ಚಳ್ಳಕೆರೆ : ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಕನ್ನಡ ವಿರೋಧಿ ನೀತಿ ಖಂಡಿಸಿ ಹಾಗೂ ನಾಡ ದ್ರೋಹಿಗಳ ಬಂಧನಕ್ಕೆ ಅಗ್ರಹಿಸಿ.
ಇಂದು ಕರ್ನಾಟಕ ರಕಣಾ ವೇದಿಕೆ
ಪ್ರವೀಣ್‌ಕುಮಾರ್ ಶೆಟ್ಟಿ ಬಣದ ಚಳ್ಳಕೆರೆ ತಾಲ್ಲೂಕು ಶಾಖೆಯಿಂದ ಇಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

ಈದೇ ಸಂಧರ್ಭದಲ್ಲಿ
ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ಇತ್ತಿಚ್ಚೆಗೆ ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗಾಗಿ ಸಮತಿಯನ್ನು ರಚಿಸಿ ಆದರ ನೇತೃತ್ವವನ್ನು ರೋಹಿತ್ ಚಕ್ರತೀರ್ಥ ರವರಿಗೆ ವಹಿಸಿತ್ತು,

ಶಾಲಾ ಮಕ್ಕಳಿಗೆ ನಾಡು ನುಡಿಗಾಗಿ
ದುಡಿದವರ, ಮಡಿದವರ ಹಿರಿಮೆಯ ವ್ಯಾಸ್ತವ ಸಂಗತಿಗಳನ್ನು ತಿಳಿಸಿಕೊಡಬೇಕಾಗಿತ್ತು,

ದುರಂತವೆಂದರೆ ಈಗಾಗಲೇ
ತಮ್ಮ ನಡೆನುಡಿಯಲ್ಲಿ ಕನ್ನಡ ವಿರೋದಿತನವನ್ನೆ ಮೈಗೂಡಿಸಿಕೊಂಡ ವ್ಯಕ್ತಿಗೆ ನೇತೃತ್ವವನ್ನು ನೀಡುವ ಮೂಲಕ ರಾಜ್ಯ ಸರ್ಕಾರ ಎಡವಿತ್ತು ಅದನ್ನು ನಾಡಿನ ಹೆಸರಾಂತ ಲೇಖಕರು ಬುದ್ಧಿ ಜೀವಿಗಳು ವಿರೋಧಿಸಿ ಪತ್ರ ಕೂಡ ಬರೆದಿದ್ದರು
ಈ ಎಚ್ಚರಿಕೆಯ ನಂತರವಾದರೂ ತಮ್ಮ ನಡವಳಿಕೆ ತಿದ್ದುಕೂಳ್ಳಬೇಕಾಗಿದ್ದ ಚಕ್ರತೀರ್ಥ ಮತಷ್ಟು ಉದ್ದಟತನದಿಂದ ಸಂವಿದಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್, ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ರವರನ್ನು ಕೈಬಿಟ್ಟು ರಾಷ್ಟ್ರ ಕವಿ ಕುವೆಂಪು ರವರನ್ನು ಸೇರಿದಂತೆ ಇನ್ನೂ ಹಲವು ಮಹನಿಯರ ಬಗ್ಗೆ ಅವಹೇಳನ ಮಾಡಿ ಅವರನ್ನ ಅವಮಾನಿಸಿದ್ದಾರೆ.

ಇಡೀ ನಾಡಿನ ಜನರ ಭಾವನೆಗೆ ದಕ್ಕೆ ತಂದಿದ್ದಾರೆ. ಈಗಾಗಲೇ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಸಮಿತಿ ವಿಸರ್ಜಿಸಿದೆ.

ಆದರೆ ಪಠ್ಯದಲ್ಲಿ ಈಗಾಗಲೇ ಸೇರ್ಪಡೆಯಾಗಿರುವ ಅವಹೇಳನಕಾರಿ ವಿಷಯವನ್ನು ತೆಗೆದು ಹಾಕಿರುವ ಬಗ್ಗೆ ಯಾವುದೇ
ಸ್ಪಷ್ಟನೆ ಕೂಡ ನೀಡಿಲ್ಲ.

ನಾಡಿನ ಮಹಾನಿಯರನ್ನು, ಸಾಧಕರನ್ನು ಅವಮಾನಿಸಿರುವ ಚಕ್ರತೀರ್ಥ ರವರನ್ನು ಕೇವಲ ಕೈ ಬಿಟ್ಟರೆ ಸಾಲದು ಬದಲಾಗಿ ಅವರನ್ನು ಬಂಧಿಸಿ ಶಿಕ್ಷಿಸಬೇಕೆಂದು ಕರ್ನಾಟಕ ರಕ್ಷಣ ವೇಧಿಕೆ ಪ್ರವೀಣ್ ಶೆಟ್ಟಿ ಬಣ ಒತ್ತಾಯಿಸಿದೆ.

ತಾಲೂಕು ಅಧ್ಯಕ್ಷ ಪಿ. ಮಂಜುನಾಥ, ತಾಲೂಕು ಯುವ ಘಟಕ ಅಧ್ಯಕ್ಷ ಲಿಂಗಾರಾಜು, ಗೌರವ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಚಿದಾನಂದ,
ಆಟೋಘಟಕ ಅಧ್ಯಕ್ಷ ಮಧು ಕುಮಾರ್, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!