ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ದಿಂಡಿ ಉತ್ಸವ ಸಂಭ್ರಮ.
ನಾಯಕನಹಟ್ಟಿ:: ಮಲ್ಲೇಬೋರನಹಟ್ಟಿ ಐದನೇ ವರ್ಷದ ಶ್ರೀ ಪಾಂಡುರಂಗ ರುಕ್ಮಣಿ ದೇವರ ದಿಂಡಿ ಉತ್ಸವ ಶನಿವಾರ ಮತ್ತು ಭಾನುವಾರ ಅದ್ದೂರಿಯಾಗಿ ಜರುಗಿತು.
ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಸಂತ ಮಂಡಳಿಯ ಯುವಕರು ಪಾಂಡುರಂಗಸ್ವಾಮಿ ಭಕ್ತರು ಹಾಗೂ ಸದ್ಭಕ್ತರು ಇವರಿಂದ ಶ್ರೀ ಪಾಂಡುರಂಗ ರುಕ್ಮಿಣಿ ದೇವರ 5ನೇ ವರ್ಷದ ದಿಂಡಿ ಉತ್ಸವವನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಶನಿವಾರ ಸಂಜೆ 5:00ಗೆ ಸಮೀಪದ ಜಿನಿಗಿ ಹಳ್ಳದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು.
ಅಲ್ಲಿಂದ ಮಹಿಳೆಯರು ಕುಂಭಮೇಳದೊಂದಿಗೆ ವಿವಿಧ ಭಜನಾ ತಂಡಗಳೊಂದಿಗೆ ಶ್ರೀ ಪಾಂಡುರಂಗ ರುಕ್ಮಿಣಿ ದೇವಿಯ ನಾಮ ಸ್ಮರಣೆ ಮಾಡುತ್ತಾ ಅದ್ದೂರಿಯಾಗಿ ಗ್ರಾಮಕ್ಕೆ ಪ್ರವೇಶಿಸಿದರು ನಂತರ ಗ್ರಾಮದ ಶ್ರೀ ಮಾರಿಕಾಂಬ ದುರ್ಗಾಂಬಿಕ ದೇವಸ್ಥಾನ ಮುಂಭಾಗದಲ್ಲಿ ಶ್ರೀ ಪಾಂಡುರಂಗ ಸ್ವಾಮಿ ರುಕ್ಮಿಣಿ ಮೂರ್ತಿಗಳಿಗೆ ಅಭಿಷೇಕ ವಿಶೇಷ ಅಲಂಕಾರ ಪೂಜೆ ಕಾಕಡಾರತಿ ನೆರವೇರಿಸಿ ನಂತರ ನಿವೃತ್ತ ಶಿಕ್ಷಕ ಹಾಗೂ ಶ್ರೀ ಪಾಂಡುರಂಗ ಸ್ವಾಮಿ ದೇವಸ್ಥಾನದ ಅಧ್ಯಕ್ಷರು ಕಲ್ಲೆದೇವರಪುರ ಕಿಲಾರಿ ಕೃಷ್ಣಮೂರ್ತಿ ರವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು ತದನಂತರ ಭಜನಾ ಕಾರ್ಯಕ್ರಮ ಕೀಲು ಕುದುರೆ ನೃತ್ಯ ನಿತ್ಯ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನಡೆಯಿತು.
ಇದೇ ವೇಳೆ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಬಿ. ಶಂಕರ ಸ್ವಾಮಿ ಮಾತನಾಡಿದರು ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಶ್ರೀ ಪಾಂಡುರಂಗ ಸ್ವಾಮಿ ದಿಂಡಿ ಉತ್ಸವ ಆಚರಣೆ ಮಾಡುತ್ತೇವೆ ಗ್ರಾಮದಲ್ಲಿ ಜನ ಜಾನುವಾರುಗಳಿಗೆ ಯಾವುದೇ ರೋಗರು ಜನೆ ಬಾರದಂತೆ ಈ ಉತ್ಸವವನ್ನು ಸಂಭ್ರಮ ಸ್ಥಳದ ದಿಂದ ಸಮಸ್ತ ಊರಿನ ಗ್ರಾಮಸ್ಥರು ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಕಳೆದ ನಾಲ್ಕು ವರ್ಷ ಮಹಾಮಾರಿ ಕೊರೋನದಿಂದ ಈ ಆಚರಣೆಯನ್ನು ಮುಂದೂಡಲಾಗಿತ್ತು ಈ ದಿನ ಐದನೇ ವರ್ಷದ ದಿಂಡಿ ಉತ್ಸವವನ್ನು ಗ್ರಾಮದ 54 ಜನ ಪಾಂಡುರಂಗ ಸ್ವಾಮಿ ಭಕ್ತರ ಹಾಗೂ ವಿವಿಧ ಜಿಲ್ಲೆಗಳ ಮತ್ತು ವಿವಿಧ ಹಳ್ಳಿಗಳ ಭಕ್ತಾದಿಗಳು ಆಚರಣೆ ಮಾಡಲಾಗಿದೆ ಎಂದರು.
ಶ್ರೀ ಪಾಂಡುರಂಗ ಸ್ವಾಮಿಯ ಗ್ರಾಮದ ಭಕ್ತ ತಿಪ್ಪೇಸ್ವಾಮಿ ಮಾತನಾಡಿದರು ಗ್ರಾಮದಲ್ಲಿ ಉತ್ತಮ ಮಳೆ ಬೆಳೆ ಆದ ಕಾರಣ ಈ ಬಾರಿ ದಿಂಡಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ ಶನಿವಾರ ಸಂಜೆ 5:00 ಗಂಟೆಗೆ ಗಂಗಾ ಪೂಜೆ ನೆರವೇರಿಸಿ ನಂತರ ರಾತ್ರಿ 8.30 ಕ್ಕೆ ಕಾಕಡಾರತಿ ಭಜನಾ ಕಾರ್ಯಕ್ರಮ ಮತ್ತು ಮಹಾ ಮಂಗಳಾರತಿ ನೆರವೇರುತ್ತದೆ ಭಾನುವಾರ ಬೆಳಿಗ್ಗೆ ಮಹಾ ಮಂಗಳಾರತಿ ನಂತರ ಗ್ರಾಮದ ಪ್ರದರ್ಶನ ಮತ್ತು ಅನ್ನಸಂತರ್ಪಣೆ ನೆರವೇರಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಲ್ಲೇಬೋರನಹಟ್ಟಿ ಗ್ರಾಮಸ್ಥರು ಮತ್ತು ಸಂತ ಮಂಡಳಿ ಯುವಕರು ಶ್ರೀ ಪಾಂಡುರಂಗ ಸ್ವಾಮಿ ಭಕ್ತರು ಸದ್ಭಕ್ತರು ಉಪಸ್ಥಿತರಿದ್ದರು