ಒಳ ಮೀಸಲಾತಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾದಿಗರಿಗೆ 30 ವರ್ಷ ಮೋಸ ಮಾಡುತ್ತ ಬಂದಿದ್ದಾರೆ.
ನಿವೃತ್ತ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಬೇಸರವನ್ನು ವ್ಯಕ್ತಪಡಿಸಿದರು .
ತಳಕು:: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನಮ್ಮ ಮಾದಿಗ ಸಮುದಾಯದ ಮಂತ್ರಿಗಳು ಮತ್ತು ಶಾಸಕರು ಒಳ ಮೀಸಲಾತಿಯ ಬಗ್ಗೆ ಧ್ವನಿ ಎತ್ತಿ ಎಂದು ನಿವೃತ್ತ ತಾಸಿಲ್ದಾರ್ ಎಂ.ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.
ಅವರು ಬುಧವಾರ ತಳಕು ಗ್ರಾಮದ ಗ್ರಂಥಾಲಯದಲ್ಲಿ ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ಮಾದಿಗ ಸಮುದಾಯದ ಮುಖಂಡರುಗಳು ಏರ್ಪಡಿಸಿದ್ದ ಒಳ ಮೀಸಲಾತಿಗಾಗಿ ಸರ್ಕಾರಕ್ಕೆ ಒತ್ತಡ ತರುವಂತೆ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಮಾದಿಗ ಸಮುದಾಯದ ಮಂತ್ರಿಗಳು ಮತ್ತು ಶಾಸಕರು ಅನೇಕ ಬಾರಿ ಅಧಿಕಾರವನ್ನು ಸ್ವೀಕರಿಸಿದ್ದಾರೆ ಆದರೆ ಒಳ ಮೀಸಲಾತಿಗಾಗಿ ಸಮುದಾಯದ ಏಳಿಗೆಗಾಗಿ ಯಾವತ್ತು ಧ್ವನಿಯೆತ್ತಿಲ್ಲ ನೀವು ಅಧಿಕಾರ ವಹಿಸುವಂತಹ ಸರ್ಕಾರಗಳೇ ನಮ್ಮ ಸಮುದಾಯಕ್ಕೆ ನ್ಯಾಯ ಸಿಗದೇ ಇರುವಾಗ ರಾಜೀನಾಮೆ ಕೊಟ್ಟು ಬರಬೇಕೆಂದು ಕಠೋರವಾಗಿ ಆಕ್ರೋಶವನ್ನು ಹೊರಹಾಕಿದರು.
ಆದ್ದರಿಂದ ಡಿಸೆಂಬರ್ 19 ರಂದು ತಳಕು ಮತ್ತು ನಾಯಕನಹಟ್ಟಿ ಭಾಗದ ಮಾದಿಗ ಸಮುದಾಯದ ಮುಖಂಡರುಗಳು ಮತ್ತು ಸಮುದಾಯದವರಿಂದ ಒಳ ಮೀಸಲಾತಿಗಾಗಿ ಸರ್ಕಾರಕ್ಕೆ ಒತ್ತಡ ತರಲು ಪ್ರತಿಭಟಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಿದರು.
ಇದೆ ವೇಳೆ ದಲಿತ ಮುಖಂಡ ಆರ್ ಬಸಪ್ಪ ಮಾತನಾಡಿದರು ಒಳ ಮೀಸಲಾತಿ ಜಾರಿಯ ಆದರೆ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಸರ್ಕಾರಕ್ಕೆ ಒತ್ತಡ ತರಲು ಡಿಸೆಂಬರ್ 19 ರಂದು ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಪ್ರತಿಯೊಬ್ಬರು ತಳಕು ಮತ್ತು ನಾಯಕನಹಟ್ಟಿ ಭಾಗದ ಮಾದಿಗ ಸಮುದಾಯದ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿಯನ್ನು ಮಾಡಿದರು
ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ಆರ್ ಬಸಪ್ಪ, ಪಟ್ಟಣ ಪಂಚಾಯತಿ ಸದಸ್ಯ ಎಂ.ಟಿ ಮಂಜುನಾಥ್, ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಬಿ ಶಂಕರಸ್ವಾಮಿ, ಅಬ್ಬೇನಹಳ್ಳಿ ಎಲ್ಐಸಿ ನಾಗರಾಜ್, ಎನ್ ದೇವರಹಳ್ಳಿ ರಾಜಣ್ಣ, ಎನ್ ಮಹದೇವಪುರ ಗ್ರಾಮ ಪಂಚಾಯತಿ ಸದಸ್ಯ ಎಂ. ಓಬಳೇಶಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ಬಂಜಿಗೆರೆ ವೆಂಕಟೇಶ್, ಹಿರೇಹಳ್ಳಿ ಎಂ.ದುರಗೇಶ್, ರಾಜಣ್ಣ ರುದ್ರಮುನಿ ಭೀಮನಕೆರೆ ನಿಂಗರಾಜ್, ಚಿಕ್ಕಮ್ಮನಹಳ್ಳಿ ತಿಪ್ಪೇಸ್ವಾಮಿ, ಮಲ್ಲೂರಹಟ್ಟಿ ಬಸವರಾಜ್, ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ, ಹನುಮಂತನಹಳ್ಳಿ ಚಂದ್ರಯ್ಯ, ಮಾರಪ್ಪ, ಸೇರಿದಂತೆ ನಾಯಕನಹಟ್ಟಿ ಮತ್ತು ತಳಕು ಭಾಗದ ಇನ್ನು ಮಾದಿಗ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು