಣೆ ಆಚರಿಸಬೇಕು ಎಂದರು
ಇನ್ನೂ ಬಿಸಿಎಂ ಇಲಾಖೆ ಅಧಿಕಾರಿ ಜಗನ್ನಾಥ್ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಕೊವಿಡ್ ಕಾರಣಾಂತರಗಳಿAದ ಅತ್ಯಂತ ಸರಳವಾಗಿ ಸಮಾರಂಭವನ್ನು ಆಚರಿಸಿದ್ದೆವೆ ಆದರೆ ಈಗ ಕೊಂಚ ಕೊವಿಡ್ ಕಡಿಮೆ ಇರುವುದರಿಂದ ಅರ್ಥಗರ್ಭಿತವಾಗಿ ಆಚರಿಸಬೇಕು ಎಂದರು.
ಪಾವಗಡ ರಸ್ತೆಯ ದೇವಾರಾಜ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವರು, ಒಂದು ಸಾವಿರ ವಿದ್ಯಾರ್ಥಿಗಳ ಸಮೂಹದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ಹಾಗೂ ಹಿಂದೂಳಿದ ಸಮುದಾಯದಲ್ಲಿ ಅವಿರತ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸುವುದು ಸಭೆಯಲ್ಲಿ ತಿರ್ಮಾಣ ಕೈಗೊಂಡರು.
ಈದೇ ಸಂಧರ್ಭದಲ್ಲಿ ಪೌರಾಯುಕ್ತ ಸಿ,ಚಂದ್ರಪ್ಪ, ನಗರಸಭೆ ನರೇಂದ್ರಬಾಬು, ಮ್ಯಾನೇಜರ್, ಲಿಲಾವತಿ, ಹಾಸ್ಟೆಲ್ ವಾರ್ಡ್ನ್ ಸಿದ್ದಾಪುರ ಮಂಜುನಾಥ್, ಶೇಷಪ್ಪ, ಹುಸೇನ್‌ಸಾಬ್, ವಿರಭದ್ರಪ್ಪ, ಮಂಜುನಾಥ್, ಹರೀಶ್, ಉಷಾ, ಸುಮಿತ್ರಾ, ಇತರರು ಇದ್ದರು.