ಚಳ್ಳಕೆರೆ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ
ಮೇಲ್ದರ್ಜೆಗೇರಿಸಿ 6 ಮತ್ತು 7 ನೇ ತರಗತಿ ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಿಕ ಮಾಡಿ ಸ್ವಾಮಿ‌ ಎಂದು ಗ್ರಾಮೀಣ ಪ್ರದೇಶದ ಮುಗ್ದ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸ ದೃಷ್ಠಿಯಿಂದ ಪರಿ ಪರಿಯಾಗಿ ಬೇಡಿ ಕೊಳ್ಳುವ ದೃಶ್ಯ ಚಳ್ಳಕೆರೆ ನಗರದ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿಯಲ್ಲಿ ಕಂಡು ಬಂದಿತು

ಹೌದು

ನಿಜಕ್ಕೂ ಮಧ್ಯ ಕರ್ನಾಟಕ ಭಾಗದ ಆಂದ್ರಪ್ರದೇಶದ ಗಡಿಯನ್ನು ಹಂಚಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಗಡಿ‌ಭಾಗದ ಸರಕಾರಿ ಶಾಲೆಗಳ‌ ಉಳಿವಿಗೆ ಅಧಿಕಾರಿಗಳ ಹಾಗೂ ಕ್ಷೇತ್ರದ ಶಾಸಕರು ಹಗಲಿರುಳು ಶ್ರಮಿಸುತ್ತಿದ್ದಾರೆ

ಆದರೆ ಮಕ್ಕಳ ಸಂಖ್ಯೆಗೆ , ಶಿಕ್ಷಕರ ನೇಮಕ ವಿಚಾರದಲ್ಲಿ ಗಡಿ ಗ್ರಾಮಗಳಿಗೆ ಶಿಕ್ಷಕರ ಹೊಗದೆ ವರ್ಗಾವಣೆ ಬಯಸುವರೆ ಹೆಚ್ಚು ಇಂತಹ ಸಂದ್ಗಿದತೆಯಲ್ಲಿ , ಶಾಲಾ ಕೊಠಡಿಗಳು‌ ಕೂಡ ದುರುಸ್ಥಿ ಹಂತದಲ್ಲಿ ಇವೆ ಆದ್ದರಿಂದ ಈಗಾಗಲೇ ಈಡೀ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು‌ ನೀಡಿದ ಶಾಸಕರು

ಬಯಲು ಸೀಮೆಯ ಜನರಿಗೆ ಮೊದಲ ಆಧ್ಯತೆಯಾಗಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅತೀ ತುರ್ತಾಗಿ ಖಾಲಿ ಇರುವ ಶಿಕ್ಷಕರ ಕೊರತೆ ಹಾಗು ಕೊಠಡಿಗಳ ದುರಸ್ತಿಗೆ ಸರಕಾರದ ಮಟ್ಟದಲ್ಲಿ ಧ್ವನಿ ಎತ್ತಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ‌ಬಯಲು‌ ಸೀಮೆಯ ಜನರನ್ನು ಶೈಕ್ಷಣಿಕವಾಗಿ ಸಬಲೀಕರಣಕ್ಕೆ‌ ಮುನ್ನೂಡಿ ಬರೆಯುವ ಅನಿವಾರ್ಯತೆ ಎದುರಾಗಿದೆ.

ಈಗಾಗಲೇ ತಾಲ್ಲೂಕಿನಲ್ಲಿ ಸುಮಾರು 366 ಪ್ರಾಥಮಿಕ ಶಾಲೆಗಳಲ್ಲಿ ಕೇವಲ 1140 ಶಿಕ್ಚಕರು ಮಾತ್ರ ಕಾರ್ಯನಿರ್ವಾಹಿಸುತ್ತಿದ್ದಾರೆ ಇನ್ನೂ 21 ಮುಖ್ಯ ಶಿಕ್ಷಕರ ಖಾಲಿ ಹುದ್ದೆ, 35 ದೈಹಿಕ ಶಿಕ್ಷಕರು, 227 ಸಹ ಶಿಕ್ಷಕರ ಹುದ್ದೆ, 27 ಪ್ರೌಢಶಾಲಾ ಶಿಕ್ಷಕರ ಉದ್ದೆ ಖಾಲಿ ಇವೆ ಇದರಲ್ಲಿ ಕೇವಲ 149 ಅತಿಥಿ ಶಿಕ್ಷಕರನ್ನು ಮಾತ್ರ ನೇಮಕ ಮಾಡಿದೆ

ಇನ್ನೂ 110 ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರ ಹುದ್ದೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದೆ.

