ಚಳ್ಳಕೆರೆ :
ಸುಗ್ಗಿಯ ಹಬ್ಬ ಸಂಕ್ರಾಂತಿ ಹಬ್ಬದಂದೆ ಗ್ರಾಮದ ಕೆರೆಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.
ಹೌದು ರೈತರ ಹಬ್ಬದ ಸಂಕ್ರಾಂತಿ ದಿನದಂದೆ ಚಳ್ಳಕೆರೆ ತಾಲೂಕಿನ ಕ್ಯಾದಿಗುಂಟೆ ಗ್ರಾಮದ ಕೆರೆ
ಮಂಗಳವಾರ ಮುಂಜಾನೆ ಕೆರೆ ಕೋಡಿ ಬಿದ್ದೋರುವುದು
ಬಯಲು ಸೀಮೆಯ ಜನರಿಗೆ ವರದಾನವಾಗಿದೆ.
ಬರದ ನಾಡಿನ ಜನತೆಗೆ ಸಂಕ್ರಾಂತಿ
ಹಬ್ಬದ ಕೊಡುಗೆಯಾಗಿದೆ.
ಕ್ಯಾದಿಗುಂಟೆ ಗ್ರಾಮದ ಕೆರೆಯು ವಿಶೇಷವಾಗಿ ಮಳೆ
ಇಲ್ಲದಿದ್ದರೂ ಕೂಡ ಸಂಕ್ರಾಂತಿ ಹಬ್ಬದ ದಿನದಂದು ಕೊಡಿ
ಬಿದ್ದಿರುವುದು ರೈತ ಬಾಂಧವರಲ್ಲಿ ಸಂತಸ ಮೂಡಿಸಿದೆ
ತುಂಗಭದ್ರಾ ನದಿಯ ಹಿನ್ನಿರಿನಿಂದ ಪೈಪ್ ಲೈನ್ ಮೂಲಕ
ಚಳ್ಳಕೆರೆ ಪಾವಗಡಸೇರಿದಂತೆ 6 ತಾಲ್ಲೂಕಿಗಳ ಜನ
ಜಾನುವಾರು ಕುಡಿಯುವ ನೀರನ್ನು ಒದಗಿಸುವ
ಕಾಮಗಾರಿ ಪ್ರಗತಿಯಲ್ಲಿದ್ದು ಕ್ಯಾದಿಗುಂಟೆ ಸಮೀಪ
ಪಾವಗಡ ತಾಲೂಕಿಗೆ ಪಂಪಿಂಗ್ ಮಾಡುವ ಸಬ್
ಸ್ಟೇಷನ್ ಇದ್ದು ಕಾಮಗಾರಿಯ ಟ್ರಯಲ್ ನಡೆಯುತ್ತಿದ್ದು
ಟ್ರಯಲ್ ರನ್ ನೀರನ್ನು ಕ್ಯಾದಿಗುಂಟೆ ಕೆರೆಗೆ ಹರಿಯಲು
ಬಿಟ್ಟಿದ್ದರಿಂದ ಕೆರೆ ತುಂಬಿ ಕೂಡಿ ಬಿದ್ದಿರುವುದು ಈ
ಭಾಗದಲ್ಲಿ ಅಂತರ್ಜಲ ಹೆಚ್ಚಾಗಿ ಕುಡಿಯುವ ನೀರಿನ
ದಾಹ ನೀಗಿಸಿದಂಗಾಗಿದ್ದು ಟ್ರಯಲ್ ರನ್ ಮಾಡಲು
ನೀರು ವ್ಯರ್ಥಮಾಡದೆ ಕೆರೆಗೆ ಹರಿಸಿ ಕೋಡಿ ಬೀಳುವಂತೆ
ಮಾಡಿ ತುಂಗಾಭದ್ರಾ ಕಾಮಗಾರಿ ನಿರವವರ್ಹಣೆ ಹೊತ್ತ
ಅಧಿಕಾರಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಅಖಂಡ
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ
ಹಾಗೂ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನಾಗರಾಜು
ಧನ್ಯವಾದಗಳನ್ನು ತಿಳಿಸಿದ್ದಾರೆ.