ಚಳ್ಳಕೆರೆ : ಇತ್ತೀಚೆಗೆ ನಗರದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ

ಹೌದು ನಗರದ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ ಟಾರ್ಗೆಟ್ ಮಾಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ನಗರದ ಹೃದಯ ಭಾಗವಾದ ನೆಹರು ವೃತ್ತ ಸಮೀಪದಲ್ಲಿ ‌ಬೈಕ್ ನಿಲ್ಲಿಸಿ ಹೊಗಿದ್ದ ವ್ಯಕ್ತಿ ಮತ್ತೆ ಬಂದು ನೋಡುವುದರೊಳಗೆ ಬೈಕ್ ನ‌ ಬ್ಯಾಟರಿ ಕಳುವಾದ ಘಟನೆ ನಡೆದಿದೆ.

ಈ ಹಿಂದೆ ಕೂಡ ಈದೇ ತರಹದ ಪ್ರಕರಣಗಳು ನಡೆಯುತ್ತಿವೆ ಇನ್ನೂ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡ ಕಳ್ಳರು ಪ್ರತಿನಿತ್ಯವೂ ಒಂದಿಲ್ಲೊಂದು ಸ್ಥಳೀದಲ್ಲಿ ಕಳ್ಳತನ ಎಸಗುತ್ತಿದ್ದಾರೆ.

ನಗರದಲ್ಲಿ ಸಂತೆ ಮಾರುಕಟ್ಟೆ, ಬೆಂಗಳೂರು ರಸ್ತೆ, ವಾಲ್ಮೀಕಿ ವೃತ್ತ, ಜನಸಂಧಣಿ ಇರುವ ಪ್ರದೇಶಗಳನ್ಮೆ ಅಡ್ಡವಾಗಿ ಮಾಡಿಕೊಂಡು ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

ಇನ್ನೂ ಪೊಲೀಸ್ ಮೂಲಗಳ‌ ಪ್ರಕಾರ ನಗರಕ್ಕೆ ಹೊರ ಜಿಲ್ಲೆಯ ಕಳ್ಳರು ಬಂದಿದ್ದಾರೆ ಆದ್ದರಿಂದ ಮಹಿಳೆಯರು, ಒಂಟಿಯಾಗಿ ಬೆಲೆ ಬಾಳುವ ಆಭರಣಗಳನ್ನು ಹಾಕಿಕೊಂಡು ಒಂಟಿಯಾಗಿ ಓಡಾಡಬಾರದು ಎಂದು ನಗರದಲ್ಲಿ ಪ್ರಕಟಣೆ ಮಾಡುತ್ತಿದ್ದಾರೆ.

About The Author

Namma Challakere Local News
error: Content is protected !!