ಇನ್ನೂ ಗ್ರಾಮದ ಕುಮಾರಸ್ವಾಮಿ ಮಾತನಾಡಿ, ಚಳ್ಳಕೆರೆ ತಾಲೂಕಿನ ತೊರೆಬೀರನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಶಾಲೆಯ ಈ ಗ್ರಾಮಕ್ಕೆ ಸಾರಿಗೆ ಸಂಪರ್ಕ ಇರುವುದಿಲ್ಲ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 50 ಮಕ್ಕಳು ಇದ್ದು ಇವರೆಲ್ಲರೂ ಹಿರಿಯ ಪ್ರಾಥಮಿಕ ಶಾಲೆಗೆ ಬೆಳಗೆರೆ ನಾರಾಯಣಪುರ ಗ್ರಾಮಗಳಿಗೆ ಹೋಗಬೇಕಾಗಿರುತ್ತದೆ.

ಈ ಎರಡೂ ಗ್ರಾಮಗಳ ಶಾಲೆಗಳು ತೊರೆಬೀರನಹಳ್ಳಿ ಗ್ರಾಮದಿಂದ 10 ರಿಂದ 12 ಕಿ.ಮೀ. ದೂರವಿರುತ್ತವೆ ಮತ್ತು ಗ್ರಾಮದ ಸುತ್ತಲೂ ನದಿ ಹಾಗೂ‌ ವಾಣಿವಿಲಾಸ ನಾಲೆಗಳನ್ನು ಹೊಂದಿರುತ್ತದೆ

ಈ ಕುಗ್ರಾಮ ವಾಗಿರುವುದರಿಂದ ಈ ಗ್ರಾಮದಿಂದ ಮಕ್ಕಳು ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ದಾರಿಯಲ್ಲಿ ಅಡ್ಡಲಾಗಿ ವೇದಾವತಿ ನದಿ ಇದ್ದು ವರ್ಷ ಪೂರ್ತಿ ಇಕ್ಕೆಲಗಳಲ್ಲಿ ಸೀಮೆ ಜಾಲಿ ಜಂಗಲ್ ಬೆಳೆದಿದ್ದು ವೇದಾವತಿ ನದಿ ಸಹ ತುಂಬಿ ಹರಿಯುತ್ತಿದೆ.

ಈದೇ ರಸ್ತೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಇರುತ್ತದೆ.
ಬೆಳಗೆರೆ ನಾರಾಯಣಪುರ ಗ್ರಾಮಗಳ ಶಾಲೆಗಳಿಗೆ
ಇದರಿಂದ ಹೋಗಲು ಮಕ್ಕಳಿಗೆ ತೊಂದರೆಯಾಗುತ್ತದೆ.

ಆದ ಕಾರಣ ತಾವುಗಳು ದಯಮಾಡಿ ನಮ್ಮ ಗ್ರಾಮಕ್ಕೆ ಹಿರಿಯ ಪ್ರಾಥಮಿಕ ಶಾಲೆಯನ್ನು ನೀಡಿ 6 ಮತ್ತು 7 ನೇ ತರಗತಿಗಳನ್ನು ನಡೆಸಲು ಇಬ್ಬರು ಶಿಕ್ಷಕರನ್ನು ನೇಮಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹಾಗೂ ಶಾಲೆಗೆ ಅವಶ್ಯಕವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಮನವಿ ನೀಡಿದ್ದಾರೆ.


ಈದೇ ಸಂದರ್ಭದಲ್ಲಿ ‌ಆಶಾ, ಶಂಕರಲಿಂಗಪ್ಪ , ಆನಂತ, ಕುಮಾರಸ್ವಾಮಿ, ಮಾರುತೇಶ್, ಮಂಹತೇಶ್, ನರಸಿಂಹಮೂರ್ತಿ, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!