ಚಳ್ಳಕೆರೆ ; ಮಕ್ಕಳಿಗೆ ಉಪಯುಕ್ತವಾದ ಈ ಕಟ್ಟಡ ಸುಸಜ್ಜಿತವಾಗಿದೆ, ಯಾವುದೇ ಖಾಸಗಿ ಶಾಲೆಗಳಿಗೆ ನಾಚಿಸುವಂತಿದೆ, ಇಂತಹ ಸರಕಾರದ ಯೋಜನೆಗಳು ಅನುಷ್ಠಾನವಾಗಲು ಗ್ರಾಮೀಣ ಭಾಗದಲ್ಲಿ ಇತರನಾದ ಯೋಜನೆಗಳು ಸಫಲ್ಯವಾಗಬೇಕು ಎಂದು ಶಾಸಕ ಟಿ,ರಘುಮೂರ್ತಿ ಹೇಳಿದರು.
ತಾಲೂಕಿನ ದ್ಯಾವರಹಳ್ಳಿ ಗ್ರಾಮದಲ್ಲಿ ಶಿಶುಅಭಿವೃದ್ಧಿ ಯೋಜನೆ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ಆರಂಭವಾದ ಅಂಗನವಾಡಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಮತ್ತು ಅಮೃತ್ ಯೋಜನೆಯಡಿ ಶ್ರೀಮಾರಿಕಾಂಬಾ ದೇವಿಯ ದೇವಸ್ಥಾನದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು,
ಗ್ರಾಮೀಣ ಪ್ರದೇಶದ ಮಕ್ಕಳಿಗೆ ವರದಾನವಾದ ಈ ಕಟ್ಟಡ ಅತೀ ಸುಂದರ ಹಾಗೂ ಸುಸಜ್ಜಿತವಾಗಿದೆ, ಬಾಲ್ಯದಲ್ಲಿ ಕಲಿತ ಪಾಠ ಜೀವನದ ಕೊನೆಯ ತನಕ ಎಂಬ ಮಾತಿನಂತೆ ಅಂಗನವಾಡಿಯಲ್ಲಿ ತೊದಲ ನುಡಿಗಳಿಂದ ಪ್ರಾರಂಭವಾದದ್ದು ಮುಂದಿನ ಜೀವನದ ಸುಗಮಕ್ಕೆ ನಾಂಧಿ ಹಾಡಲಿದೆ, ಅದರಂತೆ ಇಂದು ನೆರೆವೆರಿಸಿದ ಮಾರಿಕಾಂಭ ದೇವಾಸ್ಥಾನದ ಶಂಕುಸ್ಥಾಪನೆ ಮುಂದಿನ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳಿಗೆ ಮುನ್ನುಡಿ ಬರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಮ್ಮ ಆಂಜನೇಯ, ಉಪಾಧ್ಯಕ್ಷ ಆನಂದ್‌ಕುಮಾರ್ ಹಾಗೂ ಸದಸ್ಯರುಗಳು ಮಾಜಿ ಜಿಪಂ.ಅಧ್ಯಕ್ಷ ರವಿಕುಮಾರ್, ಮಾಜಿ ತಾಪಂ.ಸದಸ್ಯ ಭೂತಲಿಂಗಪ್ಪ, ವೀರಭದ್ರಪ್ಪ ಮಾಜಿ ಎಪಿಎಂಸಿ ಅಧ್ಯಕ್ಷ ಶಿವಣ್ಣ, ದೇವಾಸ್ಥಾನ ಟ್ರಸ್ಟ್ನ ಅಧ್ಯಕ್ಷ ಡಿ.ಡಿ.ರಾಜು, ಕಾರ್ಯದರ್ಶಿ ಡಿ.ದೇವರಾಜ್, ಖಜಾಂಚಿ ಪಿ.ಎಂ.ತಿಪ್ಪೆಸ್ವಾಮಿ, ಗೌಡ ಭೂತಯ್ಯ, ಶಿವಣ್ಣ, ಉಮೇಶ್, ಮಹದೇವಪ್ಪ, ಬಿ.ತಿಪ್ಪೆಸ್ವಾಮಿ, ರಾಜಕುಮಾರ್, ಭೂತರಾಜ್, ಕೆ.ಪಿ.ರಾಜಕುಮಾರ್, ಹನುಮಂತರಾಯ ಮತ್ತು ಮುಖಂಡರಾದ ರವಿಕುಮಾರ್, ತಿಪ್ಪೇಸ್ವಾಮಿ, ಗುಜ್ಜಾರಪ್ಪ, ಪ್ರಕಾಶ್, ಆಂಜನೇಯ, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.