ಚಳ್ಳಕೆರೆ : ಸಕಾಲಮತ್ತು ಭೂಮಿ ಯೋಜನೆಅಡಿ ಸಾರ್ವಜನಿಕರಿಗೆ ಕೊಡು ಮಾಡುತ್ತಿರುವಂತಹ ಸೌಲಭ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರಿಗೆ ನೀಡಿ ರಾಜ್ಯದಲ್ಲಿ ಮೂರನೇ ಶ್ರೇಯಾಂಕದಲ್ಲಿ ಇರುವುದು ತುಂಬಾ ಸಂತೋಷ ತಂದಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ತಾಲೂಕು ಕಚೇರಿಯಲ್ಲಿ ಇಂದು 59 ನೇ ಹುಟ್ಟು ಹಬ್ಬದ ನಿಮಿತ್ತ ಕಚೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮ ದಿನಚರಣೆ ಆಚರಿಸಿಕೊಂಡು ನಂತರ ಮಾತನಾಡಿದರು ಅವರು ಚಳ್ಳಕೆರೆ ತಾಲ್ಲೂಕು ಈಡೀ ರಾಜ್ಯದಲ್ಲಿ ಅತ್ಯಂತ ಎರಡನೇ ದೊಡ್ಡ ತಾಲ್ಲೂಕು ಆಗಿದ್ದು ಇಲ್ಲಿ ಸ್ವೀಕರಿಸುವ ಅರ್ಜಿಗಳ ಪ್ರಮಾಣವು ಕೂಡ ರಾಜ್ಯದಲ್ಲಿ ಅತಿಹೆಚ್ಚಿನ ಪ್ರಮಾಣದ್ದಾಗಿವೆ, ಜಿಲ್ಲೆಯ ಉಳಿದ 5 ತಾಲೂಕುಗಳಲ್ಲಿ ಸ್ವೀಕರಿಸುವ ಅರ್ಜಿಗಳು ಚಳ್ಳಕೆರೆ ತಾಲೂಕು ಒಂದರಲ್ಲಿ ಸ್ವೀಕೃತವಾಗಿವೆ, ಹೀಗಿದ್ದರೂ ಕೂಡ ಇಲ್ಲಿನ ತಹಶೀಲ್ದಾರ್ ಮತ್ತು ಸಿಬ್ಬಂದಿಗಳು ಎಲ್ಲಾ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಿ ಮೂರನೇ ಶ್ರೇಯಾಂಕ ಪಡೆದಿರುವುದು ಇವರ ಬದ್ಧತೆಯನ್ನು ತೋರಿಸುತ್ತದೆ
ಮುಂದಿನ ದಿನಗಳಲ್ಲಿಯೂ ಕೂಡ ಇದೇ ರ್ಯಾಂಕಿAಗ್ ಅನ್ನು ಪಡೆದು ಸಾರ್ವಜನಿಕರ ವಿಶ್ವಾಸ ಮತ್ತು ಪ್ರೀತಿ ಪಾತ್ರಕ್ಕೆ ಭಾಗಿಯಾಗಬೇಕೆಂದು ಹಾಗೂ ಈ ರೀತಿ ಕಾರ್ಯನಿರ್ವಹಿಸುತ್ತಿರುವ ತಾಸಿಲ್ದಾರ್ ಎನ್ ರಘುಮೂರ್ತಿ ಸಿಬ್ಬಂದಿಗಳನ್ನು ಅಭಿನಂದಿಸಿದರು
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ತಾಲೂಕ ಕಚೇರಿಯಲ್ಲಿ ಕೆಲಸ ನಿರ್ವಹಿಸುವಂತಹ ಎಲ್ಲಾ ಸಿಬ್ಬಂದಿಗಳಿಗೆ ಶಾಸಕರು ಅಭಿನಂದಿಸಿರುವುದು ಸಂತಸ ತಂದಿದೆ ಅವರ ಹುಟ್ಟು ಹಬ್ಬಕ್ಕೆ ಸರಕಾರವೇ ಅವರ ಕ್ಷೇತ್ರದ ತಾಲೂಕಿನಗೆ ಕೊಡುಗೆಯಾಗಿ ರಾಜ್ಯಕ್ಕೆ ಮೂರನೇ ಶ್ರೇಯಾಂಕ ಬಂದಿರುವುದು ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಹೊಗುವ ಮಹಾದಾಸೆಯಿಂದ ತನ್ನ ಕಾರ್ಯ ಮುಂದುವರೆಸಬೇಕು ಎಂದರು.
ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಮತ್ತು ತಾಸಿಲ್ದಾರ್ ಸಿಬ್ಬಂದಿಗಳು ಎಲ್ಲರೂ ಸೇರಿ ಶಾಸಕರಾದ ಟಿ ರಘುಮೂರ್ತಿ ಅವರನ್ನು ಹುಟ್ಟು ಹಬ್ಬದ ಪ್ರಯುಕ್ತ ಅಭಿನಂದಿಸಿ ಶಾಸಕರ ಆಶಯದ ಮೇರೆಗೆ ರಾಜ್ಯಕ್ಕೆ ಪಡೆದಿರುವ ಮೂರನೇ ಶ್ರೇಯಾಂಕದ ಕಾಣಿಕೆಯನ್ನು ಶಾಸಕರಿಗೆ ಸಮರ್ಪಿಸಿದರು ಇದೇ ಸಮಾರಂಭದಲ್ಲಿ ಗಾಯತ್ರಿರಘುಮೂರ್ತಿ, ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು