ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಗುಡುಗು, ಮಿಂಚು, ಸಿಡಿಲು ಸಹಿತ ಅಬ್ಬರಿಸಿದ ಮಳೆರಾಯ ಆರ್ಭಟಕ್ಕೆ ಸಣ್ಣ ಪುಟ್ಟ ಕೆರೆ ಕಟ್ಟೆಗಳು ಹಾಗೂ ಹಳ್ಳಕೊಳ್ಳಗಳು ಭರ್ತಿಯಾಗಿವೆ.

ಅಂದಹಾಗೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಕೆರೆ ಮತ್ತು ಗಾಂಧಿನಗರ ಕೆರೆ ಎರಡನೇ ಬಾರಿಗೆ ಕೊಡಿ ಬಿದ್ದು ಮೈದುಂಬಿ ಹರಿಯುತ್ತಿವೆ. ಹೂವಿನಹೊಳೆ ತೊರೆ ತುಂಬಿ ಹರಿಯುತ್ತಿದೆ. ರೈತರ ಹೊಲ ಗದ್ದೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ.

ತಾಲೂಕಿನ ಇಕ್ಕನೂರಿನಲ್ಲಿ 135.2 ಮಿಲಿ ಮೀಟರ್ ಅತ್ಯಧಿಕ ಮಳೆಯಾಗಿದೆ. ಕಸವನಹಳ್ಳಿ, ರಂಗನಾಥಪುರ, ನಂದಿಹಳ್ಳಿ, ಸೂಗೂರು, ಕುಂದಲಗೂರ, ಐಮಂಗಲ, ಈಶ್ವರೆಗೆರೆ ಸೇರಿದಂತೆ ಮತ್ತಿತರರ ಭಾಗಗಳಲ್ಲಿ ಜೋರು ಮಳೆಯಾಗಿದೆ. ಹೂವಿನಹೊಳೆ ಬಳಿ ಇರುವ ಸುವರ್ಣಮುಖಿ ನದಿ ತುಂಬಿ ಹರಿಯುತ್ತಿದ್ದು, ಗ್ರಾಮದ ನೂರಾರು ಜನರು ಸಂತಸದಿಂದ ವೀಕ್ಷಿಸಿದರು.

ಹೊಲ ಗದ್ದೆಗಳಲ್ಲಿ ನೀರು : ತಡರಾತ್ರಿ ಅಬ್ಬರಿಸಿದ ಮಳೆಗೆ ರೈತರ ಕೃಷಿ ಗದ್ದೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ಅಡಿಕೆ, ಬಾಳೆ, ಹತ್ತಿ, ಮೆಕ್ಕೆಜೋಳ ಸೇರಿದಂತೆ ಮತ್ತಿತರರ ಬೆಳೆಗಳು ನೀರಿಗೆ ಸಿಲುಕಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎನ್ನಬಹುದು.

2070 ಕ್ಯೂಸೆಕ್ ಒಳಹರಿವು : ಮಧ್ಯ ಕರ್ನಾಟಕದ ಜಲಪಾತ್ರೆ ಎಂದು ಕರೆಸಿಕೊಳ್ಳುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 2070 ಕ್ಯೂಸೆಕ ನೀರು ಹರಿದು ಬಂದಿದೆ ಎನ್ನಲಾಗಿದೆ

Namma Challakere Local News
error: Content is protected !!