ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮದ ಅಂಗನವಾಡಿ ಡಿ, ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯ ಪಾನ ಸಪ್ತಹ ಕಾರ್ಯಕ್ರಮವನ್ನು ಆರೋಗ್ಯ ಮಹಿಳಾ ಕಾರ್ಯಕರ್ತೆ ಏಕಾಂತಮ್ಮ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ್ದಾರೆ.
ತಾಯಿಯ ಎದೆ ಹಾಲು ಮಕ್ಕಳಿಗೆ ಅತ್ಯುತ್ತಮವಾದ ಆಹಾರ ಮಗುವಿಗೆ ಅತಿ ಸುಲಭವಾಗಿ ಜೀರ್ಣವಾಗುತ್ತದೆ ಮಗು ಎದೆ ಹಾಲು ಚೀಪೋದರಿಂದ ಹಾಲಿನ ನಾಳಗಳು ಹಾಲನ್ನು ಹೆಚ್ಚಾಗಿ ಉತ್ಪತ್ತಿಯಾಗಿ ಎದೆ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ ಹಾಗೂ ತಾಯಿ ಮತ್ತು ಮಗುವಿನ ಸೌಂದರ್ಯವ ಹೆಚ್ಚುತ್ತದೆ.
ತಾಯಂದಿರು ಮಗುವಿಗೆ ಹಾಲುಣಿಸಿದರೆ ತಮ್ಮ ಹದಿಹರಿಯದ ಸೌಂದರ್ಯ ಹಾಳಾಗುತ್ತದೆ ಎಂಬ ಮೂಢನಂಬಿಕೆಗೆ ತಲೆಕೆಡಿಸಿಕೊಳ್ಳದೆ ಮಗುವಿಗೆ ಉಂಟಾಗಬಹುದಾದ ಅಪೌಷ್ಟಿಕತೆಯನ್ನು ದೂರಗೊಳಿಸಲು ತಾಯಂದಿರು ಮಗುವಿಗೆ ಎದೆ ಹಾಲು ತಪ್ಪದೆ ಕುಡಿಸಿ ಸದೃಢ ಆರೋಗ್ಯದ ಮಕ್ಕಳನ್ನು ಹೊಂದಲು ತಿಳಿಸಿದರು.
ನಂತರ ಅಂಗನವಾಡಿ ಶಿಕ್ಷಕಿ ಸಿ.ಬಿ.ಚಂದ್ರಮತಿ ಮಾತನಾಡಿ ತಾಯಿಯ ಎದೆ ಹಾಲಿನಲ್ಲಿರುವ ಪ್ರೋಟೀನ್ ಮಗುವಿನ ಮೆದುಳು ಬೆಳವಣಿಗೆ ಸಹಕಾರಿಯಾಗುತ್ತದೆ ಇದರಲ್ಲಿರುವ ಕೊಬ್ಬಿನಂಶವು ಮಗುವಿನ ನರಮಂಡಲ ಅಭಿವೃದ್ಧಿ ಆಗಲು ನೆರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕ ಮುಸ್ಟೂರಪ್ಪ, ಗ್ರಾಮಸ್ಥ ಎಸ್.ಜಿ ಸಣ್ಣಬೋರಯ್ಯ, ನಿಂಗರಾಜ್, ಆಶಾ ಕಾರ್ಯಕರ್ತೆ ಕೆಬಿ.ಪಾಪಮ್ಮ, ಎಸ್.ಮಂಜಮ್ಮ, ಟಿ.ಶೈಲಜಾ ,ಅಂಗನವಾಡಿ ಶಿಕ್ಷಕಿಯರಾದ ಈ ಎಸ್ ರಮ್ಯಾ, ಬಿ ಬೋರಮ್ಮ, ಸಹಾಯಕಿ ಕಲಾವತಿ, ತಾಯಂದಿರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು