ಚಳ್ಳಕೆರೆ : ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ಲೋಡರ್, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಒಂದೇ ಬಾರಿಗೆ ಖಾಯಂಗೊಳಿಸಲು ಒತ್ತಾಯಿಸಿ ಕಳೆದ ಮೂರು ದಿನಗಳಿಂದ ರಾಜ್ಯಾದ್ಯಾಂತ ನಡೆಸುವ ಪ್ರತಿಭಟಣೆಯು ಅಂಗವಾಗಿ ಚಳ್ಳಕೆರೆ ನಗರದಲ್ಲಿಯೂ ಕೂಡ ಪೌರಕಾರ್ಮಿಕರ ಪ್ರತಿಭಟನೆಯು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.


ಅದರಂತೆ ಇಂದು ಚಳ್ಳಕೆರೆ ನಗರದ ನಗರಸಭೆ ಮುಂಬಾಗದಲ್ಲಿ ಪ್ರತಿಭಟನ ನಿರತರು ಘೋಷಣೆಗಳನ್ನು ಕೂಗುತ್ತಾ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ತಮ್ಮ ಅಳಲನ್ನು ಪ್ರತಿಭಟನೆ ಮೂಲಕ ವ್ಯಕ್ತಪಡಿಸಿದ್ದಾರೆ.


ಕಳೆದ ಹಲವು ವರ್ಷಗಳಿಂದ ಕೇವಲ ಟೆಂಡರ್ ನೆಪದಲ್ಲಿ ನಮ್ಮ ಕುಟುಂಬವನ್ನು ಬೀದಿ ಬದಿಯ ಕಸದಂತೆ ಸರಕಾರ ಬಿಸಾಡಿದೆ, ಯಾವುದೇ ಭದ್ರತೆ ಇಲ್ಲದೆ ಕನಿಷ್ಠ ವೇತನದಲ್ಲಿ ಕಾಯಂಗೊಳಿಸಿದೆ ನಿಲ್ಯಕ್ಷö್ಯ ವಹಿಸುತ್ತಿದೆ, ಇದರಿಂದ ನಮ್ಮ ಕುಟುಂಬ ಬೀದಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ಹೊರಗುತ್ತಿಗೆಯಂತಹ ಸರ್ಕಾರದ ಗುಲಾಮ ಈ ಪದ್ಧತಿಯನ್ನು ರದ್ದು ಪಡಿಸಿ, ಎಲ್ಲಾರನ್ನು ಖಾಯಂ ಮಾಡಬೇಕು ಎಂದು ತಾಲೂಕಿನ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಪಾಪಣ್ಣ, ಹಾಗೂ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಾಕ್ಷ ಆರ್.ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಳೆದ ನಾಲ್ಕು ದಿನದಗಳಿಂದ ನಿರಂತರಾಗಿ ಪ್ರತಿಭಟನೆ ಮಾಡುತ್ತಿರುವ ಪೌರ ಕಾರ್ಮಿಕರ ಬದುಕು ಚಿಂತಜನಕವಾಗಿದೆ ಆದರೆ ಸರಕಾರ ಮಾತ್ರ ಮಣಿಯದೆ ಕಿವಿ ಕೆಳದ ರೀತಿಯಲ್ಲಿ ಮೌನ ವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಕಿಡಿ ಕಾರಿದರು.


ಇನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಂಬರುವ ವಿಧಾನ ಸಭಾ ಚುನಾವಣೆಯ ಪಕ್ಷೇತ್ರ ಅಭ್ಯರ್ಥಿ ಕೆ.ಟಿ.ಕುಮಾರ್‌ಸ್ವಾಮಿ ಮಾತನಾಡಿ, ದಿನ ನಿತ್ಯವೂ ರಸ್ತೆ ಬದಿಯಲ್ಲಿ ಕಸ ಬಳಿಯುವವರ ಪೌರ ಕಾರ್ಮಿಕರ ಬದುಕು ಬೀದಿಗೆ ಬಂದಿದೆ, ಆದರೆ ಸರಕಾರ ಮಾತ್ರ ಮೌನ ವಹಿಸಿದೆ, ಕೊರೊನಾ ಸಂಧರ್ಭದಲ್ಲಿ ಮಾತ್ರ ಕೊರೊನ ವಾರಿರ್ಯಸ್ ಎಂದು ಅವರನ್ನು ಪರಿಗಣಿಸಿ ಇಂದು ಅವರ ಬೇಡಿಕೆಗಳನ್ನು ಈಡೇರಿಸಿದೆ ರಸ್ತೆಗೆ ತಂದು ನಿಲ್ಲಿಸಿದೆ, ನಿಯಮಾನುಸಾರ ಗುತ್ತಿಗೆ ಪದ್ಧತಿ ರದ್ದು ಮಾಡಿ ಕೂಡಲೇ ಎಲ್ಲಾರನ್ನು ಕಾಯಂ ಪೌರಕಾರ್ಮಿಕರು ಎಂದು ಪರೀಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.


ಈ ನಿಯಮದಲ್ಲಿ ಕಾರ್ಮಿಕರನ್ನು ಕಸ ಗೂಡಿಸುವವರು. ಕಸವನ್ನು ಮನೆಗಳಿಂದ ಸಂಗ್ರಹಿಸುವವರು, ಟ್ರಾಕ್ಟರ್-ಲಾರಿ ಅಥವಾ ಆಟೋಗಳಿಗೆ ತುಂಬುವವರನ್ನ ಲೋಡರ್, ಕಸ ಸಾಗಿಸುವವರನ್ನ ಚಾಲಕರು, ಮತ್ತು ಒಳಚರಂಡಿಗಳಲ್ಲಿ ಮಲಮೂತ್ರ ಬ್ಲಾಕ್‌ಗಳನ್ನು ತೆರವುಗೊಳಿಸಿ ಚರಂಡಿ ಸ್ವಚ್ಛ ಮಾಡುವವರನ್ನ (ಯು ಜಿಡಿ ವರ್ಕರ್) ಎಂದು ಬೇರೆ ಬೇರೆಯಾಗಿ ವಿಂಗಡಿಸಿ ಪೌರಕಾರ್ಮಿಕರ ಒಗ್ಗಟ್ಟನ್ನು ಹೊಡೆದು ಹಾಕಿದ್ದಾರೆ.
ನಾವು ಇವರನ್ನ ಪೌರಕಾರ್ಮಿಕರು/ಸ್ವಚ್ಛತಾ ಕಾರ್ಮಿಕರು ಎಂದು ಸಾಮಾನ್ಯವಾಗಿ ಭಾವಿಸಿದ್ದೇವೆ, ಅದರೆ ಅಧಿಕಾರಿಗಳ ಅರ್ಥದಲ್ಲಿ ಕೇವಲ ಪೊರಕೆ ಹಿಡಿದು ಕಸ ಗೂಡಿಸುವವರು ಮಾತ್ರ ಪೌರಕಾರ್ಮಿಕರು, ಉಳಿದವರು’ ಬೇರೆ ಎಂದು ಪ್ರತ್ಯೇಕ ಮಾಡಿ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಈದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಪ್ರಶಾಂತ್ ಕುಮಾರ್, ಉಮೇಶ್, ಅಂಬೇಡ್ಕರ್ ನಗರದ ಓಬಳೇಶ್, ಆರ್.ಪ್ರಸನ್ನಕುಮಾರ್, ಜಗನ್ನಾಥ್, ವಿರೇಶ್, ಮಂಜುನಾಥ್, ಮಹೇಶ್, ಹನುಮಂತ, ಪ್ರಸನ್ನ ಕುಮಾರ್, ದುರುಗೇಶ್, ಕೆಂಚಾ, ಹರೀಪ್, ಪಾಪಣ್ಣ, ಶ್ರೀನಿವಾಸ್, ನಾಗರಾಜ್, ಬಸವ, ದಿವಕರ್, ರಾಜಶೇಖರ್, ಪಾಲಕ್ಷಿ, ಲಕ್ಷö್ಮಣ್, ಮಹಾಲಿಂಗಪ್ಪ, ಇನ್ನಿತರರು ಪ್ರತಿಭಟನೆ ನಿರತರಾಗಿದ್ದಾರೆ.

About The Author

Namma Challakere Local News
error: Content is protected !!