ಚಳ್ಳಕೆರೆ : ಕಳೆದ ಒಂದು ವರ್ಷ ದಿಂದ ಆಸ್ಪತ್ರೆ ಜಾಗ ವಿವಾದದಲ್ಲಿ ಗ್ರಾಮದ ಜನರು ಹಾಗೂ ಅಕ್ರಮದಾರರ ಮಧ್ಯೆ ವಿವಾಧ ನಡೆಯುತ್ತಲೆ ಇತ್ತು ಆದರೆ ವಿವಾದ ಬಗೆಹರಿಸುವಂತೆ ತಾಲೂಕು ತಹಶೀಲ್ದಾರ್ ಬಳಿ ಗ್ರಾಮಸ್ಥರು ಮನವಿ ಮಾಡಿಕೊಂಡ ಮರು ದಿನವೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎನ್ ರಘುಮೂರ್ತಿ , ಜಾಗ ವಿಧವಾದಕ್ಕೆ ತೆರೆ ಎಳೆದಿದ್ದಾರೆ.
ಹೌದು ನಿಜಕ್ಕೂ ಗ್ರಾಮದಲ್ಲಿ ಶಾಂತಿ ಸೌರ್ಹದಯುತ ಜೀವನ ನಡೆಸಲು ಸಾರ್ವಜನಿಕರ ಸ್ನೇಹಮಯಿ ಪಾತ್ರ ಅತೀ ಮುಖ್ಯ, ಆದ್ದರಿಂದ ಸಾರ್ವಜನಿಕರ ಹಿತ ದೃಷ್ಟಿಯಿಂದ ಗ್ರಾಮಕ್ಕೆ ತೆರಳಿದ ತಹಶೀಲ್ದಾರ್ ಎನ್ ರಘುಮೂರ್ತಿ, ಅಕ್ರಮದಾರರು ಹಾಗೂ ಜನರ ಮಧ್ಯೆ ಇರುವ ಗೊಂದಲಕ್ಕೆ ಪರಿಹಾರ ಹುಡುಕಿ, ಗ್ರಾಮದಲ್ಲಿ ನಿರ್ಮಾಣವಾಗುವ ಆಸ್ಪತ್ರೆಗೆ ಜಾಗ ನಿಗಧಿತ ಮಾಡಿ, ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
ತಾಲೂಕು ಟಿಎನ್ ಕೋಟೆ ಪ್ರಾಥಮಿಕ ಆಸ್ಪತ್ರೆ ಜಾಗದ ವಿವಾದವನ್ನ ಸೌಹಾರ್ದ ಯುತವಾಗಿ ಬಗೆಹರಿಸಿದ್ದಾರೆ.
ಗ್ರಾಮದ ಸರ್ವೆ ನಂಬರ್ 153ರಲ್ಲಿ 2,20 ಎಕರೆ ಜಮೀನನ್ನು ಸಾರ್ವಜನಿಕ ಆಸ್ಪತ್ರೆಗೆ ಜಾಗ ಹಾಗೂ ಸಾರ್ವಜನಿಕ ಓಡಾಟಕ್ಕೆ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಸೂಚನೆಯಂತೆ , ಅವರು ಈ ವಿವಾದವನ್ನು ತುರ್ತಾಗಿ ಬಗೆಹರಿಸಿ ಕಾಂಪೌಂಡ್ ನಿರ್ಮಾಣ ಮಾಡಲು ಸಂಬಂದಿಸಿದ ಗುತ್ತಿಗೆ ದಾರರಿಗೆ ಅನುವು ಮಾಡಿಕೊಡುವಂತೆ ಸೂಚಿಸಿದ್ದಾರೆ.
ಅದರಂತೆ ಇಂದು ರಾಜಶ್ವ ನಿರೀಕ್ಷಕರು ಮತ್ತು ಸರ್ವೇ ರವರೊಂದಿಗೆ ಬೆಳಗ್ಗೆ ಆಗಮಿಸಿದ ತಹಶೀಲ್ದಾರ್ ಎನ್. ರಘು ಮೂರ್ತಿ ಅಳತೆ ಮಾಡಿಸಿ ಗ್ರಾಮಸ್ಥರಿಗೆ ಅಗತ್ಯವಿರುವಂತಹ ಓಡಾಡಲು ಬೇಕಾಗಿರುವಂತ ಎಂಟು ಅಡಿ ದಾರಿಯನ್ನು ತೆರವುಗೊಳಿಸಿ ಗ್ರಾಮಸ್ಥರಿಗೆ ನೀಡಿ ಉಳಿದಂತ ಜಮೀನಿನಲ್ಲಿ ಕಾಂಪೌಂಡ್ ಗೋಡೆಯನ್ನು ನಿರ್ಮಿಸಿಕೊಡಲು ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಮಯದಲ್ಲಿ ರಾಜಸ್ಥ ನಿರೀಕ್ಷಕ ಮೋಹನ್, ಸರ್ವೆ ಅಧಿಕಾರಿ ಪ್ರಸನ್ನ ಕುಮಾರ್ , ಗ್ರಾಮಸ್ಥರು ಇತರರು ಪಾಲ್ಗೊಂಡಿದ್ದರು.