ಚಿತ್ರದುರ್ಗದಲ್ಲಿ ಡಿ. 20ರಂದು ರೇಷ್ಮೆ ಕೃಷಿ ಮೇಳ ಎಲ್ಲಾ ರೈತ ಬಾಂಧವರು ರೇಷ್ಮೆ ಕೃಷಿ ಮೇಳದಲ್ಲಿ ಭಾಗವಹಿಸುವಂತೆ ಚಿತ್ರದುರ್ಗ ವಿಜ್ಞಾನಿ ಡಿ -ಸಿ ಎಸ್ ಬಿ- ಆರ್.ಇ.ಸಿ ಡಾ. ವೈ ಶ್ರೀನಿವಾಸಲು ಮನವಿ.
ನಾಯಕನಹಟ್ಟಿ::ಡಿ.15. ಚಿತ್ರದುರ್ಗದಲ್ಲಿ ಡಿ. 20ರಂದು ನಡೆಯಲಿರುವ ರೇಷ್ಮೆ ಕೃಷಿ ಮೇಳಕ್ಕೆ ಎಲ್ಲಾ ರೈತ ಬಾಂಧವರು ಭಾಗವಹಿಸುವಂತೆ ವಿಜ್ಞಾನಿ ಡಾ. ವೈ ಶ್ರೀನಿವಾಸಲು ಹೇಳಿದ್ದಾರೆ.
ಅವರು ಭಾನುವಾರ ಹೋಬಳಿಯ ಎನ್ ಮಹದೇವಪುರ ಗ್ರಾಮದಲ್ಲಿ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಕೃಷಿಮೇಳ ಆಹ್ವಾನ ಪತ್ರಿಕೆ ನೀಡಿ ಮಾತನಾಡಿದ ಅವರು ಡಿ. 20ರಂದು ಚಿತ್ರದುರ್ಗದ ಎಸ್ ಜಿ ಕಲ್ಯಾಣ ಮಂಟಪದಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ಹಾಗೂ ಕೃಷಿ ಇಲಾಖೆ, ರೇಷ್ಮೆ ಇಲಾಖೆ ಚಿತ್ರದುರ್ಗ ಸಹಯೋಗದಲ್ಲಿ ರೇಷ್ಮೆ ಕೃಷಿ ಮೇಳ ಆಯೋಜಿಸಲಾಗಿದೆ. ಈ ಒಂದು ರೇಷ್ಮೆ ಕೃಷಿ ಮೇಳದಲ್ಲಿ ವಿವಿಧ ಸ್ಟಾಲ್ ಎಕ್ಸಿಬಿಷನ್ ರೇಷ್ಮೆ ಬೆಳೆಗೆ ಬೇಕಾದಂತ ಸಲಕರಣೆ ರೋಗದ ಬಗ್ಗೆ ಮಾಹಿತಿ ರೇಷ್ಮೆ ಹುಳ ಸಾಕಾಣಿಕೆ ಎಲ್ಲ ಮಾಹಿತಿಯನ್ನು ಸ್ಟಾಲ್ ಮುಖಾಂತರ ಜಿಲ್ಲೆಯ ಎಲ್ಲಾ ರೇಷ್ಮೆ ಬೆಳೆಗಾರರಿಗೆ ಮಾಹಿತಿ ನೀಡಲಾಗುತ್ತದೆ ಅಂದು ಮಧ್ಯಾಹ್ನ ಟೆಕ್ನಿಕಲ್ ಸೆಷನ್ ಇರುತ್ತದೆ ಮೈಸೂರು ಸಂಸ್ಥೆಯ ರವರಿಂದ ಬರುವ ರೇಷ್ಮೆ ವಿಜ್ಞಾನಿಗಳ ಜೊತೆ ರೈತರು ನೇರವಾಗಿ ಮುಖಮುಖ ರೇಷ್ಮೆ ಬೆಳಗ್ಗೆ ಸಂಬಂಧಿಸಿದಂತೆ ಬಗ್ಗೆ ಚರ್ಚಿಸಬಹುದು ಆದ್ದರಿಂದ ಎಲ್ಲಾ ರೈತ ಬಾಂಧವರು ರೇಷ್ಮೆ ಕೃಷಿ ಮೇಳಕ್ಕೆ ರಾಜ್ಯದ ಬಳ್ಳಾರಿ ದಾವಣಗೆರೆ ಶಿವಮೊಗ್ಗ ಹಾವೇರಿ ಸೇರಿದಂತೆ ಸುಮಾರು 500 ರಿಂದ 600 ರೈತರು ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಚಳ್ಳಕೆರೆ ರೇಷ್ಮೆ ನಿರೀಕ್ಷಕರು ಡಿ.ಟಿ. ಬೋರಯ್ಯ, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ ನಾಗರಾಜ್, ದಾನವೇಂದ್ರೆ, ಎನ್. ಚಿನ್ನಯ್ಯ ಬಿ ಗೋವಿಂದರಾಜ್, ಡ್ರೈವರ್ ನಾರಾಯಣಸ್ವಾಮಿ, ಬಾಬು ಸ್ವಾಮಿ ,ಉಪಸ್ಥಿತರಿದ್ದರು