ನಾಯಕನಹಟ್ಟಿ ::
ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಈ ದೇಶದ ಧೀಮಂತ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಕಾರ್ಯ ಶ್ಲಾಘನೀಯ ಎಂದು ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ಹೇಳಿದರು.
ಅವರು ಪಟ್ಟಣದ 14 ನೇ ವಾರ್ಡಿನ ರಾಮಾಂಜಿನಿ ಲಲಿತಮ್ಮ ದಂಪತಿಯ ಪುತ್ರಿ ಅಮೂಲ್ಯ ಥಸ್ಯೇಮಿಯಾ ಎಂಬ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿ ಅಮೂಲ್ಯ ರವರಿಗೆ 3ಲಕ್ಷ ಚಕ್ ವಿತರಣೆ ನೀಡಿ ಮಾತನಾಡಿ ಸುಮಾರು ವರ್ಷಗಳಿಂದ ಥಲಸ್ಯೇಮಿಯಾ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದಳು ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ ಬಿ ಶ್ರೀರಾಮುಲು ಮತ್ತು ಕೇಂದ್ರ ಸಚಿವ ನಾರಾಯಣಸ್ವಾಮಿಯವರ ನೆರವಿನೊಂದಿಗೆ ಮಗುವಿನ ಚಿಕಿತ್ಸೆಗಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ಪರಿಹಾರ ನಿಧಿಯಿಂದ 3ಲಕ್ಷ ಚಕ್ಕನ ಅಮೂಲ್ಯ ರವರಿಗೆ ಕಳಿಸಿದ್ದಾರೆ ಎಂದು ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ಚೆಕ್ 3 ಲಕ್ಷ ಚೆಕ್ ವಿತರಿಸಿದರು.
ನಂತರ ಎಸ್ಟಿ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ಮಾತನಾಡಿ ಕೂಲಿನಾಲಿ ಮಾಡಿ ಜೀವನ ಜೀವನ ನಡೆಸುತ್ತಿದ್ದ ದಂಪತಿಗಳಿಗೆ 11 ವರ್ಷದ ಬಾಲಕಿ ಅಮೂಲ್ಯ ರವರಿಗೆ ಥಲಸ್ಯೇಮಿಯಾ ಎಂಬ ರಕ್ತ ಸಂಬಂಧಿ ಗಾಳಿಯಿಂದ ತಮ್ಮ ಮಗಳಿಗೆ 10 ದಿನಕ್ಕೊಮ್ಮೆ ದೇಹದಲ್ಲಿ ರಕ್ತ ಬದಲಾವಣೆ ಮಾಡಬೇಕಾಗಿರುತ್ತದೆ ಇದರಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಅವರ ಪರಿಹಾರ ಮೂರು ಲಕ್ಷ ರೂಗಳು ಪರಿಹಾರವಾಗಿ ಕೊಟ್ಟಿರುತ್ತಾರೆ ಪರಿಹಾರದ ಚೆಕ್ ಅನ್ನು ಬಾಲಕಿ ಅಮೂಲ್ಯ ಚಿಕಿತ್ಸೆಗೆ ಪೋಷಕರು ಬಳಸಿಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ, ಮಂಡಲ ಎಸ್ ಟಿ ಮೋರ್ಚಾ ಅಧ್ಯಕ್ಷ ಸಿ ಬಿ ಮೋಹನ್ ಚೌಳ್ಳುಕೆರೆ, ಜಿಲ್ಲಾ ಎಸ್ ಟಿ ಮೋರ್ಛಾ ಪ್ರಧಾನ ಕಾರ್ಯದರ್ಶಿ ಮಾರುತಿ ನಾಯಕ, ಮೊದಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ ,
ಯುವ ಮೋರ್ಚಾ ಅಧ್ಯಕ್ಷ ವಿಷ್ಣು ಸಿಂಹ, ಸಹಸಂಚಾಲಕ ತಿಪ್ಪೇಸ್ವಾಮಿ, ಕಚೇರಿ ಕಾರ್ಯದರ್ಶಿ ತಿಪ್ಪೇಸ್ವಾಮಿ, ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು