ಚಳ್ಳಕೆರೆ : ಕರ್ನಾಟಕ ರಾಜ್ಯ ಸಹಕಾರಿ ಪಡಿತರ ವಿತರಕರ ಸಂಘದಿಂದ ಜುಲೈ 5 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದ್ದಾರೆ.
ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿ ವಿ.ಎಸ್.ಎಸ್.ಎನ್ ಕಾರ್ಯದರ್ಶಿಗಳು ಸೀಮೆ ಎಣ್ಣೆ ವಿತರಕರು ಕರೋನದಂತ ಅತ್ಯಂತ ಸಂಕ್ರಮಣ ಕಾಲದಲ್ಲಿ ನಾವುಗಳು ಸಮರ್ಪಕವಾಗಿ ಪಡಿತರ ಚೀಟಿದಾರರಿಗೆ ಆಹಾರ ದಾನ್ಯಗಳು ಮತ್ತು ಇತರೆ ಸಾಮಾಗ್ರಿಗಳನ್ನು ಸಮರ್ಪಕವಾಗಿ ವಿತರಣೆ ಮಾಡಿದ್ದು ನಮಗೆ ಸರ್ಕಾರದಿಂದ ಯಾವುದೇ ರೀತಿಯಾದಂತಹ
ಸೌಲತ್ತುಗಳು ಇದುವರೆಗೂ ಈಡಿರಿಸಿಲ್ಲ.
ಆದ್ದರಿಂದ ಜುಲೈ5 ರಂದು ಬೆಂಗಳೂರು ಪ್ರೀಡಂ ಪಾರ್ಕ್ ಬಳಿ ರಾಜ್ಯದ ಎಲ್ಲಾ ಪಡಿತರ ವಿತರಕರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ, ನಮ್ಮ ಬೇಡಿಕೆ ಈಡೆರುವರೆಗೆ ಹಿಂಪಡೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಚೆನ್ನಾಗಿರಾಮಯ್ಯ ಮಾತನಾಡಿ ನಮ್ಮ ವಿತರಕರು ಕೊರೊನಾ ಸಂಧರ್ಭದಲ್ಲಿ ತಾಲ್ಲೂಕಿನಲ್ಲಿ
ಹಲವರು ಮರಣ ಹೊಂದಿರುತ್ತಾರೆ, ಈ ಮರಣದ ಕುರಿತು ಯಾವುದೇ ರೀತಿಯಾದಂತಹ ಪರಿಹಾರವನ್ನು ಸರ್ಕಾರವು ಅವರ ಕುಟುಂಬಕ್ಕೆ ಪರಿಹಾರವನ್ನು ಕೊಟ್ಟಿರುವುದಿಲ್ಲ. ಅದ್ದರಿಂದ ವಿವಿಧ ಬೇಡಿಕೆಗಳನ್ನು ಅದ್ದರಿಂದ ನಮ್ಮ ಬೇಡಿಕೆಗಳನ್ನು ಈಡಿರಿಸಲು ಪ್ರತಿಭಟನೆ ಅನಿವಾರ್ಯವಾಗಿದೆ ಎಂದಿದ್ದಾರೆ.
ಈದೇ ಸಂಧರ್ಭದಲ್ಲಿ ಅಧ್ಯಕ್ಷ
ಟಿ.ಕೃಷ್ಣಪ್ಪ (ಕೆ.ಕೆ.),
ಕಾರ್ಯಾಧ್ಯಕ್ಷ
ಡಿ.ತಾಯಣ್ಣ,
ಪ್ರಧಾನ ಕಾರ್ಯದರ್ಶಿ
ಚನ್ನಕೇಶವೇಗೌಡ,
ಉಪಾಧ್ಯಕ್ಷ
ಕೆ.ಎಲ್.ರಾಮಚಂದ್ರು
ದುಂಡಯ್ಯ,
ಖಜಾಂಚಿ
ನಟರಾಜ್ ಟಿ.ಎ.,
ಸಂಘಟನಾ ಕಾರ್ಯದರ್ಶಿ
ಓಮಣ್ಣ
ಸಿದ್ದಲಿಂಗಯ್ಯ
ಟಿ.ಕೆ.ಭಾಸ್ಕರ್
ಪ್ರಕಾಶ್ ಮಂಡೋಳು,
ಸಹ ಕಾರ್ಯದರ್ಶಿ
ಎನ್.ಶ್ರೀನಿವಾಸ್
ಎಂ.ರಾಜರೆಡ್ಡಿ
ಕೆ.ಎಸ್.ಸಿದ್ದರಾಮು,
ನಿರ್ದೇಶಕರು
ಎ.ಟಿ.ಗೋಪಾಲ್
ಸಿ.ವಿ.ಮರೀಗೌಡ
ಬಿ.ಹೇಮಣ್ಣ
ಆರ್.ಮಹದೇವಪ್ಪ
ಭರಮು ಮಂಗಸೂಳೆ
ಧನರಾಜ್ ಯಾದವ್
ನಾಗರಾಜು ಇದ್ದರು.