ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಅಕ್ರಮ ಮಧ್ಯೆ ಮಾರಾಟ ನಡೆಯುತ್ತಿದೆ ಆದರೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಕೆ ಮಾತ್ರ ಮೌನ ವಹಿಸಿರುವುದು ಶೋಚನೀಯ

ಆದರೆ ತಾಲೂಕು ಕಛೇರೆಗೆ ದಿನ ನಿತ್ಯವೂ ಅಕ್ರಮ ಮಧ್ಯೆ ಮಾರಾಟಕ್ಕೆ ಕಡಿವಾಣ ಹಾಕಿ ನಮ್ಮ ಮಕ್ಕಳ ಮಧ್ಯ ವಸನಿಗಳಿಂದ ತಪ್ಪಿಸಿ, ನಮ್ಮ ಗಂಡಂದಿರಿಂದ ನಮ್ಮ ತಾಳಿ ಭಾಗ್ಯ ಉಳಿಸಿ ಎಂಬ ಮನವಿಗಳು ಹೆಣ್ಣು ಮಕ್ಕಳಿಂದ ದೂರುಗಳು ಬರುತ್ತಿವೆ ಆದರೆ ಅಬಕಾರಿ ಇಲಾಖೆ ಮಾತ್ರ ಕಣ್ಣು ಮುಚ್ಚು‌ಕೂತಿದೆ ಇದರಿಂದ ಅಕ್ರಮ‌ ಮಧ್ಯೆ‌ ಮಾರಾಟಕ್ಕೆ ಹಿಂಬಾಗಿಲು ಮೂಲಕ ಏನಾದರೂ ಪರವಾನಗಿ ಕೊಟ್ಟರಾ..!!

ಎಂಬ ಸಂಶಯಗಳು ಸಾರ್ವಜನಿಕ ವಲಯದಲ್ಲಿ‌ ಹಬ್ಬಿವೆ.

ಹೌದು‌ ನಿಜಕ್ಕೂ ಗ್ರಾಮೀಣ ಪ್ರದೇಶಗಳಲ್ಲಿ ದುಡಿದ ಹಣವೆಲ್ಲಾ ಮಧ್ಯೆದ ಅಂಗಡಿಗೆ ನೀಡುವ ಇವರ ಜೀವನ ಚಿಂತ ಜನಕವಾಗಿದೆ ಆದರೆ ಅಕ್ರಮವಾಗಿ ಮಧ್ಯೆ ಮಾರಾಟ‌ ಮಾಡುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳದೆ ಇರುವ ಅಬಕಾರಿ ಇಲಾಖೆ ಕೆಲಸವೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಅದರಂತೆ ಇಂದು ತಾಲ್ಲೂಕಿನ ಭೀಮನಕೆರೆ ಗ್ರಾಮದ ಕಾಲೋನಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಇಂದು ತಹಶೀಲ್ದಾರ್ ಎನ್ ರಘುಮೂರ್ತಿ ಕಾಲೋನಿಗೆ ಭೇಟಿ ನೀಡಿ ಅಂಗಡಿಗಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.

ನಂತರ ಅಂಗಡಿ ಮಾಲೀಕರು ಹಾಗೂ ಗ್ರಾಮಸ್ಥರನ್ನು ಕುರಿತು ಮಾತನಾಡಿ ಮಧ್ಯೆ ಮಾರಾಟ ಹಾಗೂ ಸೇವನೆ ಆರೋಗ್ಯಕ್ಕೆ ಹಾನಿಕರ ಹಾಗೂ ಗ್ರಾಮಗಳ ನೆಮ್ಮದಿಗೆ ಭಂಗವಾಗುತ್ತದೆ. ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,

ಅದರಲ್ಲೂ ಶಾಲೆ ದೇವಸ್ಥಾನದ ಸಮೀಪ ಅಕ್ರಮ ಮಧ್ಯೆ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಚೇತನ್ ಕುಮಾರ್, ಗ್ರಾಮಲೆಕ್ಕಿ ಶರಣುಬಸಪ್ಪ, ಉಮೇಶ ಇದ್ದರು.

Namma Challakere Local News
error: Content is protected !!