ಚಳ್ಳಕೆರೆ : ಜೂನ್ 18 ರಂದು ಕಂದಾಯ ಸಚಿವ ಆರ್.ಅಶೋಕ್ ತಾಲೂಕಿಗೆ ಬೇಟಿ ನೀಡುವ ಕುರಿತು,
ಇಂದು ಘಟಪರ್ತಿ ಗ್ರಾಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವ ಭಾವಿ ಪರೀಶಿಲನೆ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿಕೊಂಡ ತಾಲೂಕು ಪಂಚಾಯತಿ ಕಾರ್ಯನಿರ್ವಾಣಾಧಿಕಾರಿ ಹನುಮಂತಪ್ಪ ಮಾತನಾಡಿ ಘಟಪರ್ತಿ ಗ್ರಾಮಕ್ಕೆ ಆಗಮಿಸುವ ಸಚಿವರ ಆಗಮನಕ್ಕೂ ಪೂರ್ವ ಅಧಿಕಾರಿಗಳ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಂತದ ಕಡತಗಳನ್ನು ವಿಲೆವಾರಿಮಾಡಬೇಕು ಯಾವುದೇ ಸಮಸ್ಯೆ ತಲೆದೊರದಂತೆ ಕ್ರಮವಹಿಸಬೇಕು ಎಂದು ಹೇಳಿದ್ದಾರೆ.
ಈದೇ ಸಂಧರ್ಭದಲ್ಲಿ ಘಟಪರ್ತಿ ಗ್ರಾಮ ಪಂಚಾಯತ್ ಪಿಡಿಓ ಪ್ರತಿಭಾ, ಅಧ್ಯಕ್ಷೆ ಉಮಾದೇವಿ, ಉಪಾಧ್ಯಕ್ಷ ಸೇವ್ಯಾನಾಯ್ಕ್, ಸದಸ್ಯ ರವಿಕುಮಾರ್, ಮಂಜುಳಾ, ಅಶ್ವಿನಿ, ವೀರೇಂಧ್ರಪ್ಪ, ರುದ್ರೇಶ್, ಲೋಕೇಶ್, ಎ.ರವಿಕುಮಾರ್, ಮಂಜುನಾಥ್, ನಿರಂಜನಾಗೌಡ, ನಾರಾಯಣ ರೆಡ್ಡಿ, ಪ್ರದೀಪ್
ಕೃಷ್ಣಪ್ಪ, ಬಾಬು, ಗ್ರಾಪಂ.ಸಿಬ್ಬಂದಿ, , ಕಂದಾಯ ಇಲಾಖೆ, ತಾಪಂ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಕೆ, ಅರಣ್ಯ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.