ಚಳ್ಳಕೆರೆ : ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದ ಶಾಸಕರ ಭವನದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಶಿಭಿರ ಆಯೋಜಿಸಿದ್ದರು.
ಶಾಸಕ ಟಿ.ರಘುಮೂರ್ತಿ ಅಭಿಮಾನಿ ಬಳಗದವರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ದೃರ್ಶಯ ಎಲ್ಲೆಡೆ ಕಂಡು ಬಂದಿತು.
ಇನ್ನೂ ನಗರಕ್ಕೆ ಆಗಮಿಸಿದ ಶಾಸಕ ಟಿ.ರಘುಮೂರ್ತಿಯನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ನೀಡಿ ವಾಲ್ಮಿಕಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಂತರ ಶಾಸಕರ ಭವನದಲ್ಲಿ ಬಹು ಗಾತ್ರದ ದೊಡ್ಡ ಕೇಕ್ ಕತ್ತರಿಸುವ ಮೂಲಕ 59 ನೇ ವರ್ಷದ ಜನ್ಮ ದಿನಾಚರಣೆಯನ್ನು ಅನ್ನಸಂತರ್ಪಣೆ ಮಾಡುವ ಆಚರಿಸಿಕೊಂಡರು.
ಮುಂಜಾನೆಯಿಂದ ಅಭಿಮಾನಗಳ ಮನದಲ್ಲಿ ಮನೆ ಮಾಡಿದ ಕ್ಷೇತ್ರದ ಶಾಸಕರ ಪ್ರೀತಿ ಪಾತ್ರಕ್ಕೆ ನಗರದ ನೂರು ಹಾಸಿಗೆಯ ಸಾರ್ವಜನಿಕ ಆಸ್ವತ್ರೆಯಲ್ಲಿ ಹಾಲು ಬ್ರೆಡ್ ಹಣ್ಣು ವಿತರಿಸಿದ ಅಭಿಮಾನಿಗಳು ನಗರದ ಪ್ರಮುಖ ರಾಜಾ ಬೀದಿಗಳಲ್ಲಿ ಪ್ಲೆಕ್ಸ್ ಬಂಡಿಗ್ ಹಾಕಿಸಿ ಅಭಿಮಾನ ಮೆರೆದಿದ್ದಾರೆ.