ಚಳ್ಳಕೆರೆ :
ಚಿತ್ರದುರ್ಗ: ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಿದ
ಬಸವ ದಳ
ವಿಶ್ವ ಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತಾಡಿರುವ,
ಶಾಸಕ ಬಸವನಗೌಡ ಯತ್ನಾಳ್ ವಿರುದ್ಧ ಬಸವದಳದ
ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ
ನಡೆಸಿದರು.
ಯತ್ನಾಳ್ ಬಸವಣ್ಣನವರಿಗೆ ಹಗುರವಾಗಿ ಮಾತಾಡುವ ಮೂಲಕ
ಅವರ ಅನುಯಾಯಿಗಳಿಗೆ ಮನ ನೋಯಿಸಿದ್ದಾರೆ.
ಒಂದು
ಸಮುದಾಯದ ಬಗ್ಗೆ ಮಾತಾಡುವ ಮೂಲಕ ಕೋಮು ಗಲಭೆ
ಸೃಷ್ಠಿಸಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಇದರಿಂದ
ಯತ್ನಾಳ್ ಅವರು ಸಮಾಜವನ್ನು ಕ್ಷಮೆ ಕೋರಬೇಕು ಎಂದು
ಬಸವ ದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ.