ಚಳ್ಳಕೆರೆ :
ಚಳ್ಳಕೆರೆ: ಗಾಂಜಾ ಪೆಡ್ಲರ್ ಗಳ ಹುಡುಕಾಟ
ತೀವ್ರಗೊಳಿಸಿದ ಅಬಕಾರಿ ಇಲಾಖೆ
ಕಳೆದ 15 ದಿನಗಳ ಹಿಂದೆ ಅಬಕಾರಿ ಅಧಿಕಾರಿಗಳು ಚಳ್ಳಕೆರೆಯ
ಹೊರ ವಲಯದ ಮನೆಯಲ್ಲಿ 13 ಕೆ ಜಿ ಒಣ ಗಾಂಜಾ ಜೊತೆಗೆ
ದಾದಾಪೀರ್ ನನ್ನು ಬಂಧಿಸಿದ್ದರು.
ಅವನು ನೀಡಿದ ಮಾಹಿತಿ
ಪ್ರಕಾರ ಆಂಧ್ರದಿಂದ ಗಾಂಜಾ ಪೂರೈಕೆಯಾಗುತ್ತಿರುವುದು ತಿಳಿದು
ಬಂದಿತ್ತು. ಇದರ ಬೆನ್ನಲ್ಲೆ ತನಿಖೆಯನ್ನು ಚುರುಕುಗೊಳಿಸಿದ
ಇಲಾಖೆ,
ದಾದಾಪೀರ್ ಮೇಲೆ ಹದ್ದಿನ ಕಣ್ಣನ್ನು ಇಟ್ಟಿದೆ.
ಇದರ ಜೊತೆಗೆ ಬೇರೆ ಮೂಲಗಳಿಂದ ಮಾಹಿತಿ ಕಲೆ ಹಾಕಿದ್ದು,
ತನಿಖೆಯನ್ನು ತೀವ್ರಗೊಳಿಸಿದ್ದೇವೆಂದು ಅಬಕಾರಿ ಡಿಸಿ ಮಾದೇಶ್
ತಿಳಿಸಿದರು.