filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.26928556, 0.31839293);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;

ಚಳ್ಳಕೆರೆ : ಒಳ ಮೀಸಲಾತಿ ಶೀಘ್ರ ಜಾರಿಗಾಗಿ ಚಳ್ಳಕೆರೆ ತಾಲೂಕು ಕಚೇರಿಗೆ ಪಾದಯಾತ್ರೆ ನಡೆಸಲು ತಳಕು- ನಾಯಕನಹಟ್ಟಿ ಹೋಬಳಿಗಳ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಡಿಸೆಂಬರ್ 19 ರಂದು ನಾಳೆ ಗುರುವಾರ 9 ಗಂಟೆಗೆ ತಳಕು ಗರಣಿ ಕ್ರಾಸ್, ನಿಂದ ಪ್ರಾರಂಭಗೊಂಡ ಪಾದಯಾತ್ರೆ.

ಮದ್ಯಾಹ್ನನ 2 ಗಂಟೆ ಸಮಯಕ್ಕೆ ಸುಮಾರು ಒಂದು ಸಾವಿರ ಜನಸಂಖ್ಯೆಯೊಂದಿಗೆ ಕಾಲ್ನಡಿಗೆ ಮೂಲಕ ಒಳ ಮೀಸಲಾತಿಯನ್ನು ಶೀಘ್ರವಾಗಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಚಳ್ಳಕೆರೆ ತಾಲೂಕು ಕಚೇರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದರು.

ಇನ್ನು ಸುಮಾರು 15 ಕಿಲೋ ಮೀಟರ್ ವ್ಯಾಪ್ತಿಯ ಪಾದಯಾತ್ರೆಯ ಉದ್ದಕ್ಕೂ ತಮಟೆ ವಾದ್ಯ ವಿವಿಧ ಘೋಷಣೆಗಳನ್ನು ಅಂಬೇಡ್ಕರ್ ತತ್ವದ ಅಡಿಯಲ್ಲಿ ಒಳ ಮೀಸಲಾತಿ ಜಾರಿಗಾಗಿ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿ ಹಳ್ಳಿಯಿಂದ ಜನಾಂಗದ ಆಂದೋಲನದ ಮೂಲಕ ತಾಲೂಕ ಕಚೇರಿಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

ಆದ್ದರಿಂದ ತಾಲೂಕಿನ ಎಲ್ಲಾ ಒಳ ಮೀಸಲಾತಿ ಜಾರಿಗಾಗಿ ಶ್ರಮಿಸುವಂತಹ ಎಲ್ಲಾ ಸಮುದಾಯದ ಬಾಂಧವರು ಹಾಗೂ ತಳಕು ನಾಯಕನಟ್ಟಿ ಹೋಬಳಿಗಳ ಹೋರಾಟದ ಸಮಿತಿಯ ಪದಾಧಿಕಾರಿಗಳು ಸಾರ್ವಜನಿಕರು ಬಂಧುಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು

ಇದೇ ಸಂಧರ್ಭದಲ್ಲಿ ನಿವೃತ್ತ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ದಲಿತ ಸಂಘರ್ಷ ಸಮಿತಿ ಟಿ.ವಿಜಯ್ ಕುಮಾರ್, ನಾಗರಾಜ್, ಭೀಮನಕೆರೆ ನಿಂಗರಾಜ್, ರೇವಣ್ಣ , ವೀರಣ್ಣ , ಶಂಕರ್ ಸ್ವಾಮಿ, ಹಿರೆಹಳ್ಳಿ ಮಲ್ಲೇಶ್, ಮರಿಪಾಲಯ್ಯ, ಬಸವರಾಜ್, ವೆಂಕಟೇಶ್, ರುದ್ರಮುನಿ, ದುರ್ಗೇಶ್ ಚಂದ್ರಣ್ಣ , ಹೊನ್ನೂರು ಮಾರಣ್ಣ , ಚನ್ನಗಾನಹಳ್ಳಿ‌ ಮಲ್ಲೆಶ್ , ಎಸ್ ರಾಜಣ್ಣ, ರುದ್ರಮುನಿಯಪ್ಪ , ಹಾಗೂ ಇತರರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!