ಚಳ್ಳಕೆರೆ : ಉತ್ತಮ ಸ್ಥಿತಿಯಲ್ಲಿರುವಂತಹ ವ್ಯಕ್ತಿಗಳು ಮತ್ತು ಉದ್ದಿಮೆದಾರರು ಈತಾಲೂಕಿನ ಅಸಹಾಯಕರಿಗೆ ಸಂಕಷ್ಟದಲ್ಲಿರುವ ಜನರಿಗೆ ಶಾಲೆಗಳ ದುರಸ್ತಿಗೆ ಮತ್ತು ನಿರುದ್ಯೋಗಿಗಳಿಗೆ ನೆರವಾಗಲು ಮುಂದಾಗಬೇಕೆAದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.


ಅವರು ಇಂದು ಟಾಟಾ ಕಂಪನಿಯವರು ತಳಕು ಪ್ರೌಢಶಾಲೆಗೆ ಉಚಿತವಾಗಿ ನೀಡಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಚಿತ್ರದುರ್ಗದ ಇತಿಹಾಸ ಮತ್ತು ಪರಂಪರೆಯನ್ನು ಮತ್ತು ಪಾಳೇಗಾರರ ವೀರಗಾಥೆಯನ್ನು ಕಾದಂಬರಿಗಳ ಮುಖಾಂತರ ವಿಶ್ವಕ್ಕೆ ಪರಿಚಯಿಸಿದ್ದು ತರಾಸು ರವರು ಇವರು ರಚಿಸಿರುವಂತ ರಕ್ತರಾತ್ರಿ, ಕಂಬನಿ, ಕೊಯ್ಲು ಹಾಗೂ ದುರ್ಗಾಸ್ತಮಾನ ಮುಂತಾದ ಕಾದಂಬರಿಗಳನ್ನು ಓದಿದರೆ ನಮ್ಮಗಳ ಮೈ ನವಿರೇಳುತ್ತವೆ, ಇಂತಹ ಸಾಹಿತಿಗಳು ಹುಟ್ಟಿದ ಈ ಗ್ರಾಮದಲ್ಲಿ ಶೈಕ್ಷಣಿಕ ನೆಲೆಗಟ್ಟು ಭದ್ರವಾಗಬೇಕು ಈ ಕ್ಷೇತ್ರದ ಶಾಸಕರು ಮತ್ತು ಮಂತ್ರಿಗಳು ದುರಸ್ತಿಯಲ್ಲಿರುವಂತಹ ಬಹುತೇಕ ಶಾಲೆಗಳಿಗೆ ಅನುದಾನವನ್ನು ಒದಗಿಸಿದ್ದಾರೆ.


ಹಾಗೆಯೇ ಶೈಕ್ಷಣಿಕವಾಗಿ ಈ ಭಾಗದ ಮಕ್ಕಳು ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನೀಡಬೇಕೆಂಬುದು ಅವರ ಬಯಕೆ ಹಾಗೆ ಈ ಶಾಲೆಯಲ್ಲಿ ಓದಿರುವಂತ ಈ ವರ್ಷದ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಶ್ರೇಯಂಕದಲ್ಲಿ ಈ ಶಾಲೆಯಲ್ಲಿ ಮೂರು ಜನರಿದ್ದಾರೆ


ಇದೇ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನೆರವು ನೀಡಿದ್ದಾರೆ ಈ ಶಾಲೆಯಲ್ಲಿನ ಶೌಚಾಲಯ ನಿರ್ವಹಣೆಯಲ್ಲಿ ತೀರ ಹಳೆಯದಾಗಿದ್ದು ಶೌಚಾಲಯಗಳ ನಿರ್ವಹಣೆಯನ್ನು ಶಾಲಾ ಸಿಬ್ಬಂದಿಗಳು ಸಮರ್ಪಕವಾಗಿ ಮಾಡಬೇಕು ಹಾಗೂ ಶಾಲೆಗಳಿಗೆ ಅಗತ್ಯವಿರುವಂತಹ ಇನ್ನು ಹೆಚ್ಚಿನ ಹೈಟೆಕ್ ಶೌಚಾಲಯಗಳನ್ನು ಈ ಸಂಸ್ಥೆಯವರು ನಿರ್ಮಿಸಿ ಕೊಡಬೇಕೆಂದು ಟಾಟಾ ಕಂಪನಿ ಅವರಿಗೆ ಮನವಿ ಮಾಡಿದರು.
ಟಾಟಾ ಕಂಪನಿಯ ವ್ಯವಸ್ಥಾಪಕ ರಮಣಗೌಡ ಮಾತನಾಡಿ ಈಗ ಕಂಪನಿ ವತಿಯಿಂದ ಒದಗಿಸಿರುವಂತ ಶುದ್ಧ ಕೊಡುಗೆ ನನಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಯಾದ ನಿರ್ವಹಣೆಯಿಂದ ನಡೆಸಿಕೊಂಡು ಹೋಗಬೇಕೆಂದು ಮುಂದಿನ ದಿನಗಳಲ್ಲಿ ಈ ಶಾಲೆಗೆ ಅಗತ್ಯವಿರುವಂತಹ ಮೂಲಭೂತ ಸೌಕರ್ಯಗಳನ್ನು ಕಂಪನಿವತಿಯಿAದ ಒದಗಿಸಲಾಗುವುದು ಎಂದು ಹೇಳಿದರು


ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ ಶಾಲೆಗೆ ಅಗತ್ಯವಿರುವಂತ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿರುವಂತಹ ಈ ಕಂಪನಿಯವರಿಗೆ ಇಲಾಖೆ ವತಿಯಿಂದ ಅಭಿನಂದಿಸಿದರು ಟಾಟಾ ಕಂಪನಿಯ ಸಿಬ್ಬಂದಿಯನ್ನು ಅದರ ಗೌರವಗಳೊಂದಿಗೆ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷÀ ವೀರೇಶ್, ಬಸವರೆಡ್ಡಿ, ತಳಕು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಶಾಲೆಯ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!