ಚಳ್ಳಕೆರೆ : ಗ್ರಾಮೀಣ ಪ್ರದೇಶದ ಕಾರ್ಮಿಕರು ಉದ್ಯೋಗ ಬಯಸಿ ದೂರದ ಊರುಗಳಿಗೆ ಗುಳೆ ಹೊಗದೆ ತಾವಿದಲ್ಲಿಯೇ ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯೊಳಗೆ ಕೆಲಸ ಮಾಡಿ ಎಂದು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್. ನಂದೀನಿದೇವಿ ಹೇಳಿದ್ದಾರೆ.
ಅವರು ತಾಲೂಕಿನ ಸೊಮಗುದ್ದು, ಸಾಣಿಕೆರೆ, ಎನ್.ಮಹದೇವಪುರ, ಹಬ್ಬೆನಹಳ್ಳಿ, ತೊರೆಕೊಲಮನಹಳ್ಳಿಗೆ ಬೇಟಿ ನೀಡಿ ಕಾಮಗಾರಿಗಳನ್ನು ಪರೀಶೀಲನೆ ನಡೆಸಿ ನಂತರ ಮಾತನಾಡಿದರು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯೊಳಗೆ ನಿಮ್ಮ ಸ್ಥಳದಲ್ಲಿ ವೈಯಕ್ತಿ ಹಾಗೂ ಸಮುದಾಯ ಆಧಾರಿತ ಕೆಲಸ ಮಾಡಿ ಉದ್ಯೊಗ ಪಡಿಯಿರಿ, ನೂರು ದಿನಗಳ ಉದ್ಯೋಗ ಪೂರೈಸಲು ಅಧಿಕಾರಿಗಳು ಕಾಮಗಾರಿ ನಿಗಧಿ ಮಾಡಬೇಕು, ಕಾಮಗಾರಿ ಸ್ಥಳದಲ್ಲಿ ಉದ್ಯೋಗ ನಿರತರಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಇತ ದೃಷ್ಠಿಯಿಂದ ಪ್ರಾಥಮಿಕ ಕಿಟ್ ವ್ಯವಸ್ಥೆ ಒಳಗೊಂಡಿರಬೇಕು
ಗ್ರಾಮದಲ್ಲಿ ಘನತ್ಯಾಜ್ಯ ವಿಲೆವಾರಿ ಘಟಕ, ಅಮೃತಸರೋವಾರ ಕಾಮಗಾರಿ, ಆಗಷ್ಟ ೧೫ ರ ಒಳಗೆ ಮುಗಿಸಬೇಕು, ಉದ್ಯೋಗ ಬಯಸಿ ಬರುವ ವಿಕಲ ಚೇತನ ಹಾಗೂ ಹಿರಿಯ ನಾಗರೀಕರಿಗೆ ಉದ್ಯೋಗದಲ್ಲಿ ಶೇ.೫೦ ರಷ್ಟು ವಿನಾಯಿತಿ ನೀಡಬೇಕು ಎಂದರು.
ಈದೇ ಸಂಧರ್ಭದಲ್ಲಿ ತಾಪಂ.ಸಹಾಯಕ ನಿದೇರ್ಶಕ ಸಂತೋಷ್‌ಕುಮಾರ್, ತಾಂತ್ರಿಕ ಸಹಾಯಕ ಪ್ರಶಾಂತ್, ಎಂಇಎಸ್‌ಐ ಕೊಡಿನೇಟರ್ ಮಹೇಂದ್ರ, ಐಇಸಿ ಸಂಯೋಜಕ ಪ್ರವೀಣ್, ಪಿಡಿಒ ರಾಘವೇಂದ್ರ, ತಾಂತ್ರಿಕ ಸಹಾಯಕ ಅಧಿಕಾರಿ ಸುನೀಲ್, ಗ್ರಾಪಂ.ಅಧ್ಯಕ್ಷೆ ಜಯಂತಿ, ಸದಸ್ಯರು ಹಾಗೂ ಕಾರ್ಮಿಕರು ಹಾಜರಿದ್ದರು.

Namma Challakere Local News
error: Content is protected !!