ನಾಯಕನಹಟ್ಟಿ ಪಟ್ಟಣದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಡಾ|| ಬಿ.ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಿಸಬೇಕೆಂದು ೯ನೇ ವಾರ್ಡಿನ ಪಟ್ಟಣ ಪಂಚಾಯ್ತಿ ಸದಸ್ಯ ಜೆ.ಆರ್ ರವಿಕುಮಾರ್ ಪಟ್ಟಣ ಪಂಚಾಯ್ತಿ ಅಧ್ಯಕ್ಷೆಯಾದ ಮಂಜುಳ ಶ್ರೀಕಾಂತ್ ಅವರಿಗೆ ಮನವಿ ಮಾಡಿಕೊಂಡರು.

ಪಟ್ಟಣದ ಪಟ್ಟಣ ಪಂಚಾಯ್ತಿ ಕಾರ್ಯಲಯದಲ್ಲಿ 2025 – 26ನೇ ಸಾಲಿನ ಎರಡನೇಯ ಆಯ ವ್ಯಯ ಪೂರ್ವಭಾವಿ ಸಭೆ ಪ.ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಅವರ ಅಧ್ಯಕ್ಷೆಯಲ್ಲಿ ಸೋಮವಾರ ಸಭೆ ನಡೆಯಿತು, ನಂತರ ಮಾತಾಡಿದ ಅವರು ಯಾವುದೇ ಸಭೆ ನಡೆದರು ಇಂಜಿನಿಯರ್ ಕರೆಸಿ ಸಭೆ ಮಾಡಬೇಕು ನಾಯಕನಹಟ್ಟಿ ಪಟ್ಟಣ ಪಂಚಾಯ್ತಿ ಅಭಿವೃದ್ಧಿ ಆಗಬೇಕಾದರೆ ಅನುದಾನದ ಕೊರತೆ ಇರುವುದರಿಂದ ಕಂದಾಯ ವಸೂಲಿ ಆಗಬೇಕಾಗಿ ಎಂದು ತಿಳಿಸಿದರು.

ಒಂದನೇ ವಾರ್ಡಿನ ಪಟ್ಟಣ ಪಂಚಾಯ್ತಿ ಸದಸ್ಯ ಎಂ.ಟಿ ಮಂಜುನಾಥ ಮಾತಾನಾಡಿ ಜಾಗನೂರಹಟ್ಟಿ ವಾರ್ಡಿನಲ್ಲಿ ಸಿ.ಸಿ ರಸ್ತೆ ಡಾ|| ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ, ವಾಲ್ಮೀಕಿ ಸಮುದಾಯ ಭವನ, 10 ಹೈ ಮಾಸ್ಕ್ ಲೈಟ್ , ಕೆರೆಯ ಹೇರಿಯಾ ಮೇಲೆ ಲೈಟ್ ಕಂಬಗಳು, ಚನ್ನಬಸಯ್ಯನಹಟ್ಟಿ ಮತ್ತು ತೊರೆಕೋಲಮ್ಮನಹಳ್ಳಿ ಹೋಗುವ ಹಾದಿಯಲ್ಲಿ ಎರಡು ಸ್ವಾಗತ ಫಲಕ ನಿರ್ಮಿಸಿಬೇಕು, ಎಸ್.ಸಿ ಕಾಲೋನಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಬೋರ್‌ವೆಲ್ ಹಾಕಿಸಬೇಕು, ಸರ್ಕಾರಿ ಶಾಲೆಯಲ್ಲಿ ವಿಧ್ಯಾಬ್ಯಾಸ ಮಾಡುವ ಮಕ್ಕಳಿಗೆ ಶೌಚಲಯ ನಿರ್ಮಾಣ ಆಗಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯ್ತಿ ಸದಸ್ಯ ಸೈಯದ್ ಅನ್ವರ್ ಮಾತಾನಾಡಿ 7ನೇ ವಾರ್ಡಿನ ಮೂಲಭೂತ ಸೌಕರ್ಯದಿಂದ ಬಹಳ ವಂಚಿತವಾಗಿದೆ,

ಅಧ್ಯಕ್ಷರು, ಉಪಾಧ್ಯಕ್ಷರು, ಪ್ರತಿ ವಾರ್ಡಿನಲ್ಲಿ ಏನು ಕೊರತೆ ಇದಿಯೂ ಎಂದು ಪ್ರತಿ ವಾರ್ಡಿಗಳಿಗೆ ಬೇಟಿ ನೀಡಬೇಕು. ಚರಂಡಿ ಸ್ವಚ್ಛತೆ ಇಲ್ಲ, ಕುಡಿಯುವ ನೀರಿಗೆ ಬಹಳ ತೊಂದರೆ ಆಗಿದೆ, ಆ ವಾರ್ಡಿನ ಜನರು ನಾವು ನಿಮ್ಮನ್ನೂ ಚುನಾವಣೆಯಲ್ಲಿ ಗೆಲ್ಲಿಸಿದ್ದೇವೆ, ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಡಿ ಎಂದು ಪ್ರತಿದಿನ ಜನಗಳು ನಮ್ಮ ಮನೆಗೆ ಬರುತ್ತಾರೆ ಅವರಿಗೆ ನಾನು ಏನು ಉತ್ತರ ಕೊಡಕೆ ಆಗತ್ತಿಲ್ಲ ಎಂದು ಬೇಸಾರ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಸುರೇಶ್ ಮಾತಾನಾಡಿ ನಾಯಕನಹಟ್ಟಿ ಪಟ್ಟಣದಲ್ಲಿ ಚಿತ್ರನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ನಿರ್ಮಿಸಿಬೇಕೆಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಓ ಶ್ರೀನಿವಾಸ ಅವರಿಗೆ ಮನವಿ ಸಲ್ಲಿಸಿದರು.
11ನೇ ವಾರ್ಡಿನ ಪಾಪಮ್ಮ ಮಾತಾಡಿ ಹೊರಮಠ ರಸ್ತೆಯಿಂದ ಅಂಗನವಾಡಿವರಿಗೆ ಸಿ.ಸಿ ರಸ್ತೆ ಹಾಗೂ ಗೌಡಗೆರೆ ತಿಪ್ಪೇಶ ಮನೆಯಿಂದ ಪೂಜಾರಿ ಮಹಾಂತೇಶ ಮನೆವರಿಗೆ ಚರಂಡಿ ಕಾಮಗಾರಿ ಪಂಪ್ ಹೌಸ್ ಗೇಟ್‌ನಿಂದ ವಿಧ್ಯಾವಿಕಾಸ ಶಾಲೆಯವರಿಗೂ ರಸ್ತೆ ಮತ್ತು ಚರಂಡಿ ನಿರ್ಮಿಸಬೇಕು. ನಮ್ಮ ವಾರ್ಡಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಅಭಾವ ಇರುವುದರಿಂದ ಕುಡಿಯುವ ನೀರಿನ ಮೊದನೇಯ ಆದ್ಯತೆ ನೀಡಿ ಎಂದು ಅವರು ಮಾತಾನಾಡಿದರು.

ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀಕಾಂತ್ ಮಾತಾನಾಡಿ ಪಟ್ಟಣದ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲು ಜಾಗ ಗುರುತಿಸಿದ್ದು, ಕೊಳಚೆ ನೀರು ನಿರ್ಮಾಣವಾಗುವ ಸ್ಥಳಕ್ಕೆ ಸರಗವಾಗಿ ಹೋಗಲೇ ಎಂದು ಚರಂಡಿ ಮತ್ತು ಹಳ್ಳದ ಜಾಗವನ್ನು ಅಭಿವೃದ್ಧಿಪಡಿಸಲು ಆಯ ವ್ಯಯದಲ್ಲಿ ಸೇರಿಸಬೇಕು ಎಂದು ಅವರು ಮಾತಾನಾಡಿದರು.
ನಾಯಕನಹಟ್ಟಿ ಪಾದಗಟ್ಟೆಯಿಂದ ಕೃಷಿ ಇಲಾಖೆವರಿಗೆ ಡಬಲ್ ರಸ್ತೆ, ಪಾದಗಟ್ಟೆಯಿಂದ ಕಾಳಿಕಾಂಭ ದೇವಸ್ತಾನ ಹತ್ತಿರ ಜಂಗಲ್ ತಗೆಸಬೇಕು, ಪಾದಗಟ್ಟೆ ಸುತ್ತಮುತ್ತ ಸಿ.ಸಿ ರಸ್ತೆ ನಿರ್ಮಾಣವಾಗಬೇಕೆಂದು ನಾಯಕನಹಟ್ಟಿ ಹೋಬಳಿಯ ಕರವೇ ಅಧ್ಯಕ್ಷ ಮುತ್ತಯ್ಯ ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತಿರಾದ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಮುಖ್ಯಾಧಿಕಾರಿ ಓ ಶ್ರೀನಿವಾಸ, ಸದಸ್ಯರಾದ ಟಿ. ಮಹೇಶ್ವರಿ, ಬಿ. ಗುರುಶಾಂತಮ್ಮ, ಡಿ ಸುನೀತಾ ಮುದಿಯಪ್ಪ, ಈರಮ್ಮ, ಸೈಯದ್ ಅನ್ವರ್, ಪಾಪಮ್ಮ, ವಿನುತಾ, ಎನ್ ಮಹಾಂತಣ್ಣ, ಜಿ.ಆರ್ ರವಿಕುಮಾರ್, ಪಿ ಓಬಯ್ಯ, ಅಬಕಾರಿ ತಿಪ್ಪೇಶ್, ಎಂ.ಟಿ ಮಂಜುನಾಥ, ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯರಾದ ಉಮಾಪತಿ, ಶ್ರೀಕಾಂತ್, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ, ಕರವೇ ಹೋಬಳಿ ಅಧ್ಯಕ್ಷ ಮುತ್ತಯ್ಯ, ಕರವೇ ಪ್ರಧಾನ ಕಾರ್ಯದರ್ಶಿ ಸುರೇಶ್ ಇತರರು ಇದ್ದರು.

About The Author

Namma Challakere Local News
error: Content is protected !!