ಜೆಡಿಎಸ್ ಕಾರ್ಯಕರ್ತರಿಂದ ನಾಯಕನಹಟ್ಟಿಯಲ್ಲಿ:ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರವರ 65ನೇ ವರ್ಷದ ಹುಟ್ಟುಹಬ್ಬ ಆಚರಣೆ.
ನಾಯಕನಹಟ್ಟಿ:: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರವರಿಗೆ ದೇವರು ಉತ್ತಮ ಆರೋಗ್ಯ ಕೊಟ್ಟು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗುವ ಭಾಗ್ಯ ದೇವರು ಕರುಣಿಸಲಿ ಎಂದು ಮೊಳಕಾಲ್ಮುರು ತಾಲೂಕು ಜೆಡಿಎಸ್ ಅಧ್ಯಕ್ಷ ಡಿ ಬಿ ಕರಿಬಸಪ್ಪ ಚೌಳಕೆರೆ ಹೇಳಿದ್ದಾರೆ.
ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ನಾಯಕನಹಟ್ಟಿ ಹೋಬಳಿಯ ಜೆಡಿಎಸ್ ಕಾರ್ಯಕರ್ತರಿಂದ ಆಯೋಜಿಸಿದ್ದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರವರ 65ನೇ ವರ್ಷದ ಹುಟ್ಟು ಹಬ್ಬದಲ್ಲಿ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ
ಮಾತನಾಡಿದ ಅವರು ಜೆಡಿಎಸ್ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರವರು ಹಿಂದೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ ಅವರು ಈಗ ಕೇಂದ್ರ ಸಚಿವರಾಗಿ ಇನ್ನೂ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿ ರಾಜ್ಯಕ್ಕೆ ಉತ್ತಮ ಯೋಜನೆಗಳನ್ನು ತರುವಂತಾಗಲಿ ಎಂದರು.
ಇನ್ನೂ ಜೆಡಿಎಸ್ ತಾಲೂಕು ಓಬಿಸಿ ಅಧ್ಯಕ್ಷ ಅಬ್ಬೇನಹಳ್ಳಿ ಚನ್ನಬಸಪ್ಪ ಮಾತನಾಡಿದರು ಕರ್ನಾಟಕ ಕಂದಂತ ಜನ ಮೆಚ್ಚಿದ ನಾಯಕ ಎಚ್ ಡಿ ಕುಮಾರಸ್ವಾಮಿ ರವರು 65ನೇ ವಸಂತ ಮಾಸಕ್ಕೆ ಕಾಲಿಟ್ಟಿದ್ದಾರೆ ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ಅಧಿಕಾರ ವೃದ್ಧಿಸಲಿ ಎಂದು ಶುಭ ಹಾರೈಸಿದರು.
ಇದೆ ವೇಳೆ ಮಹರ್ಷಿ ವಾಲ್ಮೀಕಿ ವಿದ್ಯೆ ಸಂಸ್ಥೆ ಪ್ರಾಚಾರ್ಯರಾದ ಬಿ ಪ್ರಕಾಶ್ ರೇಖಲಗೆರೆ ಮಾತನಾಡಿದರು ಎಚ್ ಡಿ ಕುಮಾರಸ್ವಾಮಿ ದೇಶದ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅವರ ಕೊಡುಗೆ ನೀಡುತ್ತಿದ್ದಾರೆ ಅವರಿಗೆ ಆರೋಗ್ಯಕರ ಜೀವನ ಸಿಗಲೆಂದು ನಾನು ಪ್ರಾರ್ಥಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಸೆಳ್ಳೆಗೌಡ, ಜೆಡಿಎಸ್ ಮುಖಂಡ ಕೆ.ಪಿ. ತಿಪ್ಪೇಸ್ವಾಮಿ ಮಾದಯ್ಯನಹಟ್ಟಿ ಮಲ್ಲೂರಹಳ್ಳಿ ತಿಪ್ಪಯ್ಯ, ಬಲ್ಲನಾಯಕನಹಟ್ಟಿ ಕಾಮಯ್ಯ,ಗುಂತಕೋಲಮ್ಮನಹಳ್ಳಿ ಪಾಲಯ್ಯ, ದಳವಾಯಿ, ಪ್ರಭು, ಇನ್ನೂ ಮುಂತಾದವರು ಉಪಸ್ಥಿತರಿದ್ದರು