ಡಿ.23.ರಿಂದ ಜ.10. ವರಗೆ ತಳಕು ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ.

ತಳಕು:: ತಳಕು ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ತಳಕು 66 /11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್.03- ಬೇಡರೆಡ್ಡಿಹಳ್ಳಿ ಮತ್ತು ಎಫ್05.- ಹಿರೇಹಳ್ಳಿ ಕೃಷಿ ಮಾರ್ಗಗಳ ಹೆಚ್ ಟಿ ರಿಕಂಡಕ್ಟಿಂಗ್ ಕಾಮಗಾರಿಯನ್ನು ‌ಬೆವಿಕಂ ವತಿಯಿಂದ ಕೈಗೆತ್ತಿಕೊಂಡರುವುದರಿಂದ ಸದರಿ ಮಾರ್ಗಗಳಲ್ಲಿ ಹಾಗೂ ಸದರಿ ಮಾರ್ಗಗಳ ಕ್ರಾಸಿಂಗ್ ಮಾರ್ಗಗಳಾದ ಎಫ್11- ರುದ್ರಮ್ಮನಹಳ್ಳಿ ಎನ್.ಜೆ.ವೈ ಮತ್ತು ಎಫ್16 – ಚಾಮುಂಡೇಶ್ವರಿ ಎಂಜಿ ವೈ ಮಾರ್ಗಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ಗ್ರಹಕರು ಮತ್ತು ರೈತರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಲ್ ಜಿ ಮಮತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು .
ಬೇಡರೆಡ್ಡಿಹಳ್ಳಿ ,ಹಿರೇಹಳ್ಳಿ, ಬುಕ್ಲೋರಹಳ್ಳಿ, ಕೋಡಿಹಳ್ಳಿ, ಚಿಕ್ಕಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ಜಂಬಯ್ಯನಹಟ್ಟಿ, ಕೆರೆಯಾಗಳಹಳ್ಳಿ ಭೋವಿ ಕಾಲೋನಿ, ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ

About The Author

Namma Challakere Local News
error: Content is protected !!