ಚಳ್ಳಕೆರೆ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಕುಡುಕರ ಹಾವಳಿ ತಪ್ಪಿಸುವಂತೆ ನಾರಾಯಣಪುರ ಗ್ರಾಮಸ್ಥರು ಅಳಲು

ಅಬಕಾರಿ, ಪೊಲೀಸ್, ತಹಶೀಲ್ದಾರ್ ಹಾಗೂ ಶಾಸಕರಿಗೆ ಮನವಿ ನೀಡಲು
ತಾಲೂಕಿನ ಬೆಳಗೆರೆ ಗ್ರಾಪಂ ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ ಎಗ್ಗಿಲ್ಲದೆ ಕಿರಾಣಿ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ.

ಬೆಳಗೆರೆ ಹಾಗೂ ಹುಲಿಕುಂಟೆ ಗ್ರಾಮದಲ್ಲಿ ಈಗಾಗೆ ಅಕ್ರಮ ಮದ್ಯ ಮಾರಾಟಕ್ಕೆ ಗ್ರಾಮಸ್ಥರೆ ಸ್ವಯಂ ನಿಷೇಧ ಮಾಡಿ ಮದ್ಯ ಮುಕ್ತ ಗ್ರಾಮಗಳನ್ನಾಗಿ ಮಾಡಿರುವುದರಿಂದ ನಾರಾಯಣಪುರ ಗ್ರಾಮಕ್ಕೆ ಬೆಳೆಗೆರೆ, ಹುಲಿಕುಂಟೆ ಸೇರಿದಂತೆ ವಿವಿಧ ಗ್ರಾಮಗಳಿಂದ ಮದ್ಯ ಪ್ರಿಯರು ಮದ್ಯ ಸೇವನಗೆ ನಾರಾಯಪುರ ಗ್ರಾಮಕ್ಕೆ ಬರುತ್ತಿದ್ದು ಇದರಿಂದ ಗ್ರಾಮದಲ್ಲಿ ನೆಮ್ಮಿದಿಯ ಜೀವನ ನಡೆಸಲು ಕಿರಿಕಿರಿ ಯಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷ ಮಧು ಆರೋಪಿಸಿದರು.


ನಾರಾಯಣಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಅಪ್ರಪ್ತಬಾಲಕರು ಸಹ ಮದ್ಯದ ವ್ಯಸನಿಗಳಾಗಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮದ ಸಂಜೆಯಾದರೆ ಯುವಕರು, ವ್ಯಕ್ತಿಗಳು ಕೂಲಿಮಾಡಿದ ಹಣವನ್ನೆಲ್ಲ ಕುಡಿದು ಗ್ರಾಮದಲ್ಲಿ ದಿನ ನಿತ್ಯ ಗಲಾಟೆಗಳು ಮಾಡುತ್ತಾರೆ. ಇದರಿಂದ ನಮ್ಮ ಕುಟುಂಬಗಳು ಜೀವನ ನಡೆಸಲಾಗದೆ ಬೀದಿಗೆ ಬೀಳಬೇಕಾಗುತ್ತದೆ. ಗ್ರಾಮದಲ್ಲಿ ಕೂಡಲೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಮಹಿಳಾಸ್ವಸಹಾಯ ಸಂಘದ ಸದಸ್ಯರಾದ ಮಹಾಲಕ್ಷ್ಮಿ, ಶಕುಂತಲ, ಅಂಭಿಕ, ಸಾವಿತ್ರಮ್ಮ, ಜಗದಾಂಭ, ರೂಪ, ತಿಮ್ಮಕ್ಕ ಆಗ್ರಹಿಸಿದರು.


ಈ ವೇಳೆ ಗ್ರಾಮದ ಮುಖಂಡರಾದ ಲಿಂಗರಾಜ್, ನಾಗರಾಜ್, ನಾಗಭೂಷಣ್, ರುದ್ರಪ್ಪ, ನಾರಾಯಣಚಾರಿ ಇದ್ದರು.
ಚೇರಿಗೆ ಮನವಿ ನೀಡಿದ್ದಾರೆ.

About The Author

Namma Challakere Local News
error: Content is protected !